ಮಲಗುವ ಕೋಣೆ ಮನೆಯಲ್ಲಿ ಬಹಳ ಮುಖ್ಯವಾದ ಜಾಗವಾಗಿದೆ. ವಿಶ್ರಾಂತಿ ಮತ್ತು ವಿರಾಮ ಸಮಯವನ್ನು ಆನಂದಿಸುವ ಜಾಗ ಇದು

ಇದು ತುಂಬಾ ವೈಯಕ್ತಿಕ ಮತ್ತು ವಿಶಿಷ್ಟ ಎನ್ನಬಹುದು. ಹಾಗಾಗಿ ಇದರ ವಿಚಾರದಲ್ಲಿ ವಾಸ್ತು ನಿಯಮಗಳನ್ನ ಪಾಲಿಸಬೇಕು

ನಮ್ಮ ಮನೆಯ ಪ್ರತಿ ಜಾಗದಲ್ಲೂ ವಾಸ್ತು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತವೆ

ಮಲಗುವ ಕೋಣೆಯನ್ನು ಸುರಕ್ಷಿತ ಸ್ಥಳವನ್ನಾಗಿ ಕಾಪಾಡಿಕೊಳ್ಳಬೇಕು ಎಂದರೆ ಮಲಗುವ ಕೋಣೆ ಪೀಠೋಪಕರಣಗಳು ಬಹಳ ಮುಖ್ಯವಾಗಿದ್ದು ಅದು ಧನಾತ್ಮಕ ಶಕ್ತಿಯನ್ನು ಹೊರಸೂಸುತ್ತದೆ,

ನೈಲ್​ ಕ್ಲಿಪ್ಪರ್​ ಹೀಗೆ ಮಾಡಿದ್ರೆ ಲಾಕ್​ ಆಗುತ್ತೆ; ಜಸ್ಟ್ ಈ ಟ್ರಿಕ್ಸ್ ಟ್ರೈ ಮಾಡಿ!

ಸರಿಯಾದ ವಸ್ತುಗಳಿಂದ ಮಲಗುವ ಕೋಣೆಯನ್ನ ಅಲಂಕಾರ ಮಾಡಿದರೆ ಒಳ್ಳೆಯ ಫಲಗಳನ್ನ ನೀಡುತ್ತದೆ

 ನಮ್ಮ ಮಲಗುವ ಕೋಣೆ ಪ್ರಪಂಚದ ಗಡಿಬಿಡಿಯಿಂದ ನಮಗೆ ಅಗತ್ಯವಿರುವ ವಿಶ್ರಾಂತಿಯನ್ನ ನೀಡುತ್ತದೆ

ಮಾಸ್ಟರ್ ಬೆಡ್‌ರೂಮ್‌ನ ವಾಸ್ತು ಮಾರ್ಗಸೂಚಿಗಳ ಪ್ರಕಾರ, ಮಲಗುವ ಕೋಣೆಯ ಬಾಗಿಲು 90 ಡಿಗ್ರಿಗಳಿಗೆ ತೆರೆಯಬೇಕು,

 ತೆರೆಯುವಾಗ ಮತ್ತು ಮುಚ್ಚುವಾಗ ಯಾವುದೇ ಶಬ್ದ ಇರಬಾರದು ಮತ್ತು ಅದು ಪೂರ್ವ, ಪಶ್ಚಿಮ ಅಥವಾ ಉತ್ತರಕ್ಕೆ ಎದುರಾಗಿರಬೇಕು

ಹಾಸಿಗೆಯಲ್ಲಿ ಮಲಗುವವರ ಕಾಲುಗಳು ಉತ್ತರ ಅಥವಾ ಪೂರ್ವಕ್ಕೆ ಎದುರಾಗಿರುವಂತೆ ಹಾಸಿಗೆಯನ್ನು ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇಡಬೇಕು ಎಂದು ವಾಸ್ತು ಸಿದ್ಧಾಂತ ಹೇಳುತ್ತದೆ

 ಇದು ಕೋಣೆಯ ಯಾವುದೇ ಮೂಲೆಯಲ್ಲಿ ಇರಬಾರದು ಅಂದರೆ ಮಧ್ಯದಲ್ಲಿರಬೇಕು

ಮಾಸ್ಟರ್ ಬೆಡ್‌ರೂಮ್‌ಗಳಿಗೆ ಸೂಕ್ತವಾದ ಬಣ್ಣಗಳು ಎಂದರೆ ಬೂದು, ಹಸಿರು, ಗುಲಾಬಿ ಮತ್ತು ನೀಲಿ, ದಂತ ಅಥವಾ ತಿಳಿ ಬಣ್ಣ

ಬಟ್ಟೆಗಾಗಿ ಮೀಸಲಾದ ಕೋಣೆ ಅಥವಾ ವಾರ್ಡ್ರೋಬ್ ಅನ್ನು ಪಶ್ಚಿಮ, ನೈಋತ್ಯ ಅಥವಾ ದಕ್ಷಿಣ ದಿಕ್ಕಿನಲ್ಲಿ ಇಡಬೇಕು