ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ನಂಗೆ ಆಹ್ವಾನ ಬಂದಿರುವುದು ನನ್ನ ಪೂರ್ವ ಜನ್ಮದ ಪುಣ್ಯ  ಎಂದು ಶಿಲ್ಪಿ ನಾಗಮೂರ್ತಿ ಅವರು  ಸಂತಸ ವ್ಯಕ್ತಪಡಿಸಿದ್ದಾರೆ

ಅಯೋಧ್ಯೆಯಲ್ಲಿ ಭರದಿಂದ ಸಾಗುತ್ತಿರುವ ಶ್ರೀ ರಾಮ ಮಂದಿರದ ನಿರ್ಮಾಣ ಕಾಮಗಾರಿಗೆ ಗದಗ ಜಿಲ್ಲೆಯ ಮುಂಡರಗಿಯ ಶಿಲ್ಪಿಗೆ ಆಹ್ವಾನ ಬಂದಿದೆ!

 ಹೌದು, ಗದಗ ಜಿಲ್ಲೆ ಮುಂಡರಗಿ ಪಟ್ಟಣದಲ್ಲಿ ಕೆಲಸ ಮಾಡುತ್ತಿದ್ದ ಶಿಲ್ಪಿ ನಾಗಮೂರ್ತಿ ಅವರಿಗೆ ಅಯೋಧ್ಯೆಗೆ ಆಗಮಿಸುವಂತೆ ಆಹ್ವಾನ ಬಂದಿದೆ

ನಾಗಮೂರ್ತಿ ಅವರು ಮೂಲತಃ ಕೊಪ್ಪಳ ಜಿಲ್ಲೆ ಕಾತರಕಿ ಗ್ರಾಮದ ನಿವಾಸಿ. ಮುಂಡರಗಿಯಲ್ಲಿ ಶಿಲ್ಪಿ ಕಲೆಯ ಶಾಪ್ ನಡೆಸುತ್ತಿದ್ದಾರೆ

ಹೋಟೆಲ್-ಗೆಸ್ಟ್ ಹೌಸ್ ಇಲ್ಲ, ಮುಂಗಡ ಬುಕ್ಕಿಂಗ್ ರದ್ದು: ಹೋಗೋ ಪ್ಲಾನ್ ಇದ್ದರೆ ಮುಂದೂಡೋದೇ ಬೆಟರ್!

ನಾಗಮೂರ್ತಿ ಮೈಸೂರಿನ ಜಿಲ್ಲೆ ಎಚ್.ಡಿ ಕೋಟೆಯಲ್ಲಿ ದೊರೆಯುವ ಕರಿಕಲ್ಲುಗಳನ್ನ (ಕೃಷ್ಣ ಶಿಲೆ) ಬಳಸಿ ಮೂರ್ತಿ ತಯಾರಿ ಮಾಡುವುದರಲ್ಲಿ ಸಿದ್ಧಹಸ್ತರು

ಅವರು ಶಿವಮೊಗ್ಗ ಜಿಲ್ಲೆಯ ಸಾಗರದ ಶ್ರೀಗಂಧ ಕಲಾ ಸಂಕಿರಣ ಕಲಾ ವಿದ್ಯಾಲಯ ವ್ಯಾಸಂಗ ಮಾಡಿದ್ದಾರೆ

ನಂತರ ಹಲವು ವರ್ಷ ಶಿಲ್ಪ ಕಲೆಯ ಬಗ್ಗೆ ಮುಂಡರಗಿ ವೆಂಕಟೇಶ ಸುತಾರ ಎಂಬವರ ಹತ್ತಿರ ತರಬೇತಿ ಪಡೆದು ತಾವೇ ಸ್ವತಂತ್ರವಾಗಿ ಸ್ವ ಉದ್ಯೋಗ ಆರಂಭಿಸಿದ್ದಾರೆ

ಸದ್ಯ ನಾಗಮೂರ್ತಿ ಅವರಿಗೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ಅಯೋಧ್ಯೆಗೆ ಆಗಮಿಸುವಂತೆ ಆಮಂತ್ರಣ ಬಂದಿದೆ

ಅಯೋಧ್ಯೆಗೆ ಆಹ್ವಾನ ಬಂದಿರುವ ಕಾರಣ ನಾಗಮೂರ್ತಿ ಅವರನ್ನು ಸ್ಥಳೀಯರು ಸನ್ಮಾನಿಸಿ ಗೌರವಿಸಿದ್ದಾರೆ

ಅಯೋಧ್ಯೆಗೆ ತೆರಳಿ ಶ್ರೀರಾಮನ ದರ್ಶಮ ಪಡೆದು ಜನ್ಮ ಪಾವನ ಮಾಡಿಕೊಳ್ಳುತ್ತೇನೆ

ನನ್ನ ಈ ಸೌಭಾಗ್ಯ ಒದಗಿ ಬಂದಿರುವುದು ತುಂಬಾನೆ ಖುಷಿಯಾಗಿದೆ

ಶ್ರೀರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ನಂಗೆ ಆಹ್ವಾನ ಬಂದಿರುವುದು ನನ್ನ ಪೂರ್ವ ಜನ್ಮದ ಪುಣ್ಯ ಎಂದು ಶಿಲ್ಪಿ ನಾಗಮೂರ್ತಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ

ಎಷ್ಟೇ ವರ್ಷವಾದರೂ ರಾಮ ಮಂದಿರದ ಗೋಡೆಗಳು ಹೊಳೆಯುತ್ತಿರುತ್ತೆ! ಕಾರಣ ಇದು