ಶೀತದಿಂದ ಯಾರಿಗಾದರೂ ಮೂಗು ಕಟ್ಟಿಕೊಂಡಿದ್ದರೆ ಒಂದರಿಂದ ಎರಡು ಹನಿ ಉಗುರುಬೆಚ್ಚಗಿನ ಸಾಸಿವೆ ಎಣ್ಣೆಯನ್ನು ಮೂಗಿಗೆ ಹಚ್ಚಿಕೊಳ್ಳಿ

ಹೀಗೆ ಮಾಡುವುದರಿಂದ ಕೆಲವೇ ನಿಮಿಷಗಳಲ್ಲಿ ಬ್ಲಾಕ್ ಆಗಿರುವ ನಿಮ್ಮ ಮೂಗು ಸುಲಭವಾಗಿ ತೆರೆಯುತ್ತದೆ

ಚಳಿಗಾಲದಲ್ಲಿ ಮೂಗು ಕಟ್ಟಿಕೊಳ್ಳುವುದು ಸಹಜ. ಶೀತದ ವಾತಾವರಣದಿಂದ ಬಹುತೇಕ ಮಂದಿ ಕಫ, ಕೆಮ್ಮು, ಗಂಟಲು ನೋವು ಹೀಗೆ ಹಲವಾರು ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ

ಅದರಲ್ಲೂ ಕೆಲ ಮಂದಿಗೆ ಸ್ವಲ್ಪ ಶೀತವಾದರೆ ಸಾಕು ಬೇಗ ಮೂಗು ಕಟ್ಟಿಕೊಳ್ಳುತ್ತದೆ. ಇದರಿಂದ ಉಸಿರಾಡಲು ಕೂಡ ಕಷ್ಟವಾಗುತ್ತದೆ

ಕೂದಲು ಉದುರಿ ತಲೆ ಬೋಳಾಗುತ್ತೆ ಅನ್ನೋ ಭಯನಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ!

ಆದರೆ ಕೆಲ ಮನೆಮದ್ದುಗಳನ್ನು ಬಳಸುವ ಮೂಲಕ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು

ಸಾಸಿವೆ ಎಣ್ಣೆ: ಶೀತದಿಂದ ಯಾರಿಗಾದರೂ ಮೂಗು ಕಟ್ಟಿಕೊಂಡಿದ್ದರೆ ಒಂದರಿಂದ ಎರಡು ಹನಿ ಉಗುರುಬೆಚ್ಚಗಿನ ಸಾಸಿವೆ ಎಣ್ಣೆಯನ್ನು ಮೂಗಿಗೆ ಹಚ್ಚಿಕೊಳ್ಳಿ

ಹೀಗೆ ಮಾಡುವುದರಿಂದ ಕೆಲವೇ ನಿಮಿಷಗಳಲ್ಲಿ ಬ್ಲಾಕ್ ಆಗಿರುವ ನಿಮ್ಮ ಮೂಗು ಸುಲಭವಾಗಿ ತೆರೆಯುತ್ತದೆ

ಬಿಸಿನೀರು: ಬಿಸಿನೀರಿನ ಹಬೆಯನ್ನು ಆಘ್ರಾಣಿಸುವುದರಿಂದ ಮೂಗು ಕಟ್ಟಿಕೊಂಡಿರುವುದು ಬಹಳ ಸುಲಭವಾಗಿ ನಿವಾರಣೆಯಾಗುತ್ತದೆ

ರೇಷ್ಮೆ ಸೀರೆಯನ್ನು ಹೀಗೆ ಇಸ್ತ್ರಿ ಮಾಡಿ; ಇಲ್ಲದಿದ್ರೆ ಸುಟ್ಟು ಹೋಗುತ್ತೆ!

ಶುಂಠಿ ಚಹಾ: ಶುಂಠಿ ಚಳಿಗಾಲದಲ್ಲಿ ಕಟ್ಟಿಕೊಂಡಿರುವ ಮೂಗನ್ನು ತೆರವುಗೊಳಿಸಲು ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ

ಇದು ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಫಂಗಲ್ ಗುಣಲಕ್ಷಣಗಳನ್ನು ಹೊಂದಿದ್ದು, ಮೂಗನ್ನು ತೆರವುಗೊಳಿಸುವುದು ಮಾತ್ರವಲ್ಲದೇ ಎದೆಯಲ್ಲಿ ಸಂಗ್ರಹಗೊಂಡಿರುವ ಲೋಳೆಯನ್ನು ನಿವಾರಿಸುತ್ತದೆ

ಕಾಳುಮೆಣಸು-ಜೇನುತುಪ್ಪ: ಶೀತದಿಂದ ಮೂಗು ಕಟ್ಟಿಕೊಂಡಿದ್ದರೆ ಕರಿಮೆಣಸಿನ ಪುಡಿಯನ್ನು ಜೇನುತುಪ್ಪದೊಂದಿಗೆ ಬೆರೆಸಬೇಕು

ಇದು ಕೆಲವೇ ನಿಮಿಷಗಳಲ್ಲಿ ಕಟ್ಟಿಕೊಂಡಿರುವ ನಿಮ್ಮ ಮೂಗನ್ನು ತೆರವುಗೊಳಿಸುತ್ತದೆ. ವಾಸ್ತವವಾಗಿ, ಮೆಣಸು ಅಲರ್ಜಿಯನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ

ಉತ್ತಮ ಜೀವನಕ್ಕಾಗಿ ಈ ಆರೋಗ್ಯಕರ ಬೆಳಗಿನ ಅಭ್ಯಾಸಗಳನ್ನ ರೂಢಿಸಿಕೊಳ್ಳಿ!