ಮೊಟ್ಟಮೊದಲ ಬಾರಿಗೆ ಕೇರಳದಲ್ಲಿ ಪ್ರಾರಂಭವಾದ ಜೆಎನ್ 1 ಹೊಸ ರೂಪಾಂತರವು ಈಗ ಎಲ್ಲಾ ರಾಜ್ಯಗಳಿಗೂ ಹರಡುತ್ತಿದೆ

ಈ ಹಿನ್ನೆಲೆ ಎಲ್ಲಾ ರಾಜ್ಯ ಸರ್ಕಾರಗಳಿಗೂ ಕೇಂದ್ರೆ ಎಚ್ಚರಿಕೆ ನೀಡಿದೆ. ಅಲ್ಲದೇ ಕೋವಿಡ್ ನಿರ್ಬಂಧಗಳನ್ನು ಅನುಸರಿಸುವುದು ಕಡ್ಡಾಯ ಎಂದು ರಾಜ್ಯ ಸರ್ಕಾರಗಳು ಹೇಳುತ್ತಿವೆ

ದೇಶದಲ್ಲಿ ಕೊರೊನಾ ಹೊಸ ಉಪತಳಿ 'ಜೆನ್.1' ಪ್ರಸರಣ ಪತ್ತೆಯಾಗಿದ್ದು, ರಾಜ್ಯದಲ್ಲಿ ಈಗ ಕೊರೊನಾ ಭೀತಿ ಮತ್ತೆ ಶುರುವಾಗಿದೆ

ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆ ಆಗುತ್ತಿದ್ದು, ಜನ ಆತಂಕಕ್ಕೀಡಾಗಿದ್ದಾರೆ

ನಾಳೆ ನಿಮ್ಮ ದಿನವನ್ನು ಇದರೊಂದಿಗೆ ಆರಂಭಿಸಿ; ಮನೆಯಲ್ಲೇ ತಯಾರಿಸಿ ತಿನ್ನಿ

ಇನ್ನೂ ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಎಚ್ಚರಿಕೆ ನೀಡಿದ್ದು, ಮುಂದಿನ ದಿನಗಳಲ್ಲಿ ಮಾಸ್ಕ್ ಧರಿಸುವಂತೆ ನಿಯಮ ಜಾರಿಗೊಳಿಸುವ ಸಾಧ್ಯತೆ ಇದೆ

ಕೆಲವು ರಾಷ್ಟ್ರೀಯ ಚಾನೆಲ್ಗಳು ಕೊರೊನಾ ಹೊಸ ಸೋಂಕಿನಿಂದ ಯುಪಿ ಮತ್ತು ಕೇರಳದಲ್ಲಿ ಕಳೆದ 24 ಗಂಟೆಗಳಲ್ಲಿ ಐವರು ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಪ್ರಕಟಿಸಿವೆ

ವೇಗವಾಗಿ ಹರಡುತ್ತಿರುವ ಕೊರೊನಾ ಕೇರಳದಲ್ಲಿ ಕಳೆದ 24 ಗಂಟೆಗಳಲ್ಲಿ 127 ಹೊಸ ಪ್ರಕರಣಗಳು ವರದಿ ಮಾಡಿದೆ. ಇದರಿಂದ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿದೆ

ಭಾರತದಲ್ಲಿ ಪ್ರಸ್ತುತ 2,669 ಕೋವಿಡ್ನ ಸಕ್ರಿಯ ಪ್ರಕರಣಗಳಿವೆ. ಜೆಎನ್.1 ರೂಪಾಂತರವು ಹೆಚ್ಚಿನ ಅಪಾಯವನ್ನುಂಟುಮಾಡುವುದಿಲ್ಲ

ಆದರೆ, ಇದು ವೇಗವನ್ನು ಹರಡುವ ಗುಣವನ್ನು ಹೊಂದಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ

JN1 ಹೆಸರಿನ ಈ ರೂಪಾಂತರದಲ್ಲಿ ಕಂಡುಬರುವ ಮುಖ್ಯ ಲಕ್ಷಣಗಳೆಂದರೆ ಜ್ವರ, ಸ್ರವಿಸುವ ಮೂಗು, ಗಂಟಲು ನೋವು, ತಲೆನೋವು ಮತ್ತು ಕೆಲವು ವೇಳೆ ಜಠರಗರುಳಿನ ಸಮಸ್ಯೆಗಳು ಎಂದು ತಿಳಿಸಲಾಗಿದೆ

ಇದರೊಂದಿಗೆ ತೀವ್ರ ಸುಸ್ತು, ಆಯಾಸ ಮತ್ತು ಸ್ನಾಯು ದೌರ್ಬಲ್ಯ ಕೂಡ ಹೌದು. ಈ ರೋಗಲಕ್ಷಣಗಳು ಎರಡು ದಿನಗಳವರೆಗೆ ಮುಂದುವರಿದರೆ ಮಾತ್ರ ಕೋವಿಡ್ ಪರೀಕ್ಷೆಗೆ ಒಳಗಾಗುವಂತೆ ವೈದ್ಯರು ಸೂಚಿಸುತ್ತಾರೆ

ಮತ್ತೊಂದೆಡೆ WHO ನ ಮಾಜಿ ಮುಖ್ಯ ವಿಜ್ಞಾನಿ ಸೌಮ್ಯಸ್ವಾಮಿನಾಥನ್ ಅವರು, ಕೋವಿಡ್ ಅನ್ನು ಸಾಮಾನ್ಯ ಶೀತ ಎಂದು ತಿರಸ್ಕರಿಸಬೇಡಿ

ಇದರಿಂದ ಜನರು ಅನಾರೋಗ್ಯಕ್ಕೆ ತುತ್ತಾಗುವುದಷ್ಟೇ ಅಲ್ಲದೇ, ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುವ ಸಾಧ್ಯತೆ ಇದೆ ಎಂದಿದ್ದಾರೆ

ರಾಮಮಂದಿರ ಉದ್ಘಾಟನೆಗೆ ಹೋಗುವವರು ಈ ವಿಚಾರ ಗಮನದಲ್ಲಿಟ್ಟುಕೊಳ್ಳಬೇಕು, ಇಲ್ಲದಿದ್ರೆ ನೋ ಎಂಟ್ರಿ!