ಪ್ರಧಾನಿಯ 'ಗೋ' ಪ್ರೀತಿ, ಹಸುಗಳೊಂದಿಗೆ ನರೇಂದ್ರ ಮೋದಿ ಸಂಕ್ರಾಂತಿ!

ಪ್ರಧಾನಿ ನರೇಂದ್ರ ಮೋದಿ ಗೋವುಗಳ ಜೊತೆ ಮಕರ ಸಂಕ್ರಾಂತಿ ಹಬ್ಬದ ಆಚರಿಸಿದ್ದಾರೆ.

ತಮ್ಮ ನಿವಾಸದಲ್ಲಿಂದು ಕಪ್ಪು ಬಿಳಿಪು ಬಣ್ಣದ ನಾಲ್ಕೈದು ಹಸುಗಳ ಜೊತೆ ಪ್ರಧಾನಿ ಹಬ್ಬ ಆಚರಿಸಿದ್ದಾರೆ.

ಗೋವುಗಳಿಗೆ ಹುಲ್ಲು ಮತ್ತಿತರ ಆಹಾರ ತಿನ್ನಿಸಿ ಪ್ರಧಾನಿ ಖುಷಿ ಪಟ್ಟಿದ್ದಾರೆ.

ಗೋವುಗಳನ್ನು ತಬ್ಬಿ ಮುತ್ತುಕೊಟ್ಟು ಮೋದಿ ಸಂಭ್ರಮಿಸಿದ್ದಾರೆ.

ಹಬ್ಬ ಹರಿದಿನಗಳಲ್ಲಿ, ಪ್ರಧಾನಿ ಮೋದಿ ತಮ್ಮ ಬಿಡುವಿಲ್ಲದ ಸಮಯವನ್ನು ಹಸುಗಳ ಸೇವೆಗೆ ವಿನಿಯೋಗಿಸುತ್ತಾರೆ.

ಮಕರ ಸಂಕ್ರಾಂತಿಯನ್ನು ದೇಶದ ವಿವಿಧ ಭಾಗಗಳಲ್ಲಿ ವಿವಿಧ ಹೆಸರುಗಳಲ್ಲಿ ಆಚರಿಸುವ ಸಂಪ್ರದಾಯ ಇದೆ.

ಹಸುಗಳ ಜೊತೆ ಮೋದಿ ಮಕರ ಸಂಕ್ರಾಂತಿ ಆಚರಿಸಿತ್ತಿರೋ ಫೋಟೋಗಳು ವೈರಲ್ ಆಗಿವೆ.

ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಅಪ್ಲೋಡ್ ಆಗುತ್ತಿದ್ದಂತೆ ಸಾಕಷ್ಟು ಲೈಕ್ಸ್, ಕಾಮೆಂಟ್‌ಗಳು ಬಂದಿವೆ.

ಪ್ರಧಾನಿಯ 'ಗೋ' ಪ್ರೀತಿ, ಹಸುಗಳೊಂದಿಗೆ ನರೇಂದ್ರ ಮೋದಿ ಸಂಕ್ರಾಂತಿ!