ನಾವು ಅನೇಕ ವಸ್ತುಗಳನ್ನ ಆಗಾಗ ಕಳೆದುಕೊಳ್ಳುತ್ತೇವೆ. ಅದರಿಂದ ನಮಗೆ ಬೇಸರವಾಗುತ್ತದೆ.

ಆದರೆ ಯಾವಾಗ ಅಮೂಲ್ಯವಾದ ಬಂಗಾರ ಕಳೆದು ಹೋಗುತ್ತದೆಯೋ ಆಗ ತುಂಬಾ ನೋವಾಗುತ್ತದೆ.

ಜ್ಯೋತಿಷ್ಯದ ಪ್ರಕಾರ ಈ ರೀತಿ ಬಂಗಾರ ಕಳೆಯುವುದರ ಹಿಂದೆ ಅನೇಕ ಅರ್ಥಗಳಿದೆ.

ಚಿನ್ನವನ್ನು ಕಳೆದುಕೊಂಡ್ರೆ ಧಾರ್ಮಿಕ ಗ್ರಂಥಗಳ ಪ್ರಕಾರ, ಅದನ್ನು ಕೆಟ್ಟ ಶಕುನವೆಂದು ಪರಿಗಣಿಸಲಾಗುತ್ತದೆ.

ಜ್ಯೋತಿಷ್ಯದ ಪ್ರಕಾರ ಬಂಗಾರ ಕಳೆದು ಹೋದರೆ ಅಶುಭ ಫಲಗಳನ್ನ ಅನುಭವಿಸಬೇಕಾಗುತ್ತದೆ.

ನಿಮ್ಮ ಚಿನ್ನದ ಉಂಗುರವು ಎಲ್ಲಿಯಾದರೂ ಕಳೆದು ಕೊಂಡರೆ ಅದರಿಂದ ಬಹಳ ಸಮಸ್ಯೆಗಳಾಗುತ್ತದೆ.

ಚಿನ್ನದ ಉಂಗುರಗಳನ್ನು ನೀವು ಕಳೆದುಕೊಂಡರೆ, ನೀವು ಆರೋಗ್ಯ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಇದೆ ಎಂದರ್ಥ.

ನೀವು ಮೂಗು ಅಥವಾ ಕಿವಿಯ ಆಭರಣಗಳನ್ನು ಕಳೆದುಕೊಳ್ಳುವುದು ಸಹ ಒಳ್ಳೆಯ ಸಂಕೇತವಲ್ಲ ಎನ್ನಲಾಗುತ್ತದೆ.

ಜ್ಯೋತಿಷ್ಯದ ಪ್ರಕಾರ ಸರ ಕಳೆದು ಹೋದರೆ ನಿಮ್ಮ ಸಂಪತ್ತು ಸಹ ಕಡಿಮೆ ಆಗುತ್ತದೆ ಎಂದು ಅರ್ಥ.

ಕಾಲುಂಗುರ ಕಳೆದುಕೊಂಡರೆ ಅದು ಸಾಮಾಜಿಕ ಪ್ರತಿಷ್ಠೆ ಕಡಿಮೆ ಆಗುವ ಸೂಚನೆಯಾಗಿದೆ.