ಮನೆಯಲ್ಲಿ ಜಿರಳೆ ಕಾಟ ಜಾಸ್ತಿ ಆಗಿದ್ಯಾ?

ಜಿರಳೆ ಅಂದ್ರೆ ಸಾಕು ಹೆಣ್ಮಕ್ಕಳಂತೂ ಎದ್ದು, ಬಿದ್ದು ಓಡಿ ಹೋಗ್ತಾರೆ.

ಮನೆಯಲ್ಲಿ ಜಿರಳೆಗಳು ಹೆಚ್ಚಾದರೆ ಕಾಯಿಲೆ ಕೂಡ ಹೆಚ್ಚಾದಂತೆ.

ಜಿರಳೆಗಳು ಅಡ್ಡಾಡಿದ ಜಾಗದಲ್ಲಿದ್ದ ಆಹಾರ ಸೇವಿಸಬಾರದು.

ಏಕೆಂದರೆ ಇದರಿಂದ ನಾನಾ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗಬಹುದು.

ಬೇ ಎಲೆಗಳನ್ನು ಪುಡಿ ಮಾಡಿ ಅಥವಾ ಬಿಸಿ ನೀರಿನಲ್ಲಿ ಕುದಿಸಿ. ಜಿರಳೆಗಳು ಓಡಾಡುವ ಸ್ಥಳಗಳಲ್ಲಿ ಸಿಂಪಡಿಸಿ.

ಈ ವಾಸನೆ ಜಿರಳೆಗಳು ಇಷ್ಟಪಡುವುದಿಲ್ಲ. ಇದರಿಂದ ಅವು ಮನೆ ಬಿಟ್ಟು ಹೋಗುತ್ತದೆ.

ಜಿರಳೆಗಳನ್ನು ತೊಡೆದು ಹಾಕಲು ಲವಂಗ ಉತ್ತಮ ಪರಿಹಾರ ಎಂದೇ ಹೇಳಬಹುದು.

ಕೇವಲ ಜಿರಳೆಗಳು ಓಡಾಡುವ ಸ್ಥಳದಲ್ಲಿ ಲವಂಗ ಇಟ್ಟರೆ ಸಾಕು.

ಒಂದು ಚಮಚ ಅಡಿಗೆ ಸೋಡಾದಲ್ಲಿ ಅರ್ಧ ಚಮಚ ಸಕ್ಕರೆಯನ್ನು ಬೆರೆಸಿ, ಜಿರಳೆ ಕಟ್ಟಿದ ಗೂಡಿಗೆ ಹಾಕಿ.

ಚಳಿಗಾಲದಲ್ಲಿ ಬಾಳೆ ಹಣ್ಣು ತಿಂದ್ರೆ ಏನಾಗುತ್ತೆ ಗೊತ್ತಾ?