ತಿರುಪತಿ ತಿಮ್ಮಪ್ಪನನ್ನು ಮನೆ ದೇವರಾಗಿ ಹೊಂದಿರುವ ತುಳುವರ ವಿಶಿಷ್ಟ ಸೇವೆ ಸಲ್ಲಿಸುವುದು ಸಂಪ್ರದಾಯ

ತುಳುನಾಡಿನ ತರವಾಡು ಮನೆಗಳಲ್ಲಿ 3 ಅಥವಾ 5 ವರ್ಷಕ್ಕೊಮ್ಮೆ ನಡೆಯುವ ಈ ವಿಶಿಷ್ಟ ಪೂಜೆಯೇ ಮುಡಿಪು ಸೇವೆ 

ಮತ್ತು ಹರಿಸೇವೆ. ಇಲ್ಲಿರೋ ಹಲವು ಜಾತಿಗಳಿಗೆ ತಿರುಪತಿ ವೆಂಕಟರಮಣ  ದೇವರೇ ಮನೆ ದೇವರಾಗಿದ್ದಾರೆ

ಈ ವೆಂಕಟರಮಣ ಸ್ವಾಮಿ ದೇವರಿಗೆ ನಡೆಯುವ ಈ ಹರಿಸೇವೆ ಮತ್ತು ಮುಡಿಪು ಸೇವೆಗೆ ತನ್ನದೇ ಆದ ಮಹತ್ವ ತುಳುನಾಡಿನಲ್ಲಿದೆ

Gