ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯಾದ ಬಳಿಕ ಯಾವ ರೀತಿ ಪೂಜೆ ಪುನಸ್ಕಾರಗಳು ನಡೆಯಲಿದೆ ಅನ್ನೋದರ ವಿವರ ಇಲ್ಲಿದೆ

ಅಯೋಧ್ಯೆ ಶ್ರೀರಾಮ ಮಂದಿರ ಸಂಬಂಧಿಸಿ ಮಹತ್ವದ ಅಪ್ಡೇಟ್‌ವೊಂದು ಲಭ್ಯವಾಗಿದೆ

ಇನ್ನೇನು ಮುಂದಿನ ವರ್ಷ ಜನವರಿ 22 ರಂದು ರಾಮ ಮಂದಿರ ಉದ್ಘಾಟನೆ ದಿನಗಣನೆ ಆರಂಭವಾಗಿದೆ

ಈ ಹಿನ್ನೆಲೆ ರಾಮ ಮಂದಿರ ಉದ್ಘಾಟನೆ ಸಮಯದಲ್ಲಿ ಯಾರೆಲ್ಲ ಇರಬೇಕೆಂದು ರಾಮ ಜನ್ಮಭೂಮಿ ಟ್ರಸ್ಟ್‌ ಪಟ್ಟಿ ರೆಡಿ ಮಾಡಲು ಆರಂಭಿಸಿದೆ

ಈಗಾಗಲೇ ಘೋಷಣೆ ಆದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀರಾಮ ಮಂದಿರವನ್ನು ಲೋಕಾರ್ಪಣೆಗೊಳಿಸಲಿದ್ದಾರೆ

ಲೋಕಾರ್ಪಣೆಯ ದಿನ ದೇಶಾದ್ಯಂತ 8 ಸಾವಿರ ಮಂದಿಗಷ್ಟೇ ಆಹ್ವಾನ ಇರಲಿದೆ. ವಿಶೇಷವಾಗಿ ಸಾಧು ಸಂತರು, ಅತಿ ಉನ್ನತ ಗಣ್ಯರು ಹಾಗೂ ವಿಶ್ವ ಹಿಂದೂ ಪರಿಷತ್‌ ಪ್ರಮುಖರು ಮಾತ್ರ ಭಾಗವಹಿಸಲಿದ್ದಾರೆ

ಕರ್ನಾಟಕದಿಂದ 250 ಮಂದಿ ಗಣ್ಯರಿಗೆ ಆಹ್ವಾನ ನೀಡುವ ಕುರಿತು ಟ್ರಸ್ಟ್‌ ನಿರ್ಧರಿಸಿದೆ 

ರಾಮ ಮಂದಿರ ಉದ್ಘಾಟನೆ ದಿನ ನಿಗದಿತ ಸಂಖ್ಯೆಯ ಗಣ್ಯರಿಗಷ್ಟೇ ಅವಕಾಶ ನೀಡಲಾಗಿರುತ್ತದೆ

ತುಳುನಾಡಿನ ಕೋರಿ ರೊಟ್ಟಿ ಅಂದ್ರೆ ಲೀಲಾವತಿ ಅವ್ರಿಗೆ ಫೇವರಿಟ್!‌

 ಉಳಿದಂತೆ ಭಕ್ತರಿಗೆ, ಕರಸೇವಕರಿಗೆ ಮಾರ್ಚ್‌ 22 ರವರೆಗೆ ನಡೆಯುವ ಬ್ರಹ್ಮಕಲಶೋತ್ಸವ ಅಂಗವಾಗಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ದಿನಾಂಕ ನಿಗದಿ ಪಡಿಸಲಾಗಿದೆ

ಅದರಂತೆ ಫೆಬ್ರವರಿ 19 ರಂದು ಕರ್ನಾಟಕದಿಂದ ರಾಮನ ದರ್ಶನ ಭೇಟಿಗೆ ಅವಕಾಶ ನೀಡುವುದಾಗಿ ಹೇಳಿದೆ. ಆದರೆ ಈ ದಿನಾಂಕ ಇನ್ನೂ ಅಧಿಕೃತವಾಗಿಲ್ಲ ಎನ್ನಲಾಗಿದೆ

ಮಂಗಳೂರಿಗೆ ಆಗಮಿಸಿದ 3ನೇ ವಿದೇಶಿ ಹಡಗು; ಪ್ರವಾಸಿಗರಿಗೆ ಸಾಂಪ್ರದಾಯಿಕ ಸ್ವಾಗತ