ನಮಗೆ ನಿದ್ರೆ ಮಾಡಲು ಯಾವ ಭಂಗಿ ಆರಾಮದಾಯಕ ಅನಿಸುತ್ತದೆಯೋ ಆ ಭಂಗಿಯಲ್ಲಿ ಮಲಗುತ್ತೇವೆ.

ಕೆಲವರಿಗಂತೂ ಹೊಟ್ಟೆ ಮೇಲೆ ಮಲಗುವುದರಿಂದ ಹೆಚ್ಚು ಆರಾಮದಾಯಕವೆನಿಸುತ್ತದೆ.

ಆರೋಗ್ಯವನ್ನು ಕಾಪಾಡಿಕೊಳ್ಳಲು, ಆರೋಗ್ಯಕರ ಆಹಾರ ಮತ್ತು ಉತ್ತಮ ನಿದ್ರೆ ಮುಖ್ಯ.

ನಿದ್ರೆ ಮಾಡುವಾಗ ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಮಲಗುವ ಅಭ್ಯಾಸವಿರುತ್ತದೆ.

ಆದರೆ ಹೊಟ್ಟೆ ಮೇಲೆ ಮಲಗುವುದು ದೇಹ ಮತ್ತು ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ.

ಇದರಿಂದ ನಾನಾ ಸಮಸ್ಯೆಗಳು ಎದುರಾಗಿ ನಮ್ಮ ಉಸಿರೇ ನಿಲ್ಲಬಹುದು ಎಂದು ಅನೇಕ ಮಂದಿಗೆ ತಿಳಿದಿಲ್ಲ.

ಹೊಟ್ಟೆಯ ಮೇಲೆ ಮಲಗುವುದರಿಂದ ದೇಹದ ಕೆಲವು ಭಾಗದಲ್ಲಿ ನೋವು ಉಂಟಾಗುತ್ತದೆ.

ನೀವು ಅಜೀರ್ಣ, ಮಲಬದ್ಧತೆ, ಹೊಟ್ಟೆ ನೋವಿನಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.

ಹೊಟ್ಟೆಯ ಮೇಲೆ ಮಲಗುವುದರಿಂದ ಬೆನ್ನು ಮೂಳೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.

ಹೊಟ್ಟೆಯ ಮೇಲೆ ಮಲಗುವುದು ಕುತ್ತಿಗೆಯ ನೋವಿಗೂ ಕಾರಣವಾಗಬಹುದು.