ಭಾರತ-ಪಾಕಿಸ್ತಾನ ಅಂದರೆ ಬರೀ ಯುದ್ಧ, ಜಗಳ ಮಾತ್ರವಲ್ಲ. ಅವೆರಡರ ನಡುವೆಯೂ ಪ್ರೀತಿ, ಪ್ರೇಮ, ಪ್ರಣಯ ಸಂಬಂಧಗಳು ನಡೆಯುತ್ತಿರುತ್ತವೆ

ಇದಕ್ಕೆ ಹೊಸ ಉದಾಹರಣೆ ಸಮೀರ್ ಖಾನ್ ಹಾಗೂ ಜವೇರಿಯಾ ಲವ್ ಸ್ಟೋರಿ!

ಪಾಕಿಸ್ತಾನದ ಹುಡುಗಿಯೊಬ್ಬಳು ಇದೀಗ ಭಾರತದ ಕೋಲ್ಕತ್ತಾದಲ್ಲಿರುವ ತನ್ನ ಪ್ರಿಯತಮನನ್ನು ಮದುವೆಯಾಗಲು ಬಂದಿದ್ದಾಳೆ

ಯುವತಿ ಭಾರತವನ್ನು ಸಂಪೂರ್ಣವಾಗಿ ಕಾನೂನುಬದ್ಧವಾಗಿ ಪ್ರವೇಶಿಸಿದ್ದಾಳೆ

10 ದಿನಗಳ ಕಾಲ ಚಳಿಗಾಲದ ಅಧಿವೇಶನ, ಕಂಗೊಳಿಸುತ್ತಿದೆ ಬೆಳಗಾವಿ!

ಯುವತಿಯ ಹೆಸರು ಜವೇರಿಯಾ ಖಾನಮ್, ಪಾಕಿಸ್ತಾನದ ಕರಾಚಿ ನಿವಾಸಿಯಾಗಿದ್ದು, ಈಗ ಜವೇರಿಯಾ ಶೀಘ್ರದಲ್ಲೇ ಭಾರತೀಯ ವಧು ಆಗಲಿದ್ದಾರೆ

ಪಶ್ಚಿಮ ಬಂಗಾಳದ ಕೋಲ್ಕತ್ತಾ ನಿವಾಸಿ ಸಮೀರ್ ಖಾನ್ ಅವರನ್ನು ಜವೇರಿಯಾ ವಿವಾಹವಾಗಲಿದ್ದಾರೆ

ಜವೇರಿಯಾ ಹಾಗೂ ಸಮೀರ್ ಖಾನ್ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಈ ಮದುವೆಗೆ ಇಬ್ಬರೂ ಬಹಳ ಸಮಯ ಕಾಯಬೇಕಾಯಿತು. ಯಾಕೆಂದರೆ ಇಬ್ಬರದ್ದೂ ಬೇರೆ ಬೇರೆ ದೇಶ!

ಜವೇರಿಯಾ ಪಾಕಿಸ್ತಾನಿ ಪ್ರಜೆಯಾಗಿದ್ದು, ಭಾರತಕ್ಕೆ ಬರಲು ವೀಸಾ ಸಿಕ್ಕಿರಲಿಲ್ಲ. ವೀಸಾ ಪಡೆಯುವ ಪ್ರಯತ್ನಗಳು ಸುಮಾರು 5 ವರ್ಷಗಳ ಹಿಂದೆ ಪ್ರಾರಂಭವಾಯಿತು ಅಂದರೆ ನೀವು ನಂಬಲೇಬೇಕು!

ಸಮೀರ್ ಖಾನ್ ಜರ್ಮನಿಯಲ್ಲಿ ಓದಿದ್ದು, ಭಾರತಕ್ಕೆ ಬಂದ ನಂತರ ಅವರ ತಾಯಿಯ ಮೊಬೈಲ್ನಲ್ಲಿ ಜವೇರಿಯಾ ಅವರ ಫೋಟೋವನ್ನು ನೋಡಿದ್ದಾರೆ

 ಸಮೀರ್ ಖಾನ್ ಕುಟುಂಬಕ್ಕೆ ಪಾಕಿಸ್ತಾನದಲ್ಲಿ ಅನೇಕ ಸಂಬಂಧಿಕರಿದ್ದಾರಂತೆ

ಜವೇರಿಯಾಳ ಫೋಟೋ ನೋಡಿದ ಸಮೀರ್ಗೆ ಲವ್ ಅಟ್ ಫಸ್ಟ್ ಸೈಟ್ ಎನ್ನುವಂತೆ ಆಗಿದೆ. ಜವೇರಿಯಾಳನ್ನು ಮಾತ್ರ ಮದುವೆಯಾಗುವುದಾಗಿ ಆಗಲೇ ನಿರ್ಧರಿಸಿದ್ರಂತೆ

ಸಮೀರ್ ಅವರು ಜರ್ಮನಿಯಲ್ಲಿ ಓದಿದ್ದರೂ, ಮದುವೆಯ ನಂತರ ಜವೇರಿಯಾ ಅವರೊಂದಿಗೆ ಭಾರತದಲ್ಲಿಯೇ ಇರುತ್ತಾರೆ. ಇವರಿಬ್ಬರ ಪ್ರೇಮಕಥೆ ಶೀಘ್ರವೇ ಮದುವೆಯ ಮೂಲಕ ಮುಂದುವರೆಯಲಿದೆ

ಸಂಭ್ರಮದಿಂದ ನಡೆದ ಶ್ರೀ ಮರಡಿ ಬಸವೇಶ್ವರ ರಥೋತ್ಸವ, 50 ಸಾವಿರಕ್ಕೂ ಹೆಚ್ಚು ಭಕ್ತರು ಭಾಗಿ!