ಯಶ್ ರಾಧಿಕಾ ದಂಪತಿ ಎಷ್ಟು ಸಿಂಪಲ್ ನೋಡಿ!

ಭಟ್ಕಳದ ಕಿರಾಣಿ ಅಂಗಡಿಯಲ್ಲಿ ಮಗಳಿಗೆ ಚಾಕೋಲೆಟ್ ಕೊಡಿಸಿದ ಯಶ್

ಉತ್ತರ ಕನ್ನಡ ಭಟ್ಕಳದ ಅಂಗಡಿಯಲ್ಲಿ ಐಸ್‍ಕ್ಯಾಂಡಿ ಸವಿದ ರಾಧಿಕಾ ಪಂಡಿತ್!

ಯಶ್ ದೊಡ್ಡ ನಟನಾಗಿದ್ದರೂ ಕಿರಾಣಿ ಅಂಗಡಿಯಲ್ಲಿ ಮಗಳಿಗೆ ಚಾಕೋಲೆಟ್ ಕೊಡಿಸಿದ್ದು ಎಲ್ಲೆಡೆ ವೈರಲ್ ಆಗಿದೆ.

ರಾಕಿಂಗ್ ಸ್ಟಾರ್ ಹಾಗೂ ರಾಧಿಕಾ ಪಂಡಿತ್ ತಮ್ಮ ಮಕ್ಕಳೊಂದಿಗೆ ಭಟ್ಕಳದ ಮಠವೊಂದಕ್ಕೆ ಭೇಟಿ ನೀಡಿದ್ದರು.

ಚಿತ್ರಾಪುರವು ಮಠ ರಾಧಿಕಾ ಪಂಡಿತ್ ಅವರ ಕುಲ ಮಠವಾಗಿದೆ

ಮಠಕ್ಕೆ ಭೇಟಿ ನೀಡಿದ ದಂಪತಿ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ ಅವರ ದರ್ಶನ ಪಡೆದಿದ್ದಾರೆ.

ರಾಕಿಂಗ್ ಸ್ಟಾರ್ ದಂಪತಿ ಆಗಮನದ ಸುದ್ದಿ ತಿಳಿಯುತ್ತಲೇ ನೂರಾರು ಅಭಿಮಾನಿಗಳು ಮಠದ ಸುತ್ತ ಜಮಾಯಿಸಿದ್ದರು.

ಯಶ್ ಸಿನಿಮಾ ಶೂಟಿಂಗ್‍ನಲ್ಲಿ ಎಷ್ಟೇ ಬ್ಯುಸಿ ಇದ್ದರೂ ಕುಟುಂಬದ ಜೊತೆ ಕಾಲ ಕಳೆಯುತ್ತಾರೆ.

ಹಬ್ಬದ ದಿನಗಳಲ್ಲೂ ಅಷ್ಟೇ ಮನೆಯವರ ಜೊತೆ ಆಚರಣೆ ಮಾಡ್ತಾರೆ.