ಮಾಂಸಾಹಾರದ ಅಡುಗೆಗೆ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಇರಲೇಬೇಕು

 ಸದ್ಯ ಚಳಿಗಾಲವಿರುವುದರಿಂದ ಈ ಸಮಯದಲ್ಲಿ ನೆಗಡಿ ಮತ್ತು ಗಂಟಲು ನೋವಿನಿಂದ ಬಳಲುತ್ತಿರುವವರಿಗೆ ಈ ಪದಾರ್ಥಗಳು ಉತ್ತಮ ಪರಿಹಾರ ನೀಡುತ್ತವೆ

ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಇಲ್ಲದೇ ತಯಾರಿಸಿದ ಅಡುಗೆ ಸಪ್ಪೆ ಎಂದೇ ಹೇಳಬಹುದು

ಏಕೆಂದರೆ ಬೆಳ್ಳುಳ್ಳಿ ಮತ್ತು ಶುಂಠಿಯ ಪೇಸ್ಟ್ ಭಕ್ಷ್ಯಕ್ಕೆ ಅತ್ಯುತ್ತಮವಾದ ಪರಿಮಳ ಮತ್ತು ರುಚಿಯನ್ನು ನೀಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ

ಹಾಗಾಗಿ ಇವೆರಡನ್ನು ಒಟ್ಟಿಗೆ ಪೇಸ್ಟ್ ಮಾಡಿ ಅಡುಗೆಗೆ ಬಳಸುತ್ತೇವೆ

ಆಹಾರಕ್ಕೆ ಪರಿಮಳವನ್ನು ಸೇರಿಸುವುದರ ಜೊತೆಗೆ, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ದೇಹಕ್ಕೆ ಆರೋಗ್ಯಕರ ಆಹಾರವಾಗಿದೆ

ಇಂತಹ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅನ್ನು ಅನೇಕ ಮಂದಿ ಅಂಗಡಿಯಲ್ಲಿ ಖರೀದಿಸುತ್ತಾರೆ

ಆದರೆ ಇನ್ಮುಂದೆ ಮನೆಯಲ್ಲಿಯೇ ಶುಂಠಿ ಬೆಳ್ಳುಳ್ಳಿ ಸಿಪ್ಪೆ ಸುಲಿದು, ಅದನ್ನು ಸ್ವಚ್ಛಗೊಳಿಸಿ ಪೇಸ್ಟ್ ಮಾಡಿ ತಿಂಗಳುಗಟ್ಟಲೇ ಕೆಡದಂತೆ ಬಳಸಬಹುದು

ಮೊದಲು ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಸ್ವಚ್ಛಗೊಳಿಸಿ. ಎರಡನ್ನೂ ಸೇರಿಸಿ ರುಬ್ಬಿಕೊಳ್ಳಿ. ನಂತರ 2 ದಿನಗಳವರೆಗೆ ಐಸ್ ಕ್ಯೂಬ್ ಟ್ರೇಯಲ್ಲಿ ಇಡಬಹುದು

2023ರಲ್ಲಿ ಗೂಗಲ್​ನಲ್ಲಿ ಲೈಂಗಿಕತೆಯ ಬಗ್ಗೆ ಜನ ಸರ್ಚ್​ ಮಾಡಿದ್ದೇ ಇದು!

ಆದರೆ ಒಂದು ತಿಂಗಳು ಇದು ಕೆಡದಂತೆ ನೋಡಿಕೊಳ್ಳಲು ಈ ಟಿಪ್ಸ್ ಫಾಲೋ ಮಾಡಿ

ಐಸ್ ಕ್ಯೂಬ್ಗಳನ್ನು ತಯಾರಿಸಲು ಬಳಸುವ ಸಿಲಿಕಾನ್ ಟ್ರಯಲ್ಗೆ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಅನ್ನು ಸೇರಿಸಿ. ಬಳಿಕ ಟ್ರೆಯರ್ ಮೇಲ್ಭಾಗದಲ್ಲಿರುವ ಫ್ರೀಜರ್ನಲ್ಲಿ ಇಡಿ

ಐಸ್ ಕ್ಯೂಬ್ಡ್ನಲ್ಲಿ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಫ್ರೀಜರ್ನಲ್ಲಿ 1 ತಿಂಗಳವರೆಗೂ ಹಾಗೆಯೇ ಇರುತ್ತದೆ. ನೀವು ಅದನ್ನು ನಿಮಗೆ ಬೇಕಾದ ಸಮಯದಲ್ಲಿ ನಿಮಗಿಷ್ಟವಾದ ಅಡುಗೆಗೆ ಬಳಸಬಹುದು

ಹೀಗೆ ಸಂಗ್ರಹಿಸಿದ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಅನ್ನು ಅಡುಗೆಗೆ ಆರಾಮದಾಯಕವಾಗಿ ಬಳಸಬಹುದು

ಎಷ್ಟೇ ಕೋಳಿ​ ಪ್ರಿಯರಾಗಿದ್ದರೂ, ಈ ಪೀಸ್​ ಮಾತ್ರ ಬೇಡ್ವೆ-ಬೇಡ ಅಂತಾರೆ ಜನ!