ಕಬ್ಬಿಣದ ನಟ್‌ಗಳಿಂದ ಒಂದೂವರೆ ಲಕ್ಷ ರೂಪಾಯಿಯಲ್ಲಿ ರಚನೆಯಾದ ಅಪ್ಪು ಪ್ರತಿಮೆ!

ಪುನೀತ್‌ ರಾಜ್‌ಕುಮಾರ್‌ ಅವರ ಕಬ್ಬಿಣದ ನಟ್‌ ಪ್ರತಿಮೆಯನ್ನು ಕಲಾವಿದರೊಬ್ಬರು ತಯಾರಿಸಿದ್ದಾರೆ.

ಟಿ. ನರಸೀಪುರದ ಖ್ಯಾತ ಕಲಾವಿದ ಕುಮಾರ್ ಅವರ ಕೈಚಳಕ ದಲ್ಲಿ ರಚನೆಯಾದ ಅಪ್ಪು

ಕಬ್ಬಿಣದ ನಟ್‌ಗಳಿಂದ ದಿವಂಗತ ಪುನೀತ್ ರಾಜ್‌ಕುಮಾರ್ ಅವರ ಪ್ರತಿಮೆಯನ್ನು ತಯಾರಿಸಿದ್ದಾರೆ.

ಆಕರ್ಷಕವಾಗಿ ಮೂಡಿ ಬಂದಿರುವ ಈ ಪ್ರತಿಮೆ ಪುನೀತ್‌ ಅವರನ್ನೇ ನೋಡಿದಂತಹ ಅನುಭವ ನೀಡುತ್ತದೆ.

ಈ ಪ್ರತಿಮೆಯನ್ನು ನಂಜನಗೂಡಿನ ಕಡಕೋಳದ ಉದ್ಯಮಿಯೋರ್ವರು ನೀಡಿದ್ದ ಆರ್ಡರ್‌ ಅನ್ವಯ ತಯಾರಿಸಲಾಗಿದೆ.

ಈ ಪ್ರತಿಮೆಯನ್ನು ಐರನ್ ನಟ್ ಹಾಗೂ ಎಸ್‌ಎಸ್‌ ನಟ್‌ನಿಂದ ತಯಾರಿ ಮಾಡಲಾಗಿದೆ.

ಈ ಪ್ರತಿಮೆಗೆ ಕುಮಾರ್‌ ಅವರು ಒಂದು ತಿಂಗಳ ಕಾಲಾವಕಾಶ ಪಡೆದಿದ್ದರು.

35 ಕೆಜಿ ಮೇಣ ಈ ಪ್ರತಿಮೆಗೆ ನೀಡಲಾಗಿದೆ. 5 ಕೆಜಿ ಎಸ್‌ಎಸ್‌ ನಟ್‌ ಹಾಗೂ 50 ಕೆಜಿ ಐರನ್ ನಟ್ ಬಳಸಿದ್ದಾರೆ.

ಈ ಪ್ರತಿಮೆ ಮಾಡಲು ಸುಮಾರು ಒಂದು ಲಕ್ಷ 40 ಸಾವಿರ ಖರ್ಚು ಮಾಡಲಾಗಿದೆ.