ಇತ್ತೀಚೆಗೆ ಸೆಲೆಬ್ರಿಟಿಸ್‌‌ ಡಿವೋರ್ಸ್ ವಿಚಾರ ಸದ್ದು ಮಾಡುತ್ತಿದ್ದೆ 

ಮೊನ್ನೆಯಷ್ಟೇ ಐಶ್ವರ್ಯಾ ರೈ ಹಾಗೂ ಅಭಿಷೇಕ್‌ ಬಚ್ಚನ್‌ ನಡುವೆ ಡಿವೋರ್ಸ್ ಆಗಿದೆ ಅಂತ ಸುದ್ದಿಯಾಗಿತ್ತು

ನಂತರ ಇದು ಕೇವಲ ಸುಳ್ಳು ಸುದ್ದಿ ಅಂತ ಗೊತ್ತಾಯ್ತು

ಇದರ ಬೆನ್ನಲ್ಲೇ ತಮಿಳು ನಟ ಸೂರ್ಯ ಹಾಗೂ ಜ್ಯೋತಿಕಾ ಅವರ ನಡುವೆ ಎಲ್ಲವೂ ಸರಿಯಲ್ಲ ಅನ್ನೋ ಸುದ್ದಿಗಳು ಕಾಲಿವುಡ್‌ ಮಾಧ್ಯಮಗಳು ವರದಿ ಮಾಡಿತ್ತು

ಅಷ್ಟೇ ಅಲ್ಲದೇ ಜ್ಯೋತಿಕಾ ಸದ್ಯ ಮುಂಬೈನಲ್ಲಿ ವಾಸಿಸುತ್ತಿದ್ದಾರೆ ಅಂತ ಹೇಳಲಾಗ್ತಿದೆ. ಇತ್ತ ಸೂರ್ಯ ತಮಿಳನಾಡಿನಲ್ಲಿ ವಾಸವಿದ್ದಾರೆ

ಇದನ್ನು ನೋಡಿಯೇ ಇಬ್ಬರ ನಡುವೆ ಡಿವೋರ್ಸ್ ಆಗಲಿದೆ ಅಂತ ಸುದ್ದಿ ಹಬ್ಬಿದೆ

ಜ್ಯೋತಿಕಾ ಮತ್ತು ಸೂರ್ಯ ವಿಚ್ಛೇದನ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಅದಕ್ಕಾಗಿಯೇ ನಟಿ ತಮ್ಮ ಮಕ್ಕಳೊಂದಿಗೆ ಮುಂಬೈನಲ್ಲಿ ನೆಲೆಸಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ

ಜ್ಯೋತಿಕಾ ಮದುವೆಯಾದ ನಂತರ ಚಿತ್ರರಂಗದಿಂದ ದೂರವಾಗಿದ್ದರು. ಇತ್ತೀಚೆಗೆ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಸದ್ಯ ಎರಡು ಬಾಲಿವುಡ್ ಪ್ರಾಜೆಕ್ಟ್‌ಗಳನ್ನು ಮಾಡುತ್ತಿದ್ದಾರೆ

ಜಸ್ಟ್​ ಇದೊಂದು ವಸ್ತು ಮನೆಯಲ್ಲಿದ್ರೆ ನಿಮಗೆ ಕೆಟ್ಟ ಕನಸು ಬರಲ್ವಂತೆ! ಏನದು?

 ಶೂಟಿಂಗ್‌ಗೆ ಹೋಗುವುದಕ್ಕಾಗಿ ಜೊತೆಗೆ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅವರು ಮುಂಬೈಗೆ ತೆರಳಿದ್ದಾರೆ

ಶೂಟಿಂಗ್ ಹಾಗೂ ಮಕ್ಕಳ ವ್ಯಾಸಂಗಕ್ಕೆ ತೊಂದರೆಯಾಗಬಾರದು ಅಂತ ಈ ನಿರ್ಧಾರ ಕೈಗೊಂಡಿದ್ದಾರೆ

ತಮ್ಮ ನಡುವೆ ಯಾವುದೇ ವಿವಾದವಿಲ್ಲ ಎಂದು ಜ್ಯೋತಿಕಾ ಸ್ಪಷ್ಟಪಡಿಸಿದ್ದಾರೆ

ಮುಂಬೈಗೆ ಹೋಗಲು ಅಸಲಿ ಕಾರಣ ತಿಳಿಸಿದ ಬಳಿಕ ಜ್ಯೋತಿಕಾ ಹಾಗೂ ಸೂರ್ಯ ವಿಚ್ಛೇದನದ ಸುದ್ದಿಯಲ್ಲಿ ಸತ್ಯಾಂಶವಿಲ್ಲ ಎಂದು ತಿಳಿದು ಬಂದಿದೆ

ಬಾವಿ ಏಕೆ ವೃತ್ತಾಕಾರದಲ್ಲಿ​ ಇರುತ್ತೆ? ಇದಕ್ಕೆ ಕಾರಣ ಇಲ್ಲಿದೆ ನೋಡಿ!