ನೀವು ಗೊರಕೆ ಹೊಡಿತಿರಾ, ಇದರಿಂದ ನಿಮ್ಮ ಪಕ್ಕ ಮಲಗೋರಿಗೆ ಕಿರಿಕಿರಿ ಆಗುತ್ತಾ?
ಹಾಗದ್ರೆ ಗೊರಕೆ ಅಂದರೇನು, ಮತ್ತು ಗೊರಕೆ ಅನ್ನೋ ಸಮಸ್ಯೆ ಮನುಷ್ಯನ ಹತ್ರ ಬರೋದಕ್ಕೆ ಕಾರಣವೇನು ಅಂತ ತಿಳಿದುಕೊಳ್ಳೋಣ
ಗೊರಕೆ ಹೇಗೆ ಬರುತ್ತದೆ ಅಂದರೆ ನಿದ್ರೆಯ ಸಮಯದಲ್ಲಿ ಬಾಯಿ ಮತ್ತು ಮೂಗಿನ ನಡುವಿನ ಶ್ವಾಸನಾಳದ ಅಡಚಣೆಯಿಂದಾಗಿ ಗೊರಕೆ ಶಬ್ಧ ಬರುತ್ತದೆ
ನಮ್ಮ ಗಂಟಲಿನ ರಚನೆಯು ಗೊರಕೆಗೆ ಕಾರಣವಾಗಬಹುದು. ಉದಾಹರಣೆಗೆ, ಗೊರಕೆಯು ಚಿಕ್ಕ ಕುತ್ತಿಗೆ ಮತ್ತು ದಪ್ಪ ಚರ್ಮದಿಂದ ಅಥವಾ ಒಳಗಿನ ನಾಲಿಗೆಯ ಬೆಳವಣಿಗೆಯಿಂದ ಉಂಟಾಗುತ್ತದೆ
ಇದು ಕಟ್ಲೆಟ್-ವಡೆಯಲ್ಲ, ಶ್ಯಾವಿಗೆಯಲ್ಲಿ ಮಾಡೋ ಸ್ಪೆಷಲ್ ಸ್ನ್ಯಾಕ್ಸ್; ರುಚಿಕೆ ಮರುಳಾಗ್ತೀರಿ!
ಬೊಜ್ಜು ಇರುವವರು ಹೆಚ್ಚಾಗಿ ಗೊರಕೆ ಹೊಡೆಯುತ್ತಾರೆ ಅದರೆ ಚೆನ್ನಾಗಿ ನಿದ್ರೆ ಮಾಡುತ್ತಾರೆ ಎಂದು ನಾವು ಅಂದುಕೊಳ್ಳುತ್ತೇವೆ
ಇದು ತಪ್ಪು ಕಲ್ಪನೆ. ಕುತ್ತಿಗೆ ಮತ್ತು ಧ್ವನಿಪೆಟ್ಟಿಗೆಯ ಪ್ರದೇಶದ ಸುತ್ತಲಿನ ಅತಿಯಾದ ಸ್ನಾಯುಗಳು ಗೊರಕೆಗೆ ಕಾರಣವಾಗಬಹುದು
ಆಲ್ಕೋಹಾಲ್ ಸೇವನೆಯು ಯಕೃತ್ತು ಮತ್ತು ಮೂತ್ರಪಿಂಡಗಳಂತಹ ಪ್ರಮುಖ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ
ಆದರೆ ಇದು ಗೊರಕೆಗೂ ಕಾರಣವಾಗಬಹುದು ಎಂಬುದು ಅನೇಕ ಮಂದಿಗೆ ತಿಳಿದಿಲ್ಲ
ಧೂಮಪಾನವು ಮೂಗು ಮತ್ತು ಗಂಟಲಿನ ಸ್ನಾಯುಗಳನ್ನು ಕಿರಿಕಿರಿಗೊಳಿಸುತ್ತದೆ
ಇದು ಊತ ಮತ್ತು ಉಸಿರಾಟದ ತೊಂದರೆಯನ್ನು ಮತ್ತು ಗೊರಕೆಯ ತೊಂದರೆಯನ್ನು ಉಂಟುಮಾಡುತ್ತದೆ
ನೀವು ತೆಗೆದುಕೊಳ್ಳುವ ಕೆಲವು ಔಷಧಿಗಳು ಗೊರಕೆಗೆ ಕಾರಣವಾಗಬಹುದು. ಉದಾಹರಣೆಗೆ, ನಿದ್ರಾಜನಕ ಔಷದಿಗಳು
ನಿಮಗೆ ಸರಿಯಾಗಿ ನಿದ್ರೆ ಬರದಿದ್ದರೆ ಗೊರಕೆಯ ಸಮಸ್ಯೆ ಉಂಟಾಗಬಹುದು. ದಿನಕ್ಕೆ 8 ಗಂಟೆಯಿಂದ 9 ಗಂಟೆಗಳ ಕಾಲ ನಿದ್ರೆ ಮಾಡುವುದು ಅವಶ್ಯಕ
ಈ ರಾಶಿಯವರು ತಮ್ಮ ಸಂಗಾತಿಯನ್ನ ಮನಸಾರೆ ಪ್ರೀತಿಸ್ತಾರಂತೆ!