ಭಿನ್ನಾಭಿಪ್ರಾಯ ಉಂಟಾದಾಗ ಚರ್ಚಿಸಿ ರಾಜಿ ಪರಿಹಾರ ಕಂಡುಕೊಳ್ಳಬೇಕು
ಇದನ್ನು ಮಾಡಲು ವಿಫಲವಾದರೆ ನಿಮ್ಮ ಸಂಬಂಧ ಹದಗೆಡಬಹುದು
ದಾಂಪತ್ಯ, ಪ್ರೀತಿ, ಸ್ನೇಹ ಏನೇ ಇರಲಿ ಪುರುಷ ಮತ್ತು ಮಹಿಳೆಯ ನಡುವೆ ಜಗಳವಿಲ್ಲದೇ ಇರಲು ಸಾಧ್ಯವಿಲ್ಲ
ಪ್ರತಿಯೊಬ್ಬ ವ್ಯಕ್ತಿಯು ವಿಭಿನ್ನ ದೃಷ್ಟಿಕೋನಗಳನ್ನು ಹೊಂದಿರುವುದರಿಂದ, ಒಮ್ಮತವನ್ನು ತಲುಪಬೇಕಾದರೆ ಆರೋಗ್ಯಕರ ಚರ್ಚೆಗಳು ಅತ್ಯಗತ್ಯ
ಬಿಳಿ ಬಣ್ಣದ ಶೂ ಕೊಳೆಯಾಗಿದ್ಯಾ? ಫಳಫಳ ಹೊಳೆಯುವಂತೆ ಮಾಡಲು ಇಲ್ಲಿದೆ ಟಿಪ್ಸ್
ಆದರೆ ನಾವಿಂದು ನೀಡುವ ಕೆಲ ಟಿಪ್ಸ್ಗಳ ಮೂಲಕ ಪುರುಷರು ಮತ್ತು ಮಹಿಳೆಯರ ನಡುವಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳಬಹುದು ಎಂದು ತಜ್ಞರು ಹೇಳುತ್ತಾರೆ
ನೆಗೆಟಿವ್ ಫೀಲಿಂಗ್ಸ್: ನಿಮ್ಮ ಸಂಗಾತಿಯೊಂದಿಗೆ ನೀವು ಜಗಳವಾಡಿದಾಗ ನೆಗೆಟಿವ್ ಆಲೋಚನೆಗಳು ಬರುವುದು ಸಹಜ
ಆದರೆ ಆ ಆಲೋಚನೆಗಳಿಂದ ಹೊರಗೆ ಬರಲು ನಿಮಗೆ ಸಾಧ್ಯವಾಗದಿದ್ದರೆ, ಭವಿಷ್ಯದಲ್ಲಿ ಸಂಬಂಧ ಹಾಳಾಗುವ ಸಾಧ್ಯತೆ ಇರುತ್ತದೆ
ಗೊಂದಲ: ಸಮಸ್ಯೆ ಉಂಟಾದಾಗ ಅದನ್ನು ಹೇಗೆ ಎದುರಿಸಬೇಕೆಂದು ಕೆಲವರು ಗೊಂದಲಕ್ಕೊಳಗಾಗುತ್ತಾರೆ. ಅಸಮರ್ಪಕ ಪದಗಳು ಗೊಂದಲಕ್ಕೆ ಕಾರಣವಾಗಬಹುದು
ಇಡ್ಲಿ ಜೊತೆ ತಿನ್ನೋಕೆ ಹೋಟೆಲ್ ಶೈಲಿಯ ಸಾಂಬಾರ್ ಮನೆಯಲ್ಲೇ ಮಾಡಿ!
ಸಮಸ್ಯೆಗಳ ನಂತರವೂ ದಂಪತಿಗಳು ಆರೋಗ್ಯಕರ ಚರ್ಚೆಗಳನ್ನು ನಡೆಸುವುದು ಮುಖ್ಯ
ದೋಷಗಳನ್ನು ಕಂಡುಹಿಡಿಯುವುದು: ಸಾಮಾನ್ಯವಾಗಿ ಜಗಳದ ನಂತರ ಜಗಳಕ್ಕೆ ಕಾರಣವೇನು ಎಂಬುದನ್ನು ಕಂಡುಹಿಡಿಯುವುದು ಅವಶ್ಯಕ
ಇದರಿಂದ ನಮ್ಮ ಕಡೆಯ ತಪ್ಪಿಗೆ ಕಾರಣವೇನೆಂದು ತಿಳಿಯುತ್ತದೆ
ಆತ್ಮವಿಶ್ವಾಸ ಕಳೆದುಕೊಳ್ಳುವುದು : ತಪ್ಪುಗಳನ್ನು ಮರೆತು ಜೀವನದ ಮುಂದಿನ ಹಂತಕ್ಕೆ ಸಾಗುವುದನ್ನು ಕಲಿಯಬೇಕು
ಸಮಸ್ಯೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಚಿಂತಿಸಿ ಭರವಸೆ ಕಳೆದುಕೊಳ್ಳುವುದು ಮುಂದಿನ ಜೀವನಕ್ಕೆ ಒಳ್ಳೆಯದಲ್ಲ