ಕನ್ನಡ ಕಿರುತೆರೆ ನಟಿ ಸಾರಾ ಅಣ್ಣಯ್ಯ ಅವರು ಸುಂದರವಾದ ಕೆಲವೊಂದು ಫೋಟೋಗಳನ್ನು ಶೇರ್ ಮಾಡಿದ್ದಾರೆ

ರೆಡ್ ಕಲರ್ ಕ್ರಾಪ್​ಟಾಪ್ ಧರಿಸಿಕೊಂಡು ಅದಕ್ಕೆ ನೀಲಿ ಬಣ್ಣದ ಶಾರ್ಟ್ ಸ್ಕರ್ಟ್ ಧರಿಸಿಕೊಂಡಿದ್ದರು ಈ ಕನ್ನಡತಿ ಚೆಲುವೆ

ಇವರು ವರೂಧಿನಿ ಖ್ಯಾತಿಯ ಕನ್ನಡತಿ ಸೀರಿಯಲ್ ನಟಿ ಸಾರಾ ಅಣ್ಣಯ್ಯ ಅವರು

ಅವರ ಸ್ಟೈಲಾಗಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇನ್​ಸ್ಟಾದಲ್ಲಿ ನಟಿ ಫೋಟೋಸ್ ಹಾಕಿದ್ದಾರೆ

ಮಿರರ್ ಸೆಲ್ಫಿ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ನಟಿ ಶೇರ್ ಮಾಡಿದ್ದಾರೆ

ನಟಿಯ ಈ ಮುದ್ದಾದ ಫೋಟೋಗಳನ್ನು ಅವರ ಫ್ಯಾನ್ಸ್ ಕೆಲವರು ಇಷ್ಟಪಟ್ಟು ಶೇರ್ ಮಾಡಿದರೆ ಇನ್ನೂ ಕೆಲವರಿಗೆ ಇದು ಇಷ್ಟವಾಗಿಲ್ಲ

ಮಹಿಮಾ ಅಂತ ನೀವು ತುಂಬಾ ಇಷ್ಟ ಪಡ್ತೀವಿ. ಆದರೆ ಈತರ ಬಟ್ಟೆ ಹಾಕಿಕೊಂಡರೆ ಫ್ಯಾನ್ಸ್ ಅಂತ ಹೇಳಿಕೊಳ್ಳೋಕೆ ಬೇಜಾರಾಗುತ್ತದೆ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ

ವರೂಧಿನಿ ರಿಯಲ್ ಲೈಫ್​ನಲ್ಲಿ ಸ್ವಲ್ಪ ಬೋಲ್ಡ್ ನಟಿ

ಇನ್ನು ಮುಂದೆ ಹೋಟೆಲ್‌ಗಳಲ್ಲಿ ಗಂಟೆಗಟ್ಟಲೆ ಕೂರುವಂತಿಲ್ಲ; ಮಾಲೀಕರಿಂದ ಹೊಸ ನಿಯಮ ಜಾರಿ!

ಅವರು ಕನ್ನಡತಿ ಸೀರಿಯಲ್​ನಲ್ಲಿ ಹೇಗೆ ಮಾಡರ್ನ್ ಆಗಿದ್ದರೋ ಅದೇ ರೀತಿ ಅವರು ನಿಜ ಜೀವನದಲ್ಲಿಯೂ ಮಾಡರ್ನ್, 

ಕಾರಣ ಅವರು ನಟಿಯಷ್ಟೇ ಅಲ್ಲದೆ ಮಾಡೆಲ್ ಆಗಿಯೂ ಗುರುತಿಸಿಕೊಂಡಿದ್ದಾರೆ. ಹಾಗಾಗಿ ಅವರು ಸ್ಟೈಲಿಷ್ & ಮಾಡರ್ನ್ ಆಗಿದ್ದಾರೆ

ಸಾರಾ ಅಣ್ಣಯ್ಯ ಅವರು ಅಪ್ಪಟ ಕೊಡಗಿನ ಕುವರಿ. ಇವರು ಮಡಿಕೇರಿ ಮೂಲದವರು. ಆದರೆ ಅವರಿಗೆ ಹೆಚ್ಚಿನ ಮನ್ನಣೆ ತಂದುಕೊಂಡಿದ್ದು ಕನ್ನಡದ ಕನ್ನಡತಿ ಸೀರಿಯಲ್​ನ ವರೂಧಿನಿ ಪಾತ್ರ

ನಟಿಯ ಫೋಟೋಗಳಿಗೆ 10 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಬಹಳಷ್ಟು ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಫೋಟೋಗಳು ಸೂಪರ್ ಎಂದಿದ್ದಾರೆ

ಅತಿಯಾದ ಸಕ್ಕರೆ ಸೇವನೆಯು ಮಹಿಳೆಯರ ಮೇಲೆ ಹೇಗೆ ಪರಿಣಾಮ ಬೀರುತ್ತೆ?