ಸಂಚಾರಿ ನಿಯಮ ಉಲ್ಲಂಘನೆ ಮಾಡೋದ್ರಲ್ಲಿ ಬೆಂಗಳೂರಿಗೆ ಈತನೇ ಫಸ್ಟ್! ಹೌದು, ಯಾರೀತ? 

ಈ ವಾಹನ ಸವಾರನ ಮೇಲೆ ಇರುವ ದಂಡದ ಮೊತ್ತವಾದರೂ ಎಷ್ಟು ಎಂದು ನಿಮಗೂ ಕುತೂಹಲ ಆಗಿರಬೇಕಲ್ಲ! ಇಲ್ಲಿದೆ ನೋಡಿ ಈ ಕುರಿತು ವಿವರ

ಬೆಂಗಳೂರಿನ ಸುಧಾಮನಗರ ನಿವಾಸಿ ವೆಂಕಟ್ರಾಮನ್ ಹೋಂಡಾ ಆಕ್ಟೀವಾ ಬೈಕ್ ಮೇಲೆ ಬರೋಬ್ಬರಿ 300ಕ್ಕೂ ಹೆಚ್ಚು ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳಿವೆ

ಈ ವಾಹನದ ಮೇಲಿರುವ ದಂಡದ ಒಟ್ಟು ಮೊತ್ತ 3 ಲಕ್ಷ 20 ಸಾವಿರ ಆಗಿದೆ! 

ಸಂಚಾರಿ ನಿಯಮ ಉಲ್ಲಂಘನೆ ಮಾಡಿ 3 ಲಕ್ಷ ದಂಡ ವಿಧಿಸಿಕೊಂಡಿರುವ ವಾಹನ ಸವಾರ ಇದೀಗ ಪೊಲೀಸರ ಕೈಗೆ ಸಿಕ್ಕಿಕೊಂಡಿದ್ದಾನೆ

ಸಂಚಾರಿ ಪೊಲೀಸರ ಭಯವಿಲ್ಲದಂತೆ ವಾಹನ ಚಲಾಯಿಸಿದ್ದ ಈತ ಹೆಲ್ಮೆಟ್ ಧರಿಸುವುದೇ ಇಲ್ಲ. ಒನ್ ವೇಯಲ್ಲೇ ಮೊಬೈಲ್ನಲ್ಲಿ ಮಾತಾಡುತ್ತಲೇ ಡ್ರೈವಿಂಗ್ ಮಾಡಿದ್ದಾನೆ

ಸುಧಾಮನಗರ ನಿವಾಸಿ ವೆಂಕಟ್ರಾಮನ್ KA05KF7969 ನಂಬರಿನ ಆಕ್ಟಿವ್ ಹೊಂಡಾ ಸ್ಕೂಟರ್ ಹೊಂದಿದ್ದು,

ಎಸ್ ಆರ್ ನಗರ, ವಿಲ್ಸನ್ ಗಾರ್ಡನ್ ಕಡೆ ಸಂಚಾರಿ ನಿಯಮ ಪಾಲಿಸದೇ ಓಡಾಟ ನಡೆಸಿದ್ದಾನೆ

ಸಂಚಾರಿ ಪೊಲೀಸರು ವೆಂಕಟ್ರಾಮನ್ ಮನೆಗೆ ತೆರಳಿ ದಂಡ ಕಟ್ಟಿಸಲು ಮುಂದಾಗಿದ್ದು, 

ಇಷ್ಟು ದಂಡ ಕಟ್ಟೋಕೆ ಆಗಲ್ಲ, ಬೇಕಾದ್ರೆ ಬೈಕ್ ಕೊಡ್ತೀನಿ ಎಂದು ಈ ಭೂಪ ಹೇಳುತ್ತಿದ್ದಾನೆ

ಆದ್ರೆ ದಂಡ ಕಟ್ಟು, ಇಲ್ಲವೇ ಕೇಸ್ ಮಾಡ್ತೀವಿ ಎಂದು ಪೊಲೀಸರು ವೆಂಕಟ್ರಾಮನ್ಗೆ ಹೇಳಿದ್ದು, 

ಸದ್ಯ ನೊಟೀಸ್ ನೀಡಿದ್ದು, ದಂಡ ಕಟ್ಟಿಲ್ಲ ಅಂದ್ರೆ ಕೇಸ್ ಹಾಕಲು ನಿರ್ಧಾರ ಮಾಡಿದ್ದಾರೆ

Gold Rate Today: ಆಭರಣ ಪ್ರಿಯರಿಗೆ ಗುಡ್‌ನ್ಯೂಸ್‌! ಮತ್ತೆ ಇಳಿಕೆಯಾದ ಚಿನ್ನದ ಬೆಲೆ! ಇಲ್ಲಿದೆ ಇಂದಿನ ಗೋಲ್ಡ್‌ ರೇಟ್ ವಿವರ