ತೂಕ ಹೆಚ್ಚಳದಿಂದ ಕೆಟ್ಟದಾಗಿ ಕಾಣುವುದು ಮಾತ್ರವಲ್ಲದೆ ಅನೇಕ ಗಂಭೀರ ಕಾಯಿಲೆಗಳಿಗೆ ಕಾರಣವಾಗಿದೆ
ಸ್ಥೂಲಕಾಯತೆಯಿಂದ ಮಧುಮೇಹ, ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುವ ಸಾಧ್ಯತೆ ಇದೆ
ಇತ್ತೀಚಿನ ದಿನಗಳಲ್ಲಿ ಬೊಜ್ಜು ಸಾಮಾನ್ಯ ಸಮಸ್ಯೆಯಾಗಿಬಿಟ್ಟಿದೆ. ಪ್ರತಿ ಎರಡನೇ ವ್ಯಕ್ತಿಯು ತೂಕ ಹೆಚ್ಚಳ ಸಮಸ್ಯೆಯಿಂದ ಬಳಲುತ್ತಿದ್ದಾರೆ
ತಪ್ಪು ಆಹಾರ ಪದ್ಧತಿ, ಅನಾರೋಗ್ಯಕರ ಜೀವನಶೈಲಿ ಮತ್ತು ವ್ಯಾಯಾಮದ ಕೊರತೆಯಿಂದಾಗಿ ಸ್ಥೂಲಕಾಯತೆಯು ಬಹಳ ವೇಗವಾಗಿ ಹೆಚ್ಚಾಗುತ್ತದೆ
ಮಹಿಳೆಯರೇ ಒಳ ಉಡುಪು ಖರೀದಿಸುವ ಮುನ್ನ ನೆನಪಿರಲಿ ಈ ವಿಚಾರಗಳು!
ತೂಕ ಹೆಚ್ಚಳವನ್ನು ನಿಯಂತ್ರಿಸಲು ಜನರು ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳುತ್ತಾರೆ ಮತ್ತು ಗಂಟೆಗಟ್ಟಲೇ ಜಿಮ್ನಲ್ಲಿ ಬೆವರಿಳಿಸುತ್ತಾರೆ
ಆದರೆ ನುಗ್ಗೆಕಾಯಿ ತಿಂದೂ ಕೂಡ ತೂಕ ಇಳಿಸಿಕೊಳ್ಳಬಹುದು ಎಂದು ಎಷ್ಟೋ ಮಂದಿಗೆ ತಿಳಿದಿಲ್ಲ
ಹೌದು, ದೇಹದಲ್ಲಿನ ಬೊಜ್ಜು ಕರಗಿಸಲು ನುಗ್ಗೆಸೊಪ್ಪು ಮತ್ತು ಕಾಯಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ ಎಂದು ಹಲವಾರು ಅಧ್ಯಯನಗಳು ಬಹಿರಂಗ ಪಡಿಸಿದೆ
ನುಗ್ಗೆಯಲ್ಲಿ ಉತ್ಕರ್ಷಣ ನಿರೋಧಕಗಳು ಹೇರಳವಾಗಿವೆ. ವಿಟಮಿನ್ ಎ, ಇ, ಸಿ ಸತ್ವಗಳು, ಕ್ಯಾಲ್ಶಿಯಂ, ಪೊಟಾಶಿಯಂ, ಕಬ್ಬಿಣದಂಥ ಖನಿಜಗಳು ನುಗ್ಗೆಯಲ್ಲಿ ಭರಪೂರ ಇವೆ
ಮನೆಯಲ್ಲಿ ಮಕ್ಕಳಿದ್ರೆ ಹೀಗೆ ಮಾಡಿ ಮಟನ್ ಅಡುಗೆ; ಇಷ್ಟಪಟ್ಟು ತಿಂತಾರೆ!
ನುಗ್ಗೆಕಾಯಿ ನಾರುಭರಿತ ಆಹಾರವಾಗಿರುವುದರಿಂದ ದೇಹಕ್ಕೆ ನಾನಾ ರೀತಿಯ ಲಾಭಗಳು ಸಿಗುತ್ತವೆ
ನಾರು ಹೆಚ್ಚು ತಿಂದಾಗ ಬೇಗ ಹೊಟ್ಟೆ ತುಂಬಿದಂತೆ ಭಾಸವಾಗಿ, ದೀರ್ಘಕಾಲದವರೆಗೆ ಹಸಿವಾಗದಂತೆ ಉಳಿಯುತ್ತದೆ
ನುಗ್ಗೆಕಾಯಿ ಸೇವನೆಯು ದೇಹದ ಚಯಾಪಚಯವನ್ನು ಹೆಚ್ಚಿಸುತ್ತದೆ. ಅಂದರೆ ಇದರಲ್ಲಿರುವ ಐಸೊಥಿಯೊಸೈನೇಟ್ಗಳು ದೇಹದ ಶಕ್ತಿ ಬಳಕೆಯ ಪ್ರಮಾಣವನ್ನು ಹೆಚ್ಚಿಸುತ್ತವೆ
ಇದರಿಂದ ನಾವು ಬಳಸುವ ಶಕ್ತಿಗಿಂತ ದೇಹಕ್ಕೆ ದೊರೆಯುವ ಶಕ್ತಿ ಕಡಿಮೆಯಾದರೆ ಸಹಜವಾಗಿಯೇ ದೇಹದ ತೂಕ ಇಳಿಯುತ್ತದೆ
Leftover Rice Recipe: ಉದ್ದಿನ ಬೇಳೆ ನೆನೆಸೋದು ಮರೆತ್ರಾ? ರಾತ್ರಿ ಉಳಿದ ಅನ್ನದಿಂದ ಮಾಡಿ ರುಚಿಯಾದ ಮಸಾಲೆ ವಡೆ