ದೇಹದ ಈ ಭಾಗದಲ್ಲಿ ಮಚ್ಚೆ ಇದ್ರೆ ಕೋಟ್ಯಾಧಿಪತಿಗಳಾಗುವ ಚಾನ್ಸ್ ಜಾಸ್ತಿ ಅಂತೆ

ಸಾಮಾನ್ಯವಾಗಿ ಎಲ್ಲರ ದೇಹದ ಭಾಗಗಲ್ಲಿ ಮಚ್ಚೆ ಇರುತ್ತದೆ.

ಕೆಲವೊಂದು ದೇಹದ ಭಾಗದಲ್ಲಿ ಇರುವ ಮಚ್ಚೆ ಅದೃಷ್ಟದ ಸಂಕೇತವಾಗಿದೆ.

ಶಾಸ್ತ್ರದ ಪ್ರಕಾರ ಕೆಲವೊಂದು ಭಾಗದಲ್ಲಿ ಇರುವ ಮಚ್ಚೆ ನಮಗೆ ಹಣಕಾಸಿನ ಲಾಭವನ್ನ ನೀಡುತ್ತದೆ.

ಹಣೆಯ ಮೇಲೆ ಮಚ್ಚೆ ಇದ್ದರೆ ನೀವು ಆತ್ಮವಿಶ್ವಾಸ ಮತ್ತು ಜೀವನದಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತೀರಿ.

ಮುಖದ ಬಲಭಾಗದಲ್ಲಿರುವ ಮಚ್ಚೆ ಸಂಪತ್ತು ಮತ್ತು ಬುದ್ಧಿವಂತಿಕೆಯ ಸಂಕೇತವಾಗಿದೆ.

ಮುಖದ ಎಡಭಾಗದಲ್ಲಿ ಮಚ್ಚೆ ಇದ್ದರೆ ನೆಮ್ಮದಿ ಇರುವುದಿಲ್ಲ ಹಾಗೂ ಹಣಕಾಸಿನ ಸಮಸ್ಯೆಗಳು ಉಂಟಾಗುತ್ತದೆ.

ಮಹಿಳೆಯರ ಕುತ್ತಿಗೆಯ ಮೇಲೆ ಮಚ್ಚೆ ಇದ್ದರೆ ತಾಳ್ಮೆ ಮತ್ತು ಬುದ್ಧಿವಂತಿಕೆಯನ್ನು ಹೊಂದಿರುತ್ತಾರೆ.

ಮಹಿಳೆಯರ ಸೊಂಟದ ಮೇಲೆ ಇರುವ ಮಚ್ಚೆ ಸಂಪತ್ತು ಮತ್ತು ಸಮೃದ್ಧಿಯ ಸಂಕೇತವಾಗಿದೆ.

ಹುಬ್ಬುಗಳ ನಡುವೆ ಮಚ್ಚೆ ಇರುವ ಹೆಣ್ಣುಮಕ್ಕಳು ಅತ್ಯಂತ ಅದೃಷ್ಟವಂತರು ಎನ್ನಲಾಗುತ್ತದೆ.