ಡೀಪ್‌ಫೇಕ್‌ಗೆ ಹೆದರಬೇಡಿ, ಬೆಂಗಳೂರು ಪೊಲೀಸರಿಂದ ಸಹಾಯವಾಣಿ ಆರಂಭ

ಡೀಪ್‌ಫೇಕ್ ಬೆದರಿಕೆಗಳನ್ನು ಎದುರಿಸಲು ಬೆಂಗಳೂರು ಪೊಲೀಸರು ಸಹಾಯವಾಣಿ ಸಂಖ್ಯೆಯನ್ನು ಆರಂಭಿಸಿದ್ದಾರೆ.

ಡೀಪ್‌ಫೇಕ್ ಪ್ರಕರಣಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಕೈಗೊಂಡಿದ್ದಾರೆ.

ಡೀಪ್‌ಫೇಕ್‌ಗೆ ಬಲಿಯಾಗಿದ್ದರೆ 1930 ಸಂಖ್ಯೆಯ ಮೂಲಕ ಬೆಂಗಳೂರು ನಗರ ಪೊಲೀಸರನ್ನು ಸಂಪರ್ಕಿಸಿ.

ಡೀಪ್‌ಫೇಕ್ ತಂತ್ರಜ್ಞಾನವನ್ನು ವಿವಿಧ ಉದ್ದೇಶಗಳಿಗಾಗಿ ಬಳಸಬಹುದು.

ಯಾರಿಗೂ ಸಮಸ್ಯೆ ತರದಂತಹ ಮನರಂಜನೆ ಮತ್ತು ಕಲಾತ್ಮಕ ವಿಷಯಗಳಲ್ಲಿ ಇದನ್ನು ಸಕಾರಾತ್ಮಕವಾಗಿ ಬಳಸಬಹುದಾಗಿದೆ.

ನಕಲಿ ವಿಷಯವನ್ನು ರಚಿಸುವುದು ಡೀಪ್‌ಫೇಕ್‌ನಿಂದ ನಕಾರಾತ್ಮಕ ಸಮಸ್ಯೆ ತರಬಹುದಾದ ಆಯಾಮಗಳು.

ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್​ಫೇಕ್ ವಿಡಿಯೋ ವೈರಲ್ ಆಗಿತ್ತು.

ಈಗ ಬಾಲಿವುಡ್ ನಟಿ ಕಾಜೊಲ್ ಅವರ ಡೀಪ್ ಫೇಕ್ ವಿಡಿಯೋ ವೈರಲ್ ಆಗಿ ಶಾಕ್ ಕೊಟ್ಟಿದೆ.

ಸೆಲೆಬ್ರಿಟಿಗಳು ಟಾರ್ಗೆಟ್ ಆಗುತ್ತಿದ್ದಾರಾ ಎನ್ನುವ ಚರ್ಚೆ ಆನ್ ಲೈನ್ ಮಾಧ್ಯಮಗಳಲ್ಲಿ ಜೋರಾಗಿದೆ.