ಬೆಂಗಳೂರು ಮೂಲದ ಐಟಿ ಕಂಪೆನಿ ಹಾಗೂ ಸರಕಾರೇತರ ಸಂಸ್ಥೆ ಜೊತೆಗೂಡಿ ಸರಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುತ್ತಿದೆ

ಸರಕಾರಿ ಶಾಲೆಯ ಗೋಡೆಗಳಲ್ಲಿ ಚಿತ್ರ ಚಿತ್ತಾರದ ವರ್ಣಗಳು. ಹೀಗೆ ಮುಚ್ಚಿ ಹೋಗುವ ಶಾಲೆಗೆ  ಆಕರ್ಷಕ ಚಿತ್ತಾರ ನೀಡುತ್ತಿದೆ ಯುವ ತಂಡ

ಐಟಿ ಕಂಪೆನಿಯ ಸಹಯೋಗದಲ್ಲಿ ಎನ್‌ಜಿಓವೊಂದುಸರಕಾರಿ ಶಾಲೆ ಉಳಿಸೋಕೆ ಇಂತಹದ್ದೊಂದು ವಿಶಿಷ್ಟ ಪ್ರಯತ್ನ ನಡೆಸುತ್ತಿದೆ

 ಹಾಗಿದ್ರೆ ಹೇಗಿದೆ ಈ ತಂಡದ ವಿನೂತನ ಪ್ರಯತ್ನ ಅನ್ನೋದಕ್ಕೆ ಈ ಸ್ಟೋರಿ ನೋಡಿ

Health Care: ಚಳಿಗಾಲದಲ್ಲಿ ತಣ್ಣೀರು-ಬಿಸಿನೀರು ಅಂತ ಜಾಸ್ತಿ ನೀರು ಕುಡಿತೀರಾ? ಹಾಗಾದ್ರೆ ಮೊದ್ಲು ಈ ವಿಚಾರ ತಿಳಿದುಕೊಳ್ಳಿ!

ಯೆಸ್‌, ಹೀಗೆ ಸರಕಾರಿ ಶಾಲೆ ಗೋಡೆಗಳಲ್ಲಿ ಆಕರ್ಷಕ ಚಿತ್ರಗಳನ್ನ ಬಿಡಿಸಿರುವ ಈ ತಂಡವೇ ಬೆಂಗಳೂರಿನ ಪ್ರತಿಷ್ಠಿತ ಐಟಿ ಕಂಪನಿ ರಿವರ್ ಬೆಡ್ ಟೆಕ್ನಾಲಜಿ ಇಂಡಿಯಾ 

 ಹೂವಿನ ಹೊಳೆ ಪ್ರತಿಷ್ಠಾನ ಅನ್ನೋ ಸರಕಾರೇತರ ಸಂಸ್ಥೆ. ಇದುವರೆಗೂ 40ಕ್ಕೂ ಅಧಿಕ ಶಾಲೆಗಳನ್ನು ಹೀಗೆ ಸುಣ್ಣ ಬಣ್ಣ ಬಳಿದು ವಿಶೇಷ ಆಕರ್ಷಣೆ ಮೂಡಿಸುವಲ್ಲಿ ಈ ಸಂಸ್ಥೆಗಳು ಯಶಸ್ವಿಯಾಗಿದೆ

ಅಂತೆಯೇ ಮೈಸೂರಿನ ತಾಲೂಕು ವರುಣ ಹೋಬಳಿ ಹಡಜನ ಗ್ರಾಮ ಸರಕಾರಿ ಶಾಲೆಯಲ್ಲೂ ಆಕರ್ಷಕ ಚಿತ್ರ ಚಿತ್ತಾರಗಳನ್ನ ಬಿಡಿಸಲಾಯಿತು

ಜೊತೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಈ ಸಂಸ್ಥೆಗಳು ಒದಗಿಸಿಕೊಟ್ಟಿತು

ಹನ್ನೆರಡು ಲಕ್ಷ ವೆಚ್ಚದಲ್ಲಿ ನವೀಕರಣ ಮಾಡಿ ಯಾವುದೇ ಖಾಸಗಿ ಶಾಲೆಗಳಿಗೂ ಕಮ್ಮಿ ಇಲ್ಲದಂತೆ ಸರಕಾರಿ ಶಾಲೆಯನ್ನ ಅಭಿವೃದ್ಧಿಪಡಿಸಲಾಗಿದೆ

ನಾಲ್ವಡಿ ಕೃಷ್ಣರಾಜ ಒಡೆಯರ್‌, ದಸರಾ ಜಂಬೂ ಸವಾರಿ ಹಾಗೂ ವಿವಿಧ ಪ್ರಾಣಿ ಪಕ್ಷಿಗಳು, ವ್ಯಂಗ್ಯ ಚಿತ್ರಗಳನ್ನು ಭಾರೀ ಆಕರ್ಷಕವಾಗಿ ಮೂಡಿಸಲಾಗಿದೆ

ಒಟ್ಟಿನಲ್ಲಿ ಸರಕಾರಿ ಶಾಲೆ ಉಳಿಸಲು ಮಾಡುತ್ತಿರುವ ಇವರ ಪ್ರಯತ್ನಕ್ಕೆ ನಿಜಕ್ಕೂ ಭೇಷ್‌ ಎನ್ನಲೇಬೇಕು

ಹೊಸ ದಾಖಲೆ ಬರೆದ ಬಾಬರ್‌ ಅಜಮ್‌, ಪಾಕ್‌ ಪರ ಸಾಧನೆ ಮಾಡಿದ ಸ್ಟಾರ್ ಬ್ಯಾಟರ್