ಇದು ಸಕ್ಕರೆ ನಾಡು ಮಂಡ್ಯದ ಇತಿಹಾಸ ಪ್ರಸಿದ್ದ ದೇವಸ್ಥಾನ

ಇಲ್ಲಿರೋದು ಬಂಜೆ ಎಂದುಕೊಂಡವರ ಆರಾಧ್ಯ ದೈವ

ಆತನಲ್ಲಿ ಮಕ್ಕಳು ಬೇಕು ಎಂದು ಬೇಡಿದ್ರೆ, ಮಕ್ಕಳು  ಆಗುತ್ತವೆ ಎಂಬ ನಂಬಿಕೆ ಇದೆ

ಎಷ್ಟೇ ವೈದ್ಯರನ್ಮ ಸಂಪರ್ಕಿಸಿದ್ರು ಮಕ್ಕಳು ಮಾತ್ರ ಆಗ್ತಿಲ್ಲ ಅಂತ ಅದೆಷ್ಟೋ ಜನ ಇಲ್ಲಿ ಬಂದು ಕಣ್ಣೀರು ಹಾಕ್ತಿದ್ದಾರೆ

Vande Bharat Express Train: ಬೆಂಗಳೂರು-ವಿಜಯಪುರ ವಂದೇ ಭಾರತ್ ರೈಲಿನ ಕುರಿತು ಮಹತ್ವದ ಅಪ್‌ಡೇಟ್

ಅಂತವ್ರು ಈ ಸ್ಟೋರಿಯನ್ನ ಒಮ್ಮೆ ನೋಡಲೇ ಬೇಕಿದೆ

ಮಂಡ್ಯ ನಗರದ ಹೋಲ್ಡ್ ಟೌನ್‍ನಲ್ಲಿರುವ ಲಕ್ಷ್ಮಿ ಜನಾರ್ಧನ ಸ್ವಾಮಿ ದೇವಸ್ಥಾನ ಇತಿಹಾಸ ಪ್ರಸಿದ್ದ ದೇವಸ್ಥಾನವಾಗಿದೆ

ಮಕ್ಕಳಾಗದವ್ರು ಇಲ್ಲಿ ಬಂದು ಬೇಡಿದ್ರೆ ಮಕ್ಕಳಾಗತ್ತೆ ಅನ್ನುವ ಪ್ರತೀತಿ ಇದೆ

 ಹೀಗಾಗಿ ಈ ದೇವರನ್ನ ಮಕ್ಕಳ ಜರ್ನಾಧನ ಎಂದು ಕೂಡ ಕರೆಯುತ್ತಾರೆ

Mylara Lingeshwara Karnika: ಈ ವರ್ಷ ರೈತರಿಗೆ ಒಳ್ಳೆಯದಾಗುತ್ತದೆ, ಮೈಲಾರ ಲಿಂಗೇಶ್ವರ ಕಾರ್ಣಿಕ ನುಡಿ

ಇನ್ನು ಈ ದೇವಾಲಕ್ಕೆ ಇತಿಹಾಸ ಕೂಡ ಇದೆ. ಹಿಂದೆ ಗಂಗರ ಕಾಲದಲ್ಲಿ ಈ ಪ್ರಾಂತ್ಯವನ್ನ ಇಂದ್ರ ವರ್ಮ ಎಂಬ ರಾಜ ಆಳ್ವಿಕೆ ನಡೆಸ್ತಿದ್ದ

ಈ ವೇಳೆ ಇಂದ್ರ ವರ್ಮನಿಗೆ ಮಕ್ಕಳಾಗದ ಹಿನ್ನೆಲೆ ಸಾಕಷ್ಟು ನೊಂದಿದ್ದ

ಈ ವೇಳೆ ಋಷಿಮುನಿಗಳ ಮಾತಿನಂತೆ ಲಕ್ಷ್ಮಿ ಜನಾರ್ಧನನ್ನ ಪ್ರತಿಷ್ಠಾಪಿಸಿ ಪೂಜೆಸಿದ ಬಳಿಕ ಆತನ ಪತ್ನಿಗೆ ಸಂತಾನ ಭಾಗ್ಯ ಪ್ರಾಪ್ತಿಯಾಯ್ತು ಎಂಬ ಪ್ರತೀತಿ ಇದೆ

ಹೀಗಾಗಿ ಇಲ್ಲಿನ ದೇವ್ರು ಪ್ರಸಿದ್ಧಿಯನ್ನ ಪಡೆದಿದ್ದು, ಮಕ್ಕಳಾಗದ ಅನೇಕರು ಇಲ್ಲಿಗೆ ಭೇಟಿ ನೀಡಿ ದೇವರಲ್ಲಿ ಪ್ರಾರ್ಥಿಸುತ್ತಾರೆ