ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ನಂತರ ಭಕ್ತರಿಗೆ ಮರುದಿನದಿಂದಲೇ ದರ್ಶನಕ್ಕೆ ಅವಕಾಶ ಸಿಗಲಿದೆ

ಮಂಗಳೂರು: ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ

ಜನವರಿ 22 ರಂದು ಉದ್ಘಾಟನೆಗೊಳ್ಳಲಿರುವ ಮಂದಿರಕ್ಕೆ ಮರುದಿನದಿಂದಲೇ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ

ಜನವರಿ 23ರಿಂದ ಆರಂಭವಾಗಿ ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಭಕ್ತರ ಪ್ರವೇಶಕ್ಕೆ ಅವಕಾಶವಿರುತ್ತದೆ

ನೂತನವಾಗಿ ನಿರ್ಮಾಣಗೊಳ್ಳುವ ರಾಮ ಮಂದಿರದಲ್ಲಿ ರಮಾನಂದ ಸಂಪ್ರದಾಯ ಪ್ರಕಾರವೇ ಪೂಜೆ ಪುನಸ್ಕಾರ ನಡೆಯಲಿದೆ ಎಂದು ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ

ಜನವರಿ 22 ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮಂದಿರವನ್ನು ಲೋಕಾರ್ಪಣೆಗೊಳಿಸಲಿದ್ದಾರೆ

ಸುಮಾರು 8 ಸಾವಿರ ಮಂದಿ ಆಹ್ವಾನಿತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ

ಉದ್ಘಾಟನೆ ದಿನ ಹಳ್ಳಿ ಹಳ್ಳಿಗಳಲ್ಲಿ ನೇರ ಪ್ರಸಾರದ ವೀಕ್ಷಣೆಗೆ ವಿಎಚ್‌ಪಿ ನಿರ್ಧರಿಸಿದೆ

ಅದೇ ದಿನ ಸಂಜೆ ದೀಪಗಳನ್ನು ಬೆಳಗುವಂತೆ ಮನವಿ ಮಾಡಲಾಗಿದೆ

ಈ ನಿಟ್ಟಿನಲ್ಲಿ ಜನವರಿ 7ರಂದು ಮಹಾ ಸಂಪರ್ಕ ಅಭಿಯಾನ ನಡೆಯಲಿದೆ

ರಾಮನೂರಿಗೆ ತಲುಪುವ ರೈಲಿಗೆ ಹಸಿರು ನಿಶಾನೆ ತೋರಿದ ಮೋದಿ!