ಸೀತಾಪಹರಣದ ಸೂತ್ರಧಾರಿ ಶೂರ್ಪನಖಿಯ ಬಗ್ಗೆ ಇಲ್ಲಿದೆ ಕುತೂಹಲಕಾರಿ ಮಾಹಿತಿಗಳು

ರಾಮಾಯಣ ನಡೆಯುವುದು ವೀಧಿ ಲಿಖಿತವಾಗಿದ್ದರೂ ಸಹ ಅದಕ್ಕೆ ಯಾವುದಾದರೂ ಒಂದು ಕಾರಣ ಬೇಕಲ್ಲವಾ?. 

ಸೀತೆಯ ಅಪಹರಣ ಒಂದು ಕಾರಣವಾದರೆ, ಆ ಅಪಹರಣಕ್ಕೆ ಸಹ ಒಬ್ಬ ವ್ಯಕ್ತಿ ಮುಖ್ಯ ಕಾರಣ ಎನ್ನಬಹುದು. ಅದೇ ಶೂರ್ಪನಖಿ

ಯಾರಿದು ಶೂರ್ಪನಖಿ? ಈಕೆಯ ಬಗ್ಗೆ ಗೊತ್ತಿಲ್ಲದ ಅನೇಕ ಕುತೂಹಲಕಾರಿ ಮಾಹಿತಿ ಇಲ್ಲಿದೆ

ರಾಮಾಯಣದಲ್ಲಿ ಅನೇಕ ಜನರು ಬಹಳ ಮುಖ್ಯ ಅನಿಸಿಕೊಳ್ಳುತ್ತಾರೆ ಅದರಲ್ಲಿ ಶೂರ್ಪನಖಿ ಸಹ ಒಬ್ಬಳು. ಶೂರ್ಪನಖಿಯು ಋಷಿ ವಿಶ್ವಶ್ರವ ಮತ್ತು ಕೈಕಸಿಯ ಮಗಳು

ಈಕೆಗೆ ಚೂಪಾದ ಉಗುರು ಇದ್ದ ಕಾರಣ ಶೂರ್ಪನಖಿ ಎಂದು ಕರೆಯಲಾಗುತ್ತದೆ. ಈಕೆ ರಾವಣನ ಸಹೋದರಿ ಸಹ ಹೌದು

ಸೀತಾಪಹರಣಕ್ಕೆ ಈಕೆ ಹೇಗೆ ಕಾರಣ ಎಂದು ನೋಡುವುದಾರೆ ಅದರ ಹಿಂದೆ ಸಹ ಕಥೆ ಇದೆ

ರಾಮನ ವನವಾಸದ ಸಮಯದಲ್ಲಿ ಒಮ್ಮೆ ಕಾಡಿನಲ್ಲಿ ಶೂರ್ಪನಖಿ ರಾಮನನ್ನ ನೋಡಿ ಮೋಹಿತಳಾಗುತ್ತಾಳೆ

ಅವನ ಬಳಿ ಬಂದು ಪರಿಚಯ ಮಾಡಿಕೊಂಡು ತನ್ನನ್ನ ಮದುವೆ ಆಗುವಂತೆ ಕೇಳಿಕೊಳ್ಳುತ್ತಾಳೆ. ಆದರೆ ರಾಮ ನಿರಾಕರಿಸುತ್ತಾನೆ

ನನಗೆ ಈಗಾಗಲೇ ಮದುವೆ ಆಗಿದೆ ಬೇಕಾದರೆ ನನ್ನ ಸಹೋದರ ಲಕ್ಷ್ಮಣನನ್ನ ಕೇಳು ಎನ್ನುತ್ತಾನೆ. ಆಗ ಶೂರ್ಪನಖಿ ಲಕ್ಷ್ಮಣನಿಗೆ ಮದುವೆ ಆಗುವಂತೆ ಕೇಳುತ್ತಾಳೆ

ಲಕ್ಷ್ಮಣ ಅದನ್ನು ತಿರಸ್ಕರಿಸಿ ಮತ್ತೆ ಅವಳನ್ನು ರಾಮನ ಬಳಿ ಕಳುಹಿಸುತ್ತಾಳೆ. ಅಣ್ಣ-ತಮ್ಮ ಈ ರೀತಿ ಮಾಡುವತ್ತಿರುವುದರಿಂದ ಶೂರ್ಪನಖಿಗೆ ಕೋಪ ಬರುತ್ತದೆ

