ರಾಜಕಾರಣಿಗಳು ಹಣಕಾಸಿನ ಅನುದಾನ ಘೋಷಣೆ ಮಾಡುವಂತಿಲ್ಲ.

ಯಾವುದೇ ರೀತಿಯ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡುವಂತಿಲ್ಲ.

ಪ್ರಚಾರದ ಉದ್ದೇಶಗಳಿಗಾಗಿ ಮಂತ್ರಿಗಳು ಅಧಿಕೃತ ಯಂತ್ರೋಪಕರಣಗಳನ್ನು ಬಳಸುವಂತಿಲ್ಲ.

ಅಧಿಕಾರದಲ್ಲಿರುವ ಪಕ್ಷದ ಪರವಾಗಿ ಮತದಾರರ ಮೇಲೆ ಪ್ರಭಾವ ಬೀರುವ ಯಾವುದೇ ಯೋಜನೆಯನ್ನು ಘೋಷಿಸುವಂತಿಲ್ಲ.

ಸರ್ಕಾರಿ ವಸತಿಗಳನ್ನು ಚುನಾವಣಾ ಪ್ರಚಾರ ಕಚೇರಿಗಳಾಗಿ ಬಳಸಿಕೊಳ್ಳುವಂತಿಲ್ಲ.

ಯಾವುದೇ ಪಕ್ಷದಿಂದ ಚುನಾವಣಾ ಪ್ರಚಾರಕ್ಕಾಗಿ ಸಾರ್ವಜನಿಕ ಸಭೆಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ.

ಭಾರತದಲ್ಲಿ ಒಟ್ಟು 543 ಲೋಕಸಭಾ ಕ್ಷೇತ್ರಗಳಿಗೆ 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ. 

ಏಪ್ರಿಲ್ 19ರಿಂದ ಮತದಾನ ಆರಂಭವಾಗಲಿದ್ದು, ಜೂನ್ 1ಕ್ಕೆ ಮುಕ್ತಾಯಗೊಳ್ಳಲಿದೆ.

ಜೂನ್ 4, 2024ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

ಕರ್ನಾಟಕದಲ್ಲಿ 2 ಹಂತದಲ್ಲಿ ಚುನಾವಣೆ- ಏಪ್ರಿಲ್ 26 ರಂದು ಮೊದಲ ಹಂತ & ಮೇ 7 ರಂದು 2ನೇ ಹಂತ