ಅಯೋಧ್ಯೆ ಬಾಲರಾಮನ ವಿಗ್ರಹ ಹಿಂದೆಯೂ ಅರುಣ್ ಯೋಗಿರಾಜ್ ಕೈಚಳಕ!

ಅರುಣ್ ಅವರ ಪ್ರಕಾರ, “ವಿಗ್ರಹವು ಮಗುವಿನಂತೆ ದೈವಿಕವಾಗಿರಬೇಕು.

ಪ್ರತಿಮೆಯನ್ನು ನೋಡುವ ಜನರು ದೈವತ್ವವನ್ನು ಅನುಭವಿಸಬೇಕು”

ಶಿಲ್ಪಕಲೆಯಲ್ಲಿ ಹೆಸರಾದ ಪರಂಪರೆಯಿರುವ ಕುಟುಂಬದಿಂದ ಬಂದಿರುವ ಮೈಸೂರಿನ ಅರುಣ್ ಯೋಗಿರಾಜ್.

ಅರುಣ್ ನಿರ್ಮಿಸಿದ ವಿಗ್ರಹವನ್ನು ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗಾಗಿ ಆಯ್ಕೆ ಮಾಡಲಾಗಿದೆ.

ದೇಶದ ಬಹುಬೇಡಿಕೆಯ ಶಿಲ್ಪಿಗಳಲ್ಲಿ ಒಬ್ಬರಾಗಿರುವ ಅರುಣ್ ಯೋಗಿರಾಜ್.

ತಮ್ಮ ಅಪ್ಪ ಮತ್ತು ಅಜ್ಜನ ಪ್ರೇರಣೆಯಂದ ಶಿಲ್ಪಕಲೆಯ ಜಗತ್ತಿನಲ್ಲಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು.

ಇಂಡಿಯಾ ಗೇಟ್ ಬಳಿ ಇರುವ ಸುಭಾಷ್ ಚಂದ್ರ ಬೋಸ್ ಅವರ 30-ಅಡಿ ಪ್ರತಿಮೆಯನ್ನು ಕೆತ್ತಿದವರು ಇದೇ ಅರುಣ.

ಕೇದಾರನಾಥದಲ್ಲಿ 12 ಅಡಿ ಎತ್ತರದ ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ಕೆತ್ತಿದ್ದಾರೆ

ಮೈಸೂರಿನ 21 ಅಡಿ ಎತ್ತರದ ಹನುಮಾನ್ ಪ್ರತಿಮೆ ಅರುಣ್ ಅವರ ಕೈಚಳಕವೇ ಆಗಿದೆ.