ಎಪ್ರಿಲ್‌ ಮಧ್ಯಕ್ಕೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ

ಸದ್ಯದ ಹವಾಮಾನ ಮ್ಯಾಪ್‌ ಅವಲೋಕನ ಪ್ರಕಾರ, ಎಪ್ರಿಲ್‌ 14 ರಿಂದ ಮಳೆ ಸುರಿಯಲಿದೆ

ದಕ್ಷಿಣ ಕನ್ನಡ ಒಳನಾಡು ಜಿಲ್ಲೆಗಳಾದ ಬೆಂಗಳೂರಿನಲ್ಲಿ 30 ರಿಂದ 40 ಮಿಲಿಮೀಟರ್‌, 

ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ 60 ರಿಂದ 70 ಮಿಲಿಮೀಟರ್‌, ದಕ್ಷಿಣ ಕನ್ನಡ,

ಕೊಡಗು ಹಾಗೂ ಉಡುಪಿಯಲ್ಲಿ 80-90 ಮಿಲಿಮೀಟರ್‌, ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ 10 ರಿಂದ 15 ಮಿಲಿಮೀಟರ್‌ ಮಳೆ ಸುರಿಯುವ ಸಾಧ್ಯತೆ ಇದೆ

ಪ್ರದೇಶವಾರು ನೋಡುವುದಾದರೂ ಕರಾವಳಿ ಭಾಗದಲ್ಲಿ 10 ರಿಂದ 15 ಮಿಲಿಮೀಟರ್‌, 

ಉತ್ತರ ಒಳನಾಡು ಭಾಗದಲ್ಲಿ 10 ರಿಂದ 15 ಹಾಗೂ ದಕ್ಷಿಣ ಒಳನಾಡು 15 ರಿಂದ 25 ಮಿಲಿಮೀಟರ್‌ ಮಳೆಯಾಗುವ ಸಾಧ್ಯತೆ ಇದೆ ಎಂದು ವರದಿಯು ತಿಳಿಸಿದೆ

ಈ ಬಾರಿ ಅತ್ಯಂತ ಸುಡು ಬಿಸಿಲಿನಿಂದ ನಲುಗಿರುವ ಬೆಂಗಳೂರು ಮಹಾನಗರ ಎಪ್ರಿಲ್‌ ಮೂರನೇ ವಾರಕ್ಕೆ ಮಳೆಯನ್ನ ಸ್ವಾಗತಿಸುವ ಲಕ್ಷಣ ಇವೆ

Hassan News: ಹಾಸನದಲ್ಲಿ ಹೆಚ್ಚು ಶುಂಠಿ ಬೆಳೆಯುತ್ತಿರುವ ರೈತರು!

ಅದಾಗ್ಯೂ, ಜಿಎಫ್‌ಎಸ್‌ ಮೋಡೆಲ್‌ ಆಧರಿತ ಈ ಹವಾಮಾನ ವರದಿಯು ಬಹುತೇಕ ನಿಖರವಾಗಿರುವುದಿಲ್ಲ ಎಂದು ಹವಾಮಾನ ತಜ್ಷರೇ ಮಾಹಿತಿ ಹಂಚಿಕೊಂಡಿದ್ದಾರೆ

ಇಷ್ಟರಲ್ಲೇ ಶೇಕಡಾ 50ರಷ್ಟು ಮಳೆ ಸುರಿದರೂ ಜನ ನಿಟ್ಟುಸಿರು ಬಿಡುವುದು ಖಂಡಿತಾ