ಮಾರುಕಟ್ಟೆಯಲ್ಲಿ ಅಲೋವೆರಾ ಜೆಲ್​ಗೆ ಬೇಡಿಕೆ ಹೆಚ್ಚು. ಆದರೆ ಇನ್ಮುಂದೆ ನೀವು ಮನೆಯಲ್ಲಿಯೇ ಸುಲಭವಾಗಿ ಕಡಿಮೆ ವೆಚ್ಚದಲ್ಲಿ ಅಲೋವೆರಾ ಜೆಲ್ ತಯಾರಿಸಬಹುದು

ಇದಕ್ಕೆ ಅಲೋವೆರಾ ಗಿಡವಿದ್ದರೆ ಸಾಕು. ಆದ್ದರಿಂದ ಅಲೋವೆರಾ ಜೆಲ್ ತಯಾರಿಸಿ ಬಹಳಷ್ಟು ದಿನಗಳವರೆಗೂ ಬಳಸಬಹುದು

ಅಲೋವೆರಾ ಜೆಲ್ ಅನ್ನು ಹೆಚ್ಚಾಗಿ ತ್ವಚೆ ಮತ್ತು ಕೂದಲಿನ ಆರೈಕೆಗೆ ಬಳಸಲಾಗುತ್ತದೆ. ಫೇಸ್ ವಾಶ್, ಕ್ರೀಮ್, ಫೇಸ್ ಟೋನರ್ ಅಥವಾ ಫೇಸ್ ಮಾಸ್ಕ್ ಉತ್ಪನ್ನಗಳ ತಯಾರಿಗೆ ಅಲೋವೆರಾ ಜೆಲ್ ಬಹಳ ಮುಖ್ಯ

ನೀವೂ ಅಲೋವೆರಾ ಜೆಲ್ ಅನ್ನು ಮನೆಯಲ್ಲಿಯೇ ತಯಾರಿಸಬೇಕೆಂದು ಕೊಂಡಿದ್ದರೆ ನಿಮಗಾಗಿ ಕೆಲ ಸಿಂಪಲ್ ಟಿಪ್ಸ್ ಈ ಕೆಳಗೆ ನೀಡಲಾಗಿದೆ

Heart Atatck ತಡೆಯಲು ಈ ಯೋಗಾಸನಗಳನ್ನು ಮಾಡಿ ಸಾಕು! ಹೆಲ್ದಿಯಾಗಿ ಇರ್ತೀರ

ಇದನ್ನು ಗಮನದಲ್ಲಿಟ್ಟುಕೊಂಡರೆ ಮಾರುಕಟ್ಟೆಯಲ್ಲಿ ಸಿಗುವ ಅಲೋವೆರಾ ಜೆಲ್ ಅನ್ನು ಮನೆಯಲ್ಲಿಯೇ ತಯಾರಿಸಿ ದೀರ್ಘಕಾಲ ಸಂಗ್ರಹಿಸಿಟ್ಟುಕೊಳ್ಳಬಹುದು. ಅಲ್ಲದೇ ಇದು ಹಳದಿ ಬಣ್ಣಕ್ಕೆ ತಿರುಗುವುದಿಲ್ಲ

ಅಲೋವೆರಾ ಜೆಲ್ ತಯಾರಿಸುವುದೇಗೆ?: ಅಲೋವೆರಾ ಜೆಲ್ ಅದರ ಔಷಧೀಯ ಗುಣಗಳಿಗೆ ಹೆಸರುವಾಸಿಯಾಗಿದೆ

ಇದು ಚರ್ಮ ಮತ್ತು ಕೂದಲಿಗೆ ಪ್ರಯೋಜನಕಾರಿಯಾದ ಅನೇಕ ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ಅಲೋವೆರಾ ಅಮೈನೋ ಆಮ್ಲಗಳು, ಜೈವಿಕ ಸಕ್ರಿಯ ಸಂಯುಕ್ತಗಳು ಮತ್ತು ವಿಟಮಿನ್ಗಳನ್ನು ಸಹ ಒಳಗೊಂಡಿದೆ

ಮಾರುಕಟ್ಟೆಯಲ್ಲಿ ಸಿಗುವ ಅಲೋವೆರಾ ಜೆಲ್ ಮಾದರಿಯೇ ತಯಾರಿಸಲು ಅಲೋವೆರಾ ಗಿಡದಿಂದ ದೊಡ್ಡ ಅಲೋವೆರಾ ಎಲೆಯನ್ನು ತೆಗೆದುಕೊಳ್ಳಿ

ನೀವು ಅಕ್ಕಿ ನೆನೆಸಿ ಅನ್ನ ಮಾಡ್ತೀರಾ? ಹಾಗಾದ್ರೆ ಮೊದ್ಲು ಈ ವಿಚಾರ ತಿಳಿದುಕೊಳ್ಳಿ!

ಈ ಎಲೆಯ ಸಿಪ್ಪೆ ಸುಲಿದು ಅಲೋವೆರಾ ಜೆಲ್ ಹೊರ ತೆಗೆದು ಒಂದು ಬಟ್ಟಲಿಗೆ ಹಾಕಿ. ನಂತರ ಇದನ್ನು ಬ್ಲೆಂಡರ್ ನಲ್ಲಿ ಹಾಕಿ ರುಬ್ಬಿಕೊಳ್ಳಿ. ನಿಮಗಿಷ್ಟವಿದ್ದರೆ ಈ ಅಲೋವೆರಾ ಜೆಲ್ಗೆ ವಿಟಮಿನ್ ಇ ಕ್ಯಾಪ್ಸುಲ್ಗಳನ್ನು ಸೇರಿಸಬಹುದು

ಸಿದ್ಧಪಡಿಸಿದ ಅಲೋವೆರಾ ಜೆಲ್ ಅನ್ನು ಬಾಟಲಿ ಅಥವಾ ಡಬ್ಬದಲ್ಲಿ ತುಂಬಿ. ಅದರಲ್ಲಿಯೂ ಗಾಳಿಯಾಡದ ಧಾರಕವನ್ನು ಆರಿಸಿ

ಹಾಗಾಗಿ ಯಾವುದಾದರೂ ಗಾಜಿನ ಬಾಟಲಿಯಲ್ಲಿ ತುಂಬಿಸಿ. ಆದರೆ ಸೂರ್ಯನ ಕಿರಣಗಳು ಅದನ್ನು ತಲುಪಲು ಸಾಧ್ಯವಾಗದ ಪಾತ್ರೆಯ ಬಣ್ಣವು ಗಾಢವಾಗಿದ್ದರೆ ಉತ್ತಮ

ಅಲೋವೆರಾ ಜೆಲ್ ಅಂದುಕೊಂಡಿದ್ದಕ್ಕಿಂತ ಮತ್ತಷ್ಟು ದಿನ ಬಾಳಿಕೆ ಬರಲು ಅದನ್ನು ಫ್ರೀಜರ್ನಲ್ಲಿ ಐಸ್ ಟ್ರೇನಲ್ಲಿ ಇರಿಸಿ. ಹೀಗೆ ಮಾಡುವುದರಿಂದ ಹೆಚ್ಚುದಿನಗಳವರೆಗೆ ಬಳಸಬಹುದು

ನಿದ್ರೆಯಲ್ಲಿ ನಿಮಗೆ ಗೊತ್ತಿಲ್ಲದೇ ಅಳುತ್ತೀರಾ? ಇದಕ್ಕೆ ಕಾರಣವೇನು ಗೊತ್ತಾ?