ಯಶ್ ಸಿನಿಮಾ ನಟಿಗೆ ಕೂಡಿ ಬಂತು  ಕಂಕಣ ಭಾಗ್ಯ!

ಗೂಗ್ಲಿ ಸಿನಿಮಾ ನಟಿ ಕೃತಿ ಕರಬಂಧ ಶೀಘ್ರದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.

ಬಾಲಿವುಡ್ , ಟಾಲಿವುಡ್ ಹಾಗೂ ಸ್ಯಾಂಡಲ್ ವುಡ್ ಸಿನಿಮಾಗಳಲ್ಲಿ ನಟಿಸಿರುವ ಕೃತಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

ಬಾಲಿವುಡ್ ನಲ್ಲೇ ಬ್ಯುಸಿ ಆಗಿರುವ ನಟಿ ಈಗ ಹಸೆಮಣೆ ಏರಲು ಸಜ್ಜಾಗಿದ್ದಾರೆ.

ಬಾಲಿವುಡ್ ನಟ ಪುಲ್ಕಿತ್ ಸಾಮ್ರಾಟ್ ಜೊತೆ ಕೃತಿ ಹಲವು ದಿನಗಳಿಂದ ಡೇಟಿಂಗ್ ಮಾಡ್ತಿದ್ದಾರೆ.

ಮುಂದಿನ ತಿಂಗಳು ಮಾರ್ಚ್ 13ರಂದು ಕೃತಿ ಕರಬಂಧ ಮದುವೆ ನಡೆಯಲಿದೆ.

ಕೃತಿ ಕರಬಂಧ 2016 ರಲ್ಲಿ ಇಮ್ರಾನ್ ಹಶ್ಮಿ ಸಿನಿಮಾ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟರು.

ಕೃತಿ ತನ್ನ 7 ವರ್ಷಗಳ ವೃತ್ತಿಜೀವನದಲ್ಲಿ 10 ಹಿಂದಿ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಬಾಲಿವುಡ್ ಗೆ ಕಾಲಿಡುವ ಮುನ್ನ ಈ ನಟಿ ಸೌತ್ ಚಿತ್ರಗಳಲ್ಲಿ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.

ಯಶ್, ಪವನ್ ಕಲ್ಯಾಣ್, ರಾಮ್ ಚರಣ್ ಸೇರಿದಂತೆ ಅನೇಕ ಸೌತ್ ಸ್ಟಾರ್ಗಳ ಜೊತೆ ಕೃತಿಕರಬಂಧ ನಟಿಸಿದ್ದಾರೆ.

ಡಿವೋರ್ಸ್ ನಂತರ ಗ್ಲಾಮರ್ ಹೆಚ್ಚಿಸಿಕೊಂಡ ಮೆಗಾ ಮನೆಮಗಳು