ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿಯ ಆಗಮನವಾಗಿದೆ. ಸಂಗಾತಿ ಇಲ್ಲದೆ ಒಂಟಿಯಾಗಿದ್ದ ಗೌರಿಗೆ ಹೊಸ ಗೆಳತಿ ಸಿಕ್ಕಿದ್ದಾಳೆ

ಗೌರಿ ಎಂಬ ಜಿರಾಫೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಬನ್ನೇರುಘಟ್ಟ ಜೈವಿಕ ಉದ್ಯಾಮವನದಲ್ಲಿ ಒಬ್ಬಂಟಿಯಾಗಿತ್ತು. ಸಂಗಾತಿ ಇಲ್ಲದೆ ಒಂಟಿತನದಿಂದಾಗಿ ಜಿರಾಫೆ ಮಂಕಾಗಿತ್ತು

ಕಳೆದ ಮೂರು ವರ್ಷಗಳಿಂದ ಜಿರಾಫೆಯ ಏಕಾಂಗಿ ಜೀವನದ ಬಗ್ಗೆ ಮಾಧ್ಯಮಗಳಲ್ಲಿ ಸತತ ವರದಿಯಾದ ಬೆನ್ನಲ್ಲೇ ಬನ್ನೇರುಘಟ್ಟ ಆಡಳಿತ ಮಂಡಳಿ ಕ್ರಮ ಕೈಗೊಂಡಿದ್ದು,

 ಪ್ರಾಣಿ ವಿನಿಮಯ ಯೋಜನೆ ಅಡಿಯಲ್ಲಿ ಮೈಸೂರಿನಿಂದ ಹೊಸ ಜಿರಾಫೆಯನ್ನು ಕರೆತರಲಾಗಿದೆ

ಮಂಗಳಮುಖಿಯರ ಚಪ್ಪಾಳೆ ಏಕೆ ವಿಭಿನ್ನವಾಗಿರುತ್ತೆ? ಏನಿದರ ರಹಸ್ಯ? ಅಷ್ಟೊಂದು ಮಹತ್ವವೇಕೆ? ಇಲ್ಲಿದೆ ಮಾಹಿತಿ

ಭರತ್ ಮತ್ತು ಬಬ್ಲಿ ಎಂಬ ಜಿರಾಫೆಗೆ ಜನಿಸಿದ್ದ ಸದ್ಯ 1 ವರ್ಷ 8 ತಿಂಗಳು ಪ್ರಾಯದ ಶಿವಾನಿ ಎಂಬ ಹೆಣ್ಣು ಜಿರಾಫೆಯನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ವಿಶೇಷ ವಾಹನದ ಮೂಲಕ ಕರೆತರಲಾಗಿದೆ

ಮೈಸೂರಿನಿಂದ ಮೂರುವರೆ ಗಂಟೆಗಳ ಪ್ರಯಾಣದ ಮೂಲಕ ಶಿವಾನಿ ಜಿರಾಫೆ ಬನ್ನೇರುಘಟ್ಟ ಜೈವಿಕ ಉದ್ಯಾನವನವನ್ನು ತಲುಪಿ ಸ್ವಚ್ಛಂದವಾಗಿ ಓಡಾಟ ನಡೆಸುತ್ತಿದೆ

ಗೌರಿ ಹಾಗೂ ಶಿವಾನಿ ಜಿರಾಫೆ ಹೊಂದಿಕೊಳ್ಳಲು ಕೆಲ ಸಮಯ ಬೇಕಾಗಿರುವ ಕಾರಣ ಮರದಿಂದ ಬ್ಯಾರಿಕೇಡ್ ರೀತಿಯ ರಚನೆ ನಿರ್ಮಾಣ ಮಾಡಿ 

ಜಿರಾಫೆಗಳು ಜಗಳವಾಡದೆ ಹೊಂದಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ

ಎರಡೂ ಜಿರಾಫೆಗಳು ಹೊಂದಿಕೊಂಡ ನಂತರ ಒಟ್ಟಿಗೆ ಬಿಡಲು ನಿರ್ಧಾರ ಮಾಡಲಾಗಿದೆ

ಸದ್ಯ ಶಿವಾನಿ ಜಿರಾಫೆ ವೈದ್ಯರು, ಪ್ರಾಣಿ ಪಾಲಕರ ಆರೈಕೆಯಲ್ಲಿದ್ದು, ಶಿವಾನಿ ಮತ್ತು ಗೌರಿ ಎರಡೂ ಜಿರಾಫೆಗಳು ಪ್ರವಾಸಿಗರ ವೀಕ್ಷಣೆಗೆ ಸಿಗಲಿವೆ

ಹಂಪಿ ಉತ್ಸವದಲ್ಲಿ ಕುಸ್ತಿ ಸ್ಪರ್ಧೆ, ಬೆಳಗಾವಿಯ ಮುಸ್ಲಿಕ್ ಆಲಂ ರಾಜಾಸಾಬ್‌ಗೆ ಮೊದಲ ಬಹುಮಾನ