ಕ್ರೈಸ್ತರ ಪಾಲಿಗೆ ಶುಭ ಶುಕ್ರವಾರ ಅನ್ನೋದು ದುಖದ ದಿನವಾಗಿದೆ.

ಕ್ರೈಸ್ತ ಏಸು ಕ್ರಿಸ್ತರು ಶಿಲುಬೆ ಏರಿದ ದಿನವನ್ನು ಕಪ್ಪು ದಿನವೆಂದು ಆಚರಿಸಲಾಗುವ ಹಬ್ಬವೇ ಗುಡ್‌ ಫ್ರೈಡೇ

ಇದನ್ನು ಕಪ್ಪು ಶುಕ್ರವಾರ, ಪವಿತ್ರ ಶುಕ್ರವಾರ, ಶುಭ ಶುಕ್ರವಾರ ಹೀಗೆ ವಿವಿಧ ಹೆಸರುಗಳಿಂದ ಕರೆಯುತ್ತಾರೆ.

ಕ್ರಿಸ್ತ ಸಮುದಾಯದ ಪ್ರಮುಖ ಹಬ್ಬವಾಗಿರುವ ಗುಡ್ ಫ್ರೈಡೆ ದಿನವೂ ಕ್ರಿಶ್ಚಿಯನ್ ದವರ ಭಾವನಾತ್ಮಕ ದಿನ.

ಈ ದಿನದಂದೇ ಯೇಸು ಶಿಲುಬೆಯ ಏರಿದ ದಿನವೆಂದು ಕ್ರಿಸ್ತ ಅನುಯಾಯಿಗಳು ನಂಬುತ್ತಾರೆ.

ಜೆರುಸಲೇಂನಲ್ಲಿ ಯೇಸು ಕ್ರಿಸ್ತರ ವಿರುದ್ಧ ಮೋಸದಿಂದ ಸಂಚು ರೂಪಿಸಿ ಶುಕ್ರವಾರದ ದಿನದಂದು ಏಸುವನ್ನು ಶಿಲುಬೆಗೇರಿಸಲಾಯಿತು.

ಹಾಗಾಗಿ ಕ್ರಿಶ್ಚಿಯನ್ನರು ಈ ಶಿಲುಬೆಗೇರಿಸಿದ ಘಟನೆಯನ್ನು ʼಗುಡ್‌ ಫ್ರೈಡೇʼ ಎಂದು ಕರೆಯುತ್ತಾರೆ.

ಕ್ರಿಸ್ತ ಸಮುದಾಯದವರು 40 ದಿನಗಳ ಉಪವಾಸದ ನಂತರ ಈ ಶುಭ ಶುಕ್ರವಾರವನ್ನು ಆಚರಣೆ ಮಾಡುತ್ತಾರ.

ಈ ಶುಭ ಶುಕ್ರವಾರದ ಸಮಾಪ್ತಿಯು ‘ಪುನರುತ್ಥಾನ ದಿನ’ ಅಥವಾ ಈಸ್ಟರ್‌ ದಿನವಾಗಿದೆ.

ಮಾರ್ಚ್‌ 31 ರಂದು ಈ ಈಸ್ಟರ್‌ ಹಬ್ಬವನ್ನ ಕ್ರೈಸ್ತರು ಜಗತ್ತಿನಾದ್ಯಂತ ಸಂಭ್ರಮದಿಂದ ಆಚರಿಸುತ್ತಾರೆ.