ಚಿಕ್ಕಮಗಳೂರು ಹಾಗೂ ಮಲೆನಾಡಿನ ಹಲವೆಡೆ ಮಂಗನ ಕಾಯಿಲೆ ಸೋಂಕಿನ ಭೀತಿ ಆರಂಭವಾಗಿದೆ

ಮಲೆನಾಡಿನಲ್ಲಿ ಇದೀಗ ಮತ್ತೊಮ್ಮೆ ಮಂಗನ ಕಾಯಿಲೆ ಭೀತಿ ಎದುರಾಗಿದೆ

ಈಗಾಗಲೇ ಕೊಪ್ಪ ಸರಕಾರಿ ಆಸ್ಪತ್ರೆಯಲ್ಲಿ ಕೆಎಫ್‌ಡಿ ವಾರ್ಡ್‌ ಕೂಡಾ ಆರಂಭಿಸಲಾಗಿದೆ

 ಇನ್ನು ಕೆಎಫ್‌ಡಿ ಅಥವಾ ಮಂಗನ ಕಾಯಿಲೆ ಬಾರದಂತೆ ಏನು ಮಾಡಬಹುದು? ಸೋಂಕಿನ ಲಕ್ಷಣಗಳೇನು?

ಈ ಕುರಿತು ಚಿಕ್ಕಮಗಳೂರು ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ಭರತ್‌ ಅವರು ‘ಲೋಕಲ್‌ 18’ ಗೆ ಮಾಹಿತಿ ನೀಡಿದ್ದಾರೆ

ಸಾಮಾನ್ಯವಾಗಿ ಮಲೆನಾಡಿನ ಕಾಡು ಪ್ರದೇಶಗಳ ಅಂಚಿನಲ್ಲಿ ನೆಲೆಸುವವರಲ್ಲಿ ಈ ಸೋಂಕು ಕಂಡು ಬರುತ್ತಿದೆ

ಕಾಡಿಗೆ ಸೌದೆ ತರಲು ತೆರಳುವವರಿಗೆ ವೈರಾಣಿನ ಮೂಲಕ ಈ ರೋಗ ಹರಡುತ್ತಿದೆ

ಮಂಗ, ಬಾವಲಿಗಳು ಕೆಎಫ್‌ಡಿ ಸೋಂಕಿನಿಂದ ಬಳಲುತ್ತಿದ್ದರೆ 

ಅಥವಾ ಸತ್ತಿದ್ದರೆ ಅಂತಹ ಪ್ರಾಣಿಗಳ ರಕ್ತ ಹೀರುವ ಉಣ್ಣೆಗಳು ಮನುಷ್ಯನಿಗೆ ಕಚ್ಚಿದ್ರೆ ನಾಲ್ಕೇ ದಿನಗಳಲ್ಲಿ ಅಂತಹವರು ಮಂಗನ ಕಾಯಿಲೆಗೆ ತುತ್ತಾಗುತ್ತಾರೆ

ಸಾಮಾನ್ಯವಾಗಿ ತೀವ್ರ ಜ್ವರ, ತಲೆನೋವು, ಕುತ್ತಿಗೆ ನೋವು, ವಿಪರೀತ ಸುಸ್ತು ಇವುಗಳೆಲ್ಲವೂ ಮಂಗನ ಜ್ವರದ ಲಕ್ಷಣಗಳಾಗಿವೆ

ಇನ್ನು ಸೋಂಕು ಬಾರದಂತೆ ಮಲೆನಾಡು ಭಾಗದಲ್ಲಿರುವವರು ಕಾಡಿಗೆ ಹೋಗುವುದಿದ್ದರೆ, ಆರೋಗ್ಯ ಇಲಾಖೆ ನೀಡಿರುವ ದೀಪ ಹೆಸರಿನ ಆಯಿಲ್‌ ಮೈ, ಕೈ, ಕಾಲುಗಳಿಗೆ ಹಚ್ಚಬೇಕು

ಜೊತೆಗೆ ಆದಷ್ಟು ಮೈ ಮುಚ್ಚುವಂತಹ ಬಟ್ಟೆ ಧರಿಸಬೇಕು ಎಂದು ಡಾ. ಭರತ್‌ ಅವರು ತಿಳಿಸಿದ್ದಾರೆ

ಒಂದು ವೇಳೆ ಪಾಸಿಟಿವ್‌ ಬಂದಲ್ಲಿ, ಅಂತಹ ವ್ಯಕ್ತಿಗಳಿಗೆ ಮೊದಲಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತದೆ 

ನಂತರ ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಶಿಫ್ಟ್‌ ಮಾಡುವುದಕ್ಕೂ ಆರೋಗ್ಯ ಇಲಾಖೆ ಸಿದ್ಧವಾಗಿದೆ

ಗಮನಿಸಿ, ಈ ಮಾರ್ಗದಲ್ಲಿ ಮೆಟ್ರೋ ಎರಡು ಗಂಟೆ ಬಂದ್