ರಾಜ್ಯದಲ್ಲಿನ ವಾಹನಗಳಿಗೆ HSRP ಹಾಕಿಸಲು ಇದೇ ನವೆಂಬರ್ 17 ಕೊನೆಯ ದಿನವಾಗಿತ್ತು

 ಇನ್ನು ಕೆಲವೇ ಕೆಲವು ದಿನ ಬಾಕಿಯಿದೆ, ಆದ್ರೆ ಇನ್ನೂ HSRP ನಂಬರ್ ಪ್ಲೇಟ್ ಹಾಕಿಸಿಲ್ಲ ಎಂದು ಯೋಚನೆ ಮಾಡುತ್ತಿದ್ದೀರಾ? ತಲೆಬಿಸಿ ಬೇಡ, ಈ ಸುದ್ದಿ ಓದಿ

ನವೆಂಬರ್ 17 ಬದಲಿಗೆ ಫೆಬ್ರವರಿ 17ರವರೆಗೂ ವಾಹನಗಳಿಗೆ HSRP ನಂಬರ್ ಪ್ಲೇಟ್‌ ಅಳವಡಿಸಲು ಸಮಯಾವಕಾಶ ನೀಡುವ ಕುರಿತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಹತ್ವದ ಘೋಷಣೆ ಮಾಡಿದ್ದಾರೆ

ಅಧಿಕೃತ ಗೆಜೆಟ್ ನೋಟಿಫಿಕೇಶನ್‌ ಈ ಕುರಿತು ಅಧಿಕೃತ ಗೆಜೆಟ್‌ ನೋಟಿಫಿಕೇಶನ್ ಸದ್ಯವೇ ಬಿಡುಗಡೆಯಾಗಲಿದ್ದು, ವಾಹನಗಳ ಮಾಲೀಕರು ತಲೆಬಿಸಿ ಬಿಟ್ಟು ಹೊಸ ನಂಬರ್ ಪ್ಲೇಟ್ ಮಾಡಿಸಿಕೊಳ್ಳಬಹುದಾಗಿದೆ

ಏಪ್ರಿಲ್ 1, 2019ಕ್ಕೂ ಮುನ್ನ ನೋಂದಣಿ ಆಗಿದ್ದರೆ ತಡ ಮಾಡಬೇಡಿ

ನಿಮ್ಮ ವಾಹನ ಏಪ್ರಿಲ್ 1, 2019ಕ್ಕೂ ಮುನ್ನ ನೋಂದಣಿ ಆಗಿದೆಯೇ? ಹಾಗಿದ್ದರೆ ಕರ್ನಾಟಕ ಸಾರಿಗೆಯ ಸುದ್ದಿ ನಿಮಗೆಂದೇ ಇಲ್ಲಿದೆ

HSRP ನಂಬರ್ ಪ್ಲೇಟ್ ಅಳವಡಿಕೆ ಮಾಡದಿದ್ದಲ್ಲಿ 500ರೂ.ವಿನಿಂದ 1 ಸಾವಿರ ರೂ.ವರೆಗೂ ದಂಡ ವಿಧಿಸುವ ಸಾಧ್ಯತೆ ಇದೆ ಎಂದು ಸೂಚನೆಯಲ್ಲಿ ತಿಳಿಸಲಾಗಿದೆ

ಒಂದು ಅಂದಾಜಿನ ಪ್ರಕಾರ ಸುಮಾರು 1.75 ಕೋಟಿಯಿಂದ 2 ಕೋಟಿ ವಾಹನಗಳಿಗೆ ಏಪ್ರಿಲ್ 1, 2019ಕ್ಕೂ ಮುನ್ನ ನೋಂದಣಿಯಾಗಿದೆ

ಏನಿದು HSRP ನಂಬರ್ ಪ್ಲೇಟ್? ಏನಿದು HSRP ನಂಬರ್ ಪ್ಲೇಟ್ ಎಂದು ನೋಡೋದಾದ್ರೆ, ಇದು ನಿಮ್ಮ ವಾಹನಕ್ಕೆ ಶಾಶ್ವತ ಗುರುತಿನ ನಂಬರ್ ಒದಗಿಸುತ್ತದೆ

ಇದು ರಸ್ತೆಯಲ್ಲಿ ವಾಹನ ಸಂಚರಿಸುವಾಗಲೇ ವಾಹನವನ್ನು ಗುರುತಿಸಲು ಸಹಕರಿಸುತ್ತದೆ

HSRP ನಂಬರ್‌ ಪ್ಲೇಟ್‌ಗಳಲ್ಲಿ ಲೇಸರ್ ತಂತ್ರಜ್ಷಾನದ ಅಳವಡಿಕೆ ಮಾಡಲಾಗುತ್ತದೆ. ಇದರಿಂದ ವಾಹನ ಕಳುವಾದಲ್ಲಿ ಪತ್ತೆಗೆ ಸಹಕಾರಿಯಾಗುತ್ತದೆ

4 ಚಕ್ರದ ವಾಹನಗಳಿಗೆ 400 ರೂ.ವಿನಿಂದ 500 ರೂ. ನೀಡಿ ಈ ನಂಬರ್ ಪ್ಲೇಟ್ ಅಳವಡಿಸಬಹುದಾಗಿದೆ. ಇನ್ನು ದ್ವಿಚಕ್ರ ವಾಹನಗಳಿಗೆ 250 ರೂ.ವಿನಿಂದ 300 ರೂ.ಗೆ ಈ ನಂಬರ್ ಪ್ಲೇಟ್ ಅಳವಡಿಸಬಹುದಾಗಿದೆ

Interesting Fact: ನೀರಿನ ಮೇಲೆ ನಡೆದುಕೊಂಡೇ ಓಡಾಡಬಲ್ಲ ಪಕ್ಷಿ ಇದು