ಆಕೆ ಇದಕ್ಕೆಲ್ಲಾ ಸೀತೆ ಇರುವುದೇ ಕಾರಣ, ನಾನು ಆಕೆಯನ್ನ ತಿಂದರೆ ನೀನು ನನ್ನ ಮದುವೆ ಆಗಬಹುದು ಎಂದು ಹೇಳಿ, ಸೀತೆಯ ಮೇಲೆ ಆಕ್ರಮಣ ಮಾಡಲು ಬರುತ್ತಾಳೆ

ಇದನ್ನ ನೋಡಿ ಕೋಪಗೊಂಡ ಲಕ್ಷ್ಮಣ ರಾಮನ ಆಜ್ಞೆಯಂತೆ ಲಕ್ಷ್ಮಣ ಅವಳ ಮೂಗು ಮತ್ತು ಕಿವಿಗಳನ್ನು ಕತ್ತರಿಸುತ್ತಾನೆ

ಶೂರ್ಪನಖಿ ತನ್ನ ಮೂಗು ಕತ್ತರಿಸದ ಸಹೋದರರ ವಿರುದ್ಧ ಸೇಡು ತೀರಿಸಿಕೊಳ್ಳಲು ತನ್ನ ಸಹೋದರರಾದ ಖಾರ ಮತ್ತು ದೂಷನ ಬಳಿಗೆ ಹೋಗುತ್ತಾಳೆ

ಅವರಿಬ್ಬರು ರಾಮನ ಜೊತೆ ಯುದ್ದ ಮಾಡಿ ಸೋಲುತ್ತಾರೆ. ನಂತರ ಈಕೆ ರಾವಣನ ಬಳಿ ಹೋಗಿ ಸೀತೆಯ ಅಂದವನ್ನ ಹೊಗಳಿ, ಅಪಹರಣ ಮಾಡಲು ಪ್ರೇರೇಪಿಸುತ್ತಾಳೆ

ಶೂರ್ಪನಖಿ ಈ ರಾಕ್ಷಸಿಯ ಅವತಾರ ತಾಳಲು ಸಹ ಒಂದು ಹಿಂದಿನ ಕಾರಣವಿದೆ. ಆಕೆ ಇಂದ್ರಲೋಕದ ನಯನತಾರಾ ಎಂಬ ಅಪ್ಸರೆಯಾಗಿದ್ದಳಂತೆ

ಆಕೆ ವಜ್ರ ಎಂಬ ಋಷಿಯ ತಪಸ್ಸನ್ನ ಭಂಗ ಮಾಡಲು ಹೋದಾಗ, ಆತ ಶಾಪ ನೀಡುತ್ತಾನೆ. ಹಾಗಾಗಿ ಈಕೆ ರಾಕ್ಷಸಿಯಾಗಿ ಹುಟ್ಟುತ್ತಾಳೆ ಎಂದೂ ಸಹ ಹೇಳಲಾಗುತ್ತದೆ

ಕೆಲ ನಂಬಿಕೆಗಳ ಪ್ರಕಾರ ಯಾವಾಗ ಲಕ್ಷ್ಮಣನು ಶೂರ್ಪನಖಿಯ ಮೂಗು ಮತ್ತು ಕಿವಿಗಳನ್ನು ಕತ್ತರಿಸುತ್ತಾನೋ ಆಗ ಆಕೆಯ ತಾನು ಯಾರೆಂಬ ಅರಿವು ಆಗುತ್ತದೆ

ಅಲ್ಲದೇ, ತನ್ನ ತಪ್ಪಿನ ಬಗ್ಗೆ ತಿಳಿದು ರಾಕ್ಷಸ ಗುರು ಶುಕ್ರಾಚಾರ್ಯರ ಬಳಿಗೆ ಹೋಗಿ ದೇವರ ಕಾರ್ಯದಲ್ಲಿ ಮಗ್ನಳಾಗುತ್ತಾಳೆ

ಅಯೋಧ್ಯೆಗೆ ಬಂದ್ರು ರಾಮ, ಸೀತೆ, ಲಕ್ಷ್ಮಣ! ಜನರಿಂದ ಅದ್ಧೂರಿ ಸ್ವಾಗತ