ರಾಗಿ ಅನೇಕ ಪೋಷಕಾಂಶಗಳನ್ನು ಹೊಂದಿದ್ದು, ನಮ್ಮ ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ

ವಿಶೇಷವಾಗಿ ಮಧುಮೇಹಿಗಳು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ

ಈ ಕಾರಣದಿಂದಾಗಿ ವೈದ್ಯರು ಅನ್ನ ಮತ್ತು ಗೋಧಿ ಬದಲಿಗೆ ರಾಗಿ ಆಧಾರಿತ ಆಹಾರವನ್ನು ಸೇವಿಸುವಂತೆ ಶಿಫಾರಸು ಮಾಡುತ್ತಾರೆ

ಸಿರಿಧಾನ್ಯಗಳಲ್ಲಿ ಒಂದಾಗರುವ ರಾಗಿಯನ್ನು ನಿತ್ಯ ಆಹಾರವಾಗಿ ಸೇವಿಸುವುದರಿಂದ ಅನೇಕ ಅದ್ಭುತ ಆರೋಗ್ಯ ಲಾಭ ಸಿಗುತ್ತದೆ

ನಾನು ಸುಮ್ಮನೆ ಕುಳಿತಿಲ್ಲ; ರಿಲ್ಯಾಕ್ಸ್ ಆಗಿಲ್ಲ! ಯಶ್ ಹೀಗಂದಿದ್ಯಾಕೆ?

ಇದು ತುಂಬಾ ರುಚಿಕರವಾಗಿರುವುದಷ್ಟೇ ಅಲ್ಲದೇ, ಆರೋಗ್ಯಕ್ಕೂ ಒಳ್ಳೆಯದು

ಕರ್ನಾಟಕದ ಕೆಲವೊಂದು ಭಾಗಗಳಲ್ಲಿ ರಾಗಿ ಮುದ್ದೆಯನ್ನು ಪ್ರತಿನಿತ್ಯವೂ ಆಹಾರ ಕ್ರಮದಲ್ಲಿ ಬಳಕೆ ಮಾಡುವವರಿದ್ದಾರೆ

ಕೆಲ ಮಂದಿ ರಾಗಿಯನ್ನು ರುಬ್ಬಿ ಹಿಟ್ಟನ್ನು ಮಾಡುತ್ತಾರೆ. ಆದರೆ ಸ್ವಲ್ಪ ಸಮಯದ ನಂತರ ಅದು ಗಟ್ಟಿಯಾಗುವ ಸಾಧ್ಯತೆ ಇರುತ್ತದೆ

 ಆದರೆ ರಾಗಿ ಹಿಟ್ಟು ಗಟ್ಟಿಯಾಗದೇ ಕೆಡದಂತೆ ಸಂರಕ್ಷಿಸುವುದು ಹೇಗೆ ಎಂಬುವುದರ ಕುರಿತಂತೆ ನಾವಿಂದು ನಿಮಗೆ ಕೆಲ ಟಿಪ್ಸ್ ನೀಡುತ್ತೇವೆ

ಸ್ಯಾಂಡಲ್‌ವುಡ್‌ಗೆ ಸಿಕ್ಕಿದ್ರು ಮತ್ತೊಬ್ಬ ಸುಂದರಿ!

ಸರಿಯಾಗಿ ಶುಚಿಗೊಳಿಸಿ ಒಣಗಿಸಿ: ರಾಗಿಯನ್ನು ಹಿಟ್ಟಿಗಾಗಿ ರುಬ್ಬುವ ಮುನ್ನ, ಅದನ್ನು ಸ್ವಚ್ಛವಾಗಿ ಮತ್ತು ಧೂಳಾಗದಂತೆ ತೊಳೆದು, ಸ್ವಚ್ಛಗೊಳಿಸಿ, ಒಣಗಿಸಿ ಮತ್ತು ತೇವಾಂಶವಿಲ್ಲದೇ ಇದ್ದಾಗ ಪುಡಿ ಮಾಡಿ

ಗಾಳಿ ಇಲ್ಲದಂತೆ ನೋಡಿಕೊಳ್ಳಿ: ಹಿಟ್ಟು ಇಟ್ಟಿರುವ ಪಾತ್ರೆಯನ್ನು ಆಗಾಗ್ಗೆ ತೆರೆದು ಮುಚ್ಚಬೇಡಿ. ಹೀಗೆ ಮಾಡುವುದರಿಂದ ಗಾಳಿಯು ಪ್ರವೇಶಿಸಲು ಮತ್ತು ಆಕ್ಸಿಡೀಕರಣವನ್ನು ಉಂಟುಮಾಡುತ್ತದೆ

ತಾಪಮಾನ ನಿಯಂತ್ರಣ: ಏಕರೂಪದ ತಾಪಮಾನವಿರುವ ಸ್ಥಳದಲ್ಲಿ ಉತ್ಪನ್ನವನ್ನು ಸಂಗ್ರಹಿಸಿ. ತಂಪಾದ ಮತ್ತು ಶುಷ್ಕ ಸ್ಥಳದಲ್ಲಿ ಸಹ ಸಂಗ್ರಹಿಸಿ

ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳಬೇಡಿ: ರಾಗಿ ಹಿಟ್ಟನ್ನು ಇಟ್ಟಿರುವ ಪಾತ್ರೆಯ ಮೇಲೆ ನೇರ ಸೂರ್ಯನ ಬೆಳಕು ಬೀಳುವುದನ್ನು ತಪ್ಪಿಸಿ

OTTಗೆ ಬರ್ತಿದೆ ಬಾಲಯ್ಯ-ಶ್ರೀಲೀಲಾ ಸಿನಿಮಾ! ಇಲ್ಲಿದೆ ಡೀಟೆಲ್ಸ್