ನಟಿ ಜಾಕ್ವೆಲಿನ್ ಫರ್ನಾಂಡಿಸ್ ಮನೆಗೆ ಬೆಂಕಿ!

ನಟಿ ಜಾಕ್ವೆಲಿನ್ ಕಟ್ಟಡದ ಮೇಲಿನ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ನಟಿ ಜಾಕ್ವೆಲಿನ್ ಹೇಗಿದ್ದಾರೆ ಎಂದು ಫ್ಯಾನ್ಸ್ ಆತಂಕ ಹೊರ ಹಾಕಿದ್ದಾರೆ.

ಮುಂಬೈನಲ್ಲಿರುವ ಜಾಕ್ವೆಲಿನ್ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ಹೊತ್ತಿ ಉರಿಯುತ್ತಿದೆ.

ಈ ಕಟ್ಟಡದ 15ನೇ ಮಹಡಿಯಲ್ಲಿ ಜಾಕ್ವೆಲಿನ್ ವಾಸವಾಗಿದ್ದಾರೆ. 14ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಈ ಘಟನೆ ನಡೆದಾಗ ಜಾಕ್ವೆಲಿನ್ ಕೆಲಸದ ನಿಮಿತ್ತ ದುಬೈಗೆ ಹೋಗಿದ್ದರು ಎಂಬ ಮಾಹಿತಿಯೂ ಹೊರಬಿದ್ದಿದೆ.

ಆದರೆ ನಟಿ ಸುರಕ್ಷಿತವಾಗಿರಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

ನಟಿಯ ಅಕ್ಕ-ಪಕ್ಕದ ಮನೆಯಲ್ಲಿ ರಣಬೀರ್ ಕಪೂರ್, ಕರೀನಾ ಕಪೂರ್ ಸೇರಿದಂತೆ ನಟ-ನಟಿಯರಿದ್ದಾರೆ.

ಜಾಕ್ವೆಲಿನ್ ಇತ್ತೀಚಿಗೆ ಅಕ್ಷಯ್ ಕುಮಾರ್ ಅಭಿನಯದ ‘ಸೆಲ್ಫಿ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

ಅಮ್ಮ ಶ್ರೀದೇವಿಯಂತೆಯೇ ಸೌತ್ ಚೆಲುವೆಯಾಗಿ ಬದಲಾಗ್ತಿದ್ದಾರೆ ಈ ಬಾಲಿವುಡ್ ಗೊಂಬೆ