ರಾಗಿಣಿ ದ್ವಿವೇದಿ ಸದ್ಯ ವೈಷ್ಣೋದೇವಿ ಮಂದಿರಕ್ಕೆ ಹೋಗಿದ್ದಾರೆ. ತಂದೆ-ತಾಯಿ ಜೊತೆಗೆ ತಾಯಿ ದರ್ಶನ ಪಡೆದಿದ್ದಾರೆ

ಒಂದಷ್ಟು ಫೋಟೋ ಹಂಚಿಕೊಂಡು ಅಲ್ಲಿಯ ಅನುಭವವನ್ನೂ ಬರೆದುಕೊಂಡಿದ್ದಾರೆ. ಅದರ ವಿವರ ಇಲ್ಲಿದೆ ಓದಿ

ರಾಗಿಣಿ ದ್ವಿವೇದಿ ಸದ್ಯ ವೈಷ್ಣೋದೇವಿ ಮಂದಿರದಲ್ಲಿಯೇ ಇದ್ದಾರೆ. ಅಪ್ಪ-ಅಮ್ಮ ಹೀಗೆ ಮನೆಯ ಮಂದಿ ಇಲ್ಲಿಗೆ ಬಂದಿದ್ದಾರೆ

ಮಂದಿರಕ್ಕೆ ಪ್ರತಿ ವರ್ಷ ಬರ್ತಾನೇ ಇರ್ತಾರೆ. ವಿಶೇಷ ಪೂಜೆ ಮಾಡಿಸೋ ಮೂಲಕ ಎಂದಿನಂತೆ ಒಂದಷ್ಟು ಫೋಟೋಗಳನ್ನ ತೆಗೆದುಕೊಂಡು ಖುಷಿಪಟ್ಟಿದ್ದಾರೆ

ಗಂಡನ ಜೊತೆಗೆ ಆ್ಯಕ್ಷನ್ ಮೂವಿ ಮಾಡ್ಬೇಕು ಎಂದ ಕತ್ರೀನಾ

ವೈಷ್ಣೋದೇವಿ ಮಂದಿರಕ್ಕೆ ಹೋಗಿರೋ ರಾಗಿಣಿ ದ್ವಿವೇದಿ ತಮ್ಮ ಈ ಒಂದು ಅನುಭವದ ಬಗ್ಗೆ ಬರೆದುಕೊಂಡಿದ್ದಾರೆ. ಕೆಲವೇ ಕೆಲವು ಫೋಟೋಗಳಲ್ಲಿ ಇಲ್ಲಿಯ ನಿಸರ್ಗ ಸೌಂದರ್ಯವನ್ನ ಸೆರೆ ಹಿಡಿಯೋಕೆ ಆಗೋದಿಲ್ಲ

 ಇಲ್ಲಿ ಬಂದು ಅದನ್ನ ನೋಡಿದಾಗ ಸಿಗೋ ಆನಂದ ಬೇರೆ ಅನ್ನುವುದನ್ನ ಹೇಳಿಕೊಂಡಿದ್ದಾರೆ

ವೈಷ್ಣೋದೇವಿ ಮಂದಿರದ ಆವರಣದಲ್ಲಿ ತಾಯಿಗೆ ರಾಗಿಣಿ ಕೈ ಮುಗಿದು ಧನ್ಯರಾಗಿದ್ದಾರೆ. ಆ ಕ್ಷಣದ ಈ ಒಂದು ಫೋಟೋ ಕೂಡ ಸುಂದರವಾಗಿಯೇ ಇಲ್ಲಿ ಕಾಣಿಸುತ್ತದೆ

ಜೊತೆಗೆ ಇಲ್ಲಿಯ ಒಂದು ನಾಯಿಯ ಜೊತೆಗೂ ರಾಗಿಣಿ ತುಂಬಾನೆ ಆಟವಾಡಿ ಖುಷಿಪಟ್ಟಿದ್ದಾರೆ

ಕಪ್ಪು ಸೀರೆಯಲ್ಲಿ ರಶ್ಮಿಕಾ! ಅಬ್ಬಾ ಲುಕ್ ನೋಡ್ರೋ ಅಂತಿದ್ದಾರೆ ನೆಟ್ಟಿಗರು

ರಾಗಿಣಿ ದ್ವಿವೇದಿ ಅವರ ತಂದೆ-ತಾಯಿ ಇಲ್ಲಿ ಮಗಳ ಜೊತೆಗೆ ಬಂದಿದ್ದಾರೆ. ತಮ್ಮ ಎಂದಿನ ಖುಷಿಯಲ್ಲಿಯೇ ಮಗಳೊಡನೆ ಒಂದಷ್ಟು ಫೋಟೋಗಳನ್ನ ಕೂಡ ತೆಗೆದುಕೊಂಡಿದ್ದಾರೆ

ಇಲ್ಲಿ ಮೆಟ್ಟಿಲ ಮೇಲೆ ಸಾಲಾಗಿ ನಿಂತು ಕೊಟ್ಟಿರೋ ಪೋಸ್ಟ್ ಇಲ್ಲಿಯ ಒಟ್ಟು ಚಿತ್ರಗಳಲ್ಲಿ ಹೆಚ್ಚು ಗಮನ ಸೆಳೆಯುತ್ತದೆ

ರಾಗಿಣಿ ದ್ವೇದಿ ತಂದೆ ರಾಕೇಶ್ ಕುಮಾರ್ ಹಾಗೂ ತಾಯಿ ರೋಹಿಣಿ ಇಲ್ಲಿಗೆ ಬಂದು ತಾಯಿ ವೈಷ್ಣೋದೇವಿ ದರ್ಶನ್ ಪಡೆದಿದ್ದಾರೆ. ಎಂದಿನಂತೆ ಇಲ್ಲೂ ಹೆಚ್ಚಿನ ಸಮಯ ಕೂಡ ಕಳೆದಿದ್ದಾರೆ ಅಂತಲೂ ಹೇಳಬಹುದು

ಪ್ಯಾನ್ ಇಂಡಿಯಾ ಮಟ್ಟದ ವೃಷಭ್ ಸಿನಿಮಾದಲ್ಲಿ ರಾಗಿಣಿ ನಟಿಸಿದ್ದಾರೆ. ಮಲೆಯಾಳಂ ಸ್ಟಾರ್ ಮೋಹನ್ ಲಾಲ್ ಈ ಚಿತ್ರದಲ್ಲಿ ರಾಗಿಣಿಗೆ ಜೋಡಿ ಆಗಿದ್ದಾರೆ. ಕನ್ನಡದ ನಿರ್ದೇಶಕ ನಂದ್ ಕಿಶೋರ್ ಈ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಡೈರೆಕ್ಟರ್ ಕೂಡ ಆಗುತ್ತಿದ್ದಾರೆ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ದರ್ಶನ್ ಹೀರೋಯಿನ್