ನಾವು ಅಡುಗೆಗೆ ಬಳಸುವ ಸಾಮಾನ್ಯ ಮಸಾಲೆ ಪದಾರ್ಥಗಳಲ್ಲಿ ಕೆಂಪು ಮೆಣಸಿನಕಾಯಿ ಕೂಡ ಒಂದು

ಆಹಾರ ಖಾರವಾಗಿ, ಸ್ಪೈಸಿ ಆಗಿರಬೇಕೆಂದರೆ ಕೆಂಪು ಮೆಣಸಿನಕಾಯಿ ಬಳಸುವುದು ತುಂಬಾ ಮುಖ್ಯ

 ಉಪ್ಪಿಲ್ಲದಿದ್ದರೆ ಆಹಾರದ ಹೇಗೆ ರುಚಿಯಾಗಿರುದಿಲ್ಲವೋ ಅದೇ ರೀತಿ ಖಾರವಿಲ್ಲದ ಆಹಾರ ಕೂಡ ರುಚಿಕರವಾಗಿರುವುದಿಲ್ಲ

ಇದಷ್ಟೇ ಅಲ್ಲದೇ ಕೆಂಪು ಮೆಣಸಿನಕಾಯಿ ಪುಡಿ ಆಹಾರಕ್ಕೆ ಬಣ್ಣವನ್ನು ನೀಡುತ್ತದೆ. ಹಾಗಾಗಿ ಕೆಂಪು ಮೆಣಸಿನಕಾಯಿ ಇಲ್ಲದೇ ಯಾವುದೇ ಸಾಂಬಾರ್ ಅಥವಾ ಕರಿ, ರಸಂ ಮಾಡುವುದಿಲ್ಲ

ಇದನ್ನು ಓದಿ, ಇನ್ಮುಂದೆ ಬಿಸ್ಕೆಟ್‌ ತಿನ್ನೋ ಮುನ್ನ ಸಾವಿರ ಸಲ ಯೋಚಿಸ್ತೀರಾ!

ಎಷ್ಟೋ ಮಂದಿಗೆ ಸ್ಪೈಸಿ ಫುಡ್ ಎಂದರೆ ತುಂಬಾ ಇಷ್ಟ. ಹಾಗಾಗಿ ಈಗ ಕೆಂಪು ಮೆಣಸಿನಕಾಯಿಯ ಫ್ಲೇಕ್ ಅನ್ನು ಪಿಜ್ಜಾ ಮತ್ತು ಪಾಸ್ತಾದ ಮೇಲೆ ಸಿಂಪಡಿಸಿ ತಿನ್ನುತ್ತಾರೆ

ಹಿಂದಿನಕಾಲದಲ್ಲಿ ಕೆಂಪು ಮೆಣಸಿನಕಾಯಿಯನ್ನು ನೇರವಾಗಿ ಬಳಸಲಾಗುತ್ತಿತ್ತು. ಆದರೀಗ ಒಣಗಿಸಿ ಪುಡಿ ಮಾಡಿ, ನಂತರ ಅದನ್ನು ಸಂಗ್ರಹಿಸಿ, ಅಗತ್ಯವಿದ್ದಾಗಲೆಲ್ಲಾ ಅಡುಗೆಗೆ ಬಳಸಲಾಗುತ್ತದೆ

ಆದರೆ ಅನೇಕ ಮಂದಿ ಕೆಲಸ-ಕಾರ್ಯ ಹೀಗೆ ತಮ್ಮ ಬ್ಯೂಸಿ ಶೆಡ್ಯೂಲ್ನಿಂದ ಮೆಣಸಿನಪುಡಿ ತಯಾರಿಸಲು ಸಮಯ ಇರುವುದಿಲ್ಲ

ಹಾಗಾಗಿ ಅಂತಹವರು ಮಾರುಕಟ್ಟೆಯಲ್ಲಿ ಸಿಗುವ ಮೆಣಸಿನ ಪುಡಿಯನ್ನು ಖರೀದಿಸುತ್ತಾರೆ. ಆದರೆ ಇಂತಹ ಮೆಣಸಿನ ಪುಡಿಗೆ ಕೆಲವೊಮ್ಮೆ ಇಟ್ಟಿಗೆ ಪುಡಿಯನ್ನು ಕಲಬೆರಕೆ ಮಾಡಲಾಗಿರುತ್ತದೆ

ಇನ್ನೂ ಕೆಲವು ಬಾರಿ ರಾಸಾಯನಿಕಗಳನ್ನು ಸೇರಿಸಲಾಗುತ್ತದೆ

ಹಾಗಾಗಿ ನೀವು ಅಡುಗೆಗೆ ಬಳಸುತ್ತಿರುವ ಕೆಂಪು ಮೆಣಸಿನ ಪುಡಿ ಅಸಲಿಯೋ ಅಥವಾ ನಕಲಿಯೋ ಎಂದು ತಿಳಿಯಲು ನಾವಿಂದು ನಿಮಗೆ ಕೆಲ ಟಿಪ್ಸ್ ನೀಡುತ್ತೇವೆ

ಇದಕ್ಕಾಗಿ ಮೊದಲು ಗಾಜಿನ ಕಂಟೇರ್ ಒಂದರಲ್ಲಿ ನೀರು ತುಂಬಿಸಿ, ಇದಕ್ಕೆ ಒಂದು ಚಮಚ ಮೆಣಸಿನ ಪುಡಿಯನ್ನು ಹಾಕಿ ಮಿಕ್ಸ್ ಮಾಡಿ

ಪುಡಿ ಹೇಗೆ ಮಿಕ್ಸ್ ಆಗುತ್ತದೆ ಎಂದು ನೋಡಿ. ಮೆಣಸಿನ ಪುಡಿ ನೀರಿನಲ್ಲಿ ಯಾವುದೇ ಕೆಂಪು ಬಣ್ಣವಿಲ್ಲದಿದ್ದರೆ ಅದು ಶುದ್ಧ ಮೆಣಸಿನ ಪುಡಿ ಎಂದು ಅರ್ಥ ಮಾಡಿಕೊಳ್ಳಿ

 ಆದರೆ ನೀರಿನ ಬಣ್ಣ ಸ್ವಲ್ಪ ಕೆಂಪಾಗಿದ್ದರೆ, ಮೆಣಸಿನ ಪುಡಿ ಕಲಬೆರಕೆಯಾಗಿದೆ ಎಂದರ್ಥ

ಮನೆಯಲ್ಲಿ ಈ ಬದಲಾವಣೆ ಮಾಡಿದ್ರೆ ಮಕ್ಕಳ ಆರೋಗ್ಯ ಸಮಸ್ಯೆಗೆ ಪರಿಹಾರ ಸಿಗುತ್ತೆ