ಬಾಲಿವುಡ್ ನ ಸ್ಟಾರ್ ನಟಿಯರು ಹಳದಿ ಬಣ್ಣದ ಸೀರೆ ಉಟ್ಟು ಮೋಡಿ ಮಾಡಿದ್ದಾರೆ. ಯೆಲ್ಲೊ ಕಲರ್ ನಲ್ಲಿ ಹೇಗೆ ಕಾಣಿಸ್ತಾರೆ ನೋಡಿ

ಶ್ರದ್ಧಾ ಕಪೂರ್, ಆಲಿಯಾ, ಅನುಷ್ಕಾ ಶರ್ಮಾ ಸೇರಿದಂತೆ ಟಾಪ್ ನಟಿಯರ ಯೆಲ್ಲೋ ಸೀರೆ ಲುಕ್ ನೋಡಿ ನೀ ಜಿಂಕೆ ಮರೀನಾ ಅಂತ ಹಾಡ್ತಿದ್ದಾರೆ ಪಡ್ಡೆ ಹುಡುಗರು

ಸಾರಾ ಅಲಿ ಖಾನ್ ಅವರು ಆಕರ್ಷಕವಾದ ಗೋಲ್ಡನ್ ಬಾರ್ಡರ್ ಇದ್ದಂತಹ ಹಳದಿ ಸೀರೆ ಉಟ್ಟಿದ್ದರು. ನಟಿ ತಮ್ಮ ಸಿನಿಮಾ ಒಂದರ ಪ್ರಮೋಷನ್ ಸಂದರ್ಭ ಈ ಸೀರೆ ಉಟ್ಟಿದ್ದರು. ಈ ಸೀರೆಯಲ್ಲಿ ಸಾರಾ ಸೌಂದರ್ಯ ರಾಣಿಯಾಗಿ ಕಾಣಿಸಿದ್ದಾರೆ.

ಶ್ರೀದೇವಿ ಮಗಳು ಜಾನ್ವಿ ಕಪೂರ್ ಕೂಡಾ ಸ್ಲೀವ್ಲೆಸ್ ಬ್ಲೌಸ್ ಹಾಗೂ ಹಳದಿ ಬಣ್ಣದ ಸೀರೆಯಲ್ಲಿ ಮುದ್ದಾಗಿ ಕಾಣಿಸಿದ್ದಾರೆ. ಸದ್ಯ ಈ ಬಾಲಿವುಡ್ ಬ್ಯೂಟಿ ದೇವರ ಸಿನಿಮಾ ಮೂಲಕ ಸೌತ್​ಗೆ ಎಂಟ್ರಿ ಕೊಡುತ್ತಿದ್ದಾರೆ.

ಕಿಯಾರಾ ಅಡ್ವಾನಿ ಸೀರೆಯಲ್ಲಿ ತುಂಬಾ ಕ್ಯೂಟ್ ಕಾಣಿಸಿದ್ದಾರೆ. ಸ್ಟ್ರೈಪ್ಡ್ ಸ್ಲೀವ್ಸ್ ಇರುವ ಬ್ಲೌಸ್ ಹಾಗೂ ತೆಳುವಾದ ಸೀರೆಯಲ್ಲಿ ಮಿಸಸ್ ಸಿದ್ಧಾರ್ಥ್ ಮಲ್ಹೋತ್ರಾ ಬ್ಯೂಟಿಯಾಗಿ ಕಾಣಿಸಿದ್ದಾರೆ.

ಕಿಂಗ್ ಕೊಹ್ಲಿ ಅವರ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ಫ್ಲೋರಲ್ ಬ್ಲೌಸ್ ಹಾಗೂ ಪ್ಲೈನ್ ಹಳದಿ ಸೀರೆಯಲ್ಲಿ ಮುದ್ದಾಗಿ ಕಾಣಿಸಿದ್ದಾರೆ. ಹಸಿರು ಬಣ್ಣದ ಬ್ಯಾಗ್ರೌಂಡ್ ಅವರ ಸೌಂದರ್ಯ ಹೆಚ್ಚಿಸಿದೆ.

ನಟಿ ಶ್ರದ್ಧಾ ಕಪೂರ್ ಅವರು ಡಿಫರೆಂಟ್ ಡಿಸೈನ್​ನ ಹಳದಿ ಬ್ಲೌಸ್ ಹಾಗೂ ಹಳದಿ ಸೀರೆ ಉಟ್ಟು ಮ್ಯಾಚಿಂಗ್ ಬಳೆಯನ್ನೂ ಧರಿಸಿದ್ದಾರೆ. ಇದರಲ್ಲಂತೂ ನಟಿಯ ಲುಕ್ ಹಾಟ್ ಆಗಿದೆ ಎಂದಿದ್ದಾರೆ ಫ್ಯಾನ್ಸ್.

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದ ಆಲಿಯಾ ಭಟ್ ಸ್ಲೀವ್ಲೆಸ್ ಬ್ಲೌಸ್ ಹಾಗೂ ಹಳದಿ ಬಣ್ಣದ ಸೀರೆ ಉಟ್ಟು ಕ್ಯೂಟ್ ಕಾಣಿಸಿದ್ದಾರೆ. ಪುಟ್ಟ ಬಿಂದಿ ಅವರ ಸೀರೆ ಲುಕ್ ಕಂಪ್ಲೀಟ್ ಮಾಡಿದೆ

ನಟಿ ಕತ್ರೀನಾ ಕೈಫ್ ಅವರೂ ಎಲ್ಲ ನಟಿಯರಂತೆ ಹಳದಿ ಸೀರೆ ಉಟ್ಟು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಟ್ರೆಡಿಷನಲ್ ಲುಕ್​ನಲ್ಲಿ ಈ ನಟಿ ತುಂಬಾ ಆಕರ್ಷಕವಾಗಿ ಕಾಣಿಸಿದ್ದಾರೆ

Rajinikanth: ತಲೈವಾಗೆ ದೇವಸ್ಥಾನ ಕಟ್ಟಿದ ಫ್ಯಾನ್ಸ್​! ರಜನಿಕಾಂತ್ ಪ್ರತಿಮೆಗೆ ನಿತ್ಯ ಹಾಲಿನ ಅಭಿಷೇಕ, ವಿಶೇಷ ಪೂಜೆ

Jaggesh: ತಾತನ ಸಮಾಧಿ ಮುಂದೆ ಜಗ್ಗೇಶ್​ಗೆ ನೆನಪಾಗಿದ್ದೇನು?