ಯಾಣದಲ್ಲಿ ವೈಫೈ 7 ವ್ಯವಸ್ಥೆ, ಪ್ರವಾಸಿಗರಿಗೆ ಅನುಕೂಲ!

ದೇಶದಲ್ಲಿಯೇ ಮೊಟ್ಟ ಮೊದಲ ವೈಫೈ 7 ವ್ಯವಸ್ಥೆ ಎಲ್ಲಿದೆ ಗೊತ್ತಾ?

ಉತ್ತರ ಕನ್ನಡ ಜಿಲ್ಲೆಯ ಯಾಣದಲ್ಲಿ ಈಗ ವೈಫೈ 7 ಸೇವೆ ಲಭ್ಯವಿದೆ.

ವೈಫೈ 7 ಎನ್ನುವುದು 320 mhz ನಷ್ಟು ಹೈ ಕೆಪ್ಯಾಸಿಟಿ ಹೊಂದಿರುವ ಸಂಪರ್ಕ ವ್ಯವಸ್ಥೆ.

ನಾವು ಬಳಸುವ ಇಂಟರ್ನೆಟ್‍ಗಿಂತ ದುಪ್ಪಟ್ಟು ಸ್ಪೀಡಿನ ವ್ಯವಸ್ಥೆ ಇದು ಬೇರೆ ದೇಶಗಳಲ್ಲಿ ಬಳಕೆ ಇದೆ.

ವೈಫೈ 7ನ್ನು ಯಾಣದಲ್ಲಿ ಬರುವ ಭಕ್ತಾದಿಗಳಿಗೆ ಅನುಕೂಲವಾಗಲಿ ಎಂದು ಅಳವಡಿಸಲಾಗಿದೆ.

ಈ ಹಿಂದೆ ಯಾಣದ ದಟ್ಟ ಅಡವಿಯಲ್ಲಿ ಮೊಬೈಲ್ ನೆಟ್ವರ್ಕ್ ಇಲ್ಲದೇ ಜನ ಒದ್ದಾಡಬೇಕಿತ್ತು.

ಮೊದಲು ಸ್ಕ್ಯಾನ್ ಮಾಡಿದಾಗ ಸ್ವಲ್ಪ ಹೊತ್ತು ಎಂದರೆ 5 ನಿಮಿಷ ಫ್ರೀ ಆಗಿ ಇಂಟರ್ನೆಟ್ ಲಭ್ಯವಿರುತ್ತದೆ.

ನಿಮಗೆ ನೆಟ್ ಬೇಕೆಂದರೆ ಇಂತಿಷ್ಟು ಹಣವನ್ನು ನೀಡಿ ಪ್ಯಾಕೇಜ್ ಖರೀದಿಸಿ 250 ಎಂಬಿ ಹಾಗೂ 500 ಎಂಬಿ ಹೀಗೆ ನೆಟ್ ವ್ಯವಸ್ಥೆ ಪಡೆಯಬಹುದು.

ಈ ವ್ಯವಸ್ಥೆ ಹೊಂದಿರುವ ದೇಶದ ಮೊದಲ ಸ್ಥಳ ಯಾಣವಾಗಿದ್ದು ಇದು ಉತ್ತರ ಕನ್ನಡ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ.