ಈ ಶಾಲೆ ಆರಂಭವಾಗೋ ಹೊತ್ತಿಗೆ, ಇನ್ನೇನು ಶಾಲೆ ಬಿಡೋ ಹೊತ್ತಿಗೆ ಈ ಪರಿಸರದ ತುಂಬೆಲ್ಲ ಟ್ರಿಣ್‌ ಟ್ರಿಣ್‌ ಸೈಕಲ್‌ನದ್ದೇ ಸದ್ದು

ಹೀಗೆ ಸೈಕಲ್‌ ಬೆಲ್‌ ಕೇಳೋದೆ ಇಲ್ಲಿ ಒಂಥರಾ ಚೆಂದ

ಅಂದಹಾಗೆ ಇವ್ರೆಲ್ಲರನ್ನ ಇಲ್ಲಿರೋ ಜನ ಗುರುತಿಸೋದೆ ಇವ್ರು ಸೈಕಲ್‌ ಶಾಲೆಯ ಮಕ್ಕಳೆಂದು

ಅರೆ! ಇದೆಂತಹಾ ತಮಾಷೆ ಮಾರೆ ಅಂತಾ ಹೇಳ್ಬೇಡಿ

ರಾಜ್ಯದ 4 ವಿಮಾನ ನಿಲ್ದಾಣಗಳಿಗೆ ಮಹಾನ್‌ ವ್ಯಕ್ತಿಗಳ ಹೆಸರು!

ಯಾಕೆಂದ್ರೆ ಈ ಶಾಲೆಗೆ ಬರೋ ಶೇಕಡಾ 90ರಷ್ಟು ಮಕ್ಕಳು ಅವಲಂಬಿಸಿರೋದೆ ಈ ಸೈಕಲ್‌ ಅನ್ನ

ಎಲ್ಲಿದೆ ಈ ಶಾಲೆ? ಅಂದಹಾಗೆ ಇದು ನೆರೆಯ ಕೇರಳದ ಕಾಸರಗೋಡಿನ ಊದಿನೂರು ಸರಕಾರಿ ಹೈಯರ್‌ ಸೆಕೆಂಡರಿ ಶಾಲೆಯ ದೃಶ್ಯಾವಳಿ

ಈ ಶಾಲೆಯ ಮಕ್ಕಳಿಗೆ ಬಸ್ ವ್ಯವಸ್ಥೆಗಾಗಿ ಮನವಿ ಕೊಡುವ, ಬೇಡಿಕೆ ಮುಂದಿಡುವ ಅನಿವಾರ್ಯತೆಯಿಲ್ಲ, ಟ್ರಾಫಿಕ್ ಜಾಮ್ ನಲ್ಲಿ ಸಿಲುಕುವ ಟೆನ್ಷನ್ನೂ ಇಲ್ಲ

ಯಾಕೆಂದ್ರೆ ಇವ್ರಿಗೆ ಏನಿದ್ದರೂ ಸೈಕಲ್‌ ಅಷ್ಟೇ ಇವರ ವಾಹನ

ಆದ್ದರಿಂದ ಶಾಲೆ ಆರಂಭವಾಗುವಾಗ, ಶಾಲೆ ಬಿಡುವ ಹೊತ್ತಿಗೆ ಇಡೀ ರಸ್ತೆಯೇ ಸೈಕಲ್‌ ಮಯವಾಗಿರುತ್ತದೆ

90 ರಷ್ಟು ಮಕ್ಕಳಲ್ಲಿ ಸೈಕಲ್! ಅಂದಹಾಗೆ ಈ ಮಕ್ಕಳ್ಯಾರೂ ಸರಕಾರ ನೀಡುವ ಸೈಕಲ್‌ ಯೋಜನೆ ಫಲಾನುಭವಿಗಳಲ್ಲ

ಆದರೂ ಈ ಶಾಲೆಯ ಸುಮಾರು ಶೇಕಡಾ 90 ರಷ್ಟು ಮಕ್ಕಳು ಸೈಕಲ್ ನಲ್ಲೇ ಶಾಲೆಗೆ ಬರೋದು, ಸೈಕಲ್‌ನಲ್ಲೇ ಹೋಗೋದು ಇಲ್ಲಿನ ವಿಶೇಷತೆಯಾಗಿದೆ

Puttur Mahalingeshwara: ಪುತ್ತೂರು ಮಹಾಲಿಂಗೇಶ್ವರ ದೇವರ ಗದ್ದೆಯಲ್ಲಿ ಪೂಕರೆ ಉತ್ಸವದ ವೈಭವ! ಏನಿದು ಆಚರಣೆ?