ಅಂಗಡಿಯಲ್ಲಿ ಮಾರಾಟ ಮಾಡಲಾಗುತ್ತಿರುವ ಈ ಪ್ಲಾಸ್ಟಿಕ್ ಅಕ್ಕಿ ತಿಂದರೆ ಅಪಾಯ ತಪ್ಪಿದ್ದಲ್ಲ.

ಪ್ಲಾಸ್ಟಿಕ್ ಒಂದು ಜೈವಿಕ ವಿಘಟನೀಯವಲ್ಲದ, ಜೀರ್ಣವಾಗದ ವಸ್ತುವಾಗಿದೆ

ಇದು ನಮ್ಮ ದೇಹದೊಳಗೆ ಸೇರಿಕೊಂಡರೆ ಏನಾಗುತ್ತದೆ ಎಂದು ಊಹಿಸಲು ಅಸಾಧ್ಯ

ಇತ್ತೀಚೆಗೆ ಎಲ್ಲೆಡೆ ಪ್ಲಾಸ್ಟಿಕ್ ಅಕ್ಕಿಯದ್ದೇ ಸದ್ದು. ದೇಶದ ವಿವಿಧೆಡೆ ಪ್ಲಾಸ್ಟಿಕ್ ಅಕ್ಕಿ ಮಾರಾಟವಾಗುತ್ತಿರುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ

ಹಾಗಾಗಿ ಪ್ಲಾಸ್ಟಿಕ್ ಅಕ್ಕಿ ತಿಂದರೆ ಆರೋಗ್ಯವಂತರೂ ಅನಾರೋಗ್ಯಕ್ಕೆ ಒಳಗಾಗುವುದರಲ್ಲಿ ಸಂಶಯವಿಲ್ಲ

Tej-Lavanya Tripathi: ಇಟಲಿಯಲ್ಲಿ ಅದ್ಧೂರಿ ಮದುವೆಯಾದ ಲಾವಣ್ಯ ತ್ರಿಪಾಠಿ ಸೀರೆ ಬೆಲೆ ಎಷ್ಟು ಗೊತ್ತಾ?

 ಹಾಗಾದ್ರೆ ನೋಡಲು ನೈಜವಾಗಿ ಕಾಣುವ ಈ ಪ್ಲಾಸ್ಟಿಕ್ ಅಕ್ಕಿಯನ್ನು ಗುರುತಿಸುವ ಸರಳ ವಿಧಾನಗಳು ಇಲ್ಲಿವೆ ನೋಡಿ. ಪ್ಲಾಸ್ಟಿಕ್ ಅಕ್ಕಿಯನ್ನು ಬೇಯಿಸುವಾಗ ಸುಲಭವಾಗಿ ಗುರುತಿಸಬಹುದು

ಅದು ಹೇಗೆಂದರೆ ಅಕ್ಕಿಯು ಪ್ಲಾಸ್ಟಿಕ್'ನದ್ದಾಗಿದ್ದರೆ ಬೇಯಿಸುವ ಸಂದರ್ಭದಲ್ಲಿ ಪಾತ್ರೆಯ ಸುತ್ತ ದಪ್ಪವಾದ ಪದರ ಏರ್ಪಡುತ್ತದೆ

ಸ್ವಲ್ಪ ಬೇಯಿಸದ ಅಕ್ಕಿಯನ್ನು ಒಂದು ಪಾತ್ರೆಯಲ್ಲಿ ಹಾಕಿ ನೀರು ಸೇರಿಸಿ. ಎಂದಿನಂತೆ ಅನ್ನವನ್ನು ಕುದಿಸಿ

ಬೇಯಿಸಿದಾಗ ನಿಜವಾದ ಅಕ್ಕಿ ಮೃದುವಾಗುತ್ತದೆ ಮತ್ತು ಆಹ್ಲಾದಕರ ಸುವಾಸನೆಯನ್ನು ನೀಡುತ್ತದೆ. ಆದರೆ ಪ್ಲಾಸ್ಟಿಕ್ ಅಕ್ಕಿ ದೀರ್ಘಕಾಲದವರೆಗೆ ಕುದಿಸಿದರೂ ಗಟ್ಟಿಯಾಗಿರುತ್ತದೆ

ಭಾರತೀಯ ನೊಬೆಲ್ ಪ್ರಶಸ್ತಿ ವಿಜೇತರ ಹೆಸರನ್ನು ತಮ್ಮ ಮಗನಿಗೆ ಇಟ್ಟಿದ್ದಾರಂತೆ ಮಸ್ಕ್!

ಇದು ಸಾಮಾನ್ಯ ರಾಸಾಯನಿಕ ವಾಸನೆಯನ್ನು ಸಹ ಹೊರಸೂಸುತ್ತದೆ

ಸ್ವಲ್ಪ ಅಕ್ಕಿ ತೆಗೆದುಕೊಂಡು ಅದರ ಮೇಲೆ ಬಿಸಿಯಾದ ಎಣ್ಣೆಯನ್ನು ಹಾಕಿ. ಒಂದು ವೇಳೆ ಅಕ್ಕಿ ಪ್ಲಾಸ್ಟಿಕ್'ನದ್ದಾಗಿದ್ದರೆ ಬಿಸಿ ಎಣ್ಣೆ ಹಾಕುತ್ತಿದ್ದಂತೆಯೇ ಕರಗಲಾರಂಭಿಸುತ್ತದೆ

ಬೇಯಿಸಿದ ಅಕ್ಕಿಯನ್ನು 2-3 ದಿನಗಳ ಕಾಲ ಬಾಟಲ್ ಒಂದರಲ್ಲಿ ಹಾಕಿ ಮುಚ್ಚಿಡಿ. ಒಂದು ವೇಳೆ ಬಾಟಲ್'ನಲ್ಲಿ ಹಾಕಿಟ್ಟ ಅಕ್ಕಿಗೆ ಪಂಗಸ್ ತಗುಲಿರದಿದ್ದರೆ ಅದು ಪ್ಲಾಸ್ಟಿಕ್ ಅಕ್ಕಿ ಆಗಿರುತ್ತದೆ

ವಿಶ್ವಕಪ್‌ನಿಂದ ಹಾರ್ದಿಕ್‌ ರೂಲ್ಡ್‌ ಔಟ್‌, ಬಿಸಿಸಿಐ ಅಧಿಕೃತ ಘೋಷಣೆ!