ಫಿಂಗರ್ಪ್ರಿಂಟ್ಗಳು, ಸ್ಕ್ರಾಚ್ ಮಾರ್ಕ್ಗಳು ಅಥವಾ ಕೊಳೆಯಾಗಿರಲಿ, ಕಿಟಕಿಯ ಗಾಜನ್ನು ಹೊಳೆಯುವಂತೆ ಮಾಡುವುದು ಬಹಳ ಕಷ್ಟದ ಕೆಲಸ

ಆದರೆ ಕೆಲ ಸರಿಯಾದ ನಿಯಮಗಳು ಮತ್ತು ಕೆಲವು ಸರಳವಾದ ವಿಧಾನಗಳನ್ನು ಅನುಸರಿಸಿದರೆ, ಕಿಟಕಿಗಳನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು

ನಿಮ್ಮ ಮನೆಯ ಕಿಟಕಿ ಗ್ಲಾಸ್ ಸಿಕ್ಕಾಪಟ್ಟೆ ಗಾಲೀಜು ಆಗಿದ್ದರೆ ನಿಮಗಾಗಿ ಒಂದಷ್ಟು ಟಿಪ್ಸ್ ಈ ಕೆಳಗಿನಂತಿದೆ ನೋಡಿ

ವಿನೆಗರ್: ಜೀ ನ್ಯೂಸ್ ವರದಿ ಪ್ರಕಾರ, ಕಿಟಕಿ ಗ್ಲಾಸ್ಗಳನ್ನು ಸ್ವಚ್ಛಗೊಳಿಸುವಲ್ಲಿ ವಿನೆಗರ್ ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ

 ಇದಕ್ಕಾಗಿ ಒಂದು ಸ್ಪ್ರೇ ಬಾಟಲಿಯಲ್ಲಿ ಬಿಳಿ ವಿನೆಗರ್ ಮತ್ತು ಅಷ್ಟೇ ಪ್ರಮಾಣದ ನೀರನ್ನು ಸೇರಿಸಿ ಮಿಕ್ಸ್ ಮಾಡಿ

ಈಗ ಗ್ಲಾಸ್ ಮೇಲೆ ಸ್ಪ್ರೇ ಮಾಡಿ ಸ್ಕ್ರಾಚ್ ಮಾರ್ಕ್ ಹೋಗಿಸಲು ಮೈಕ್ರೋಫೈಬರ್ ಬಟ್ಟೆಯಿಂದ ಒರೆಸಿ

ವಿನೆಗರ್ ಆಮ್ಲೀಯತೆಯು ಕೊಳಕು ಮತ್ತು ಗ್ರೀಸ್ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಮತ್ತು ಕಿಟಕಿ ಗ್ಲಾಸ್ಗಳು ಹೊಳೆಯುವಂತೆ ಮಾಡುತ್ತದೆ

ಸ್ಯಾನಿಟೈಸರ್: ಕೊರೊನಾ ವೇಳೆ ಕೈಗಳು ಮತ್ತು ಇತರ ವಸ್ತುಗಳನ್ನು ಸೋಂಕುರಹಿತಗೊಳಿಸಲು ಸ್ಯಾನಿಟೈಸರ್ ಅನ್ನು ಪ್ರತಿಯೊಬ್ಬರು ಬಳಸಿರುತ್ತೇವೆ

ಅತಿಯಾದ ಸಕ್ಕರೆ ಸೇವನೆಯು ಮಹಿಳೆಯರ ಮೇಲೆ ಹೇಗೆ ಪರಿಣಾಮ ಬೀರುತ್ತೆ?

ಆದರೆ ಇದರಿಂದ ಅನೇಕ ವಸ್ತುಗಳನ್ನು ಸ್ವಚ್ಛಗೊಳಿಸಬಹುದು ಎಂದು ಬಹುತೇಕ ಮಂದಿಗೆ ತಿಳಿದಿಲ್ಲ

ಸೋಪ್: ಕಿಟಕಿ ಗ್ಲಾಸ್ ಸ್ವಚ್ಛಗೊಳಿಸಲು ಇದು ಅತ್ಯಂತ ಹಳೆಯ ವಿಧಾನವಾಗಿದೆ

ಇದಕ್ಕಾಗಿ ಒಂದು ಸಣ್ಣ ಬಕೆಟ್ನಲ್ಲಿ ನೀರಿನೊಂದಿಗೆ ಸೋಪ್ ಲಿಕ್ವೆಡ್ ಹಾಕಿ, ಮಿಕ್ಸ್ ಮಾಡಿಕೊಂಡು ಫೋಮ್ ಅನ್ನು ತೆಗೆದುಕೊಂಡು ಇದರೊಳಗೆ ಅದ್ದಿ

ನಂತರ ಈ ಫೋಮ್ ಸಹಾಯದಿಂದ ಕಿಟಕಿಯ ಗಾಜನ್ನು ಮೆಲ್ಲಗೆ ಉಜ್ಜಿ ಕ್ಲೀನ್ ಮಾಡಿ

ಹಿರಿಯ ನಾಗರಿಕರಿಗೆ ಹೇಳಿ ಮಾಡಿಸಿದ ಯೋಜನೆಯಿದೆ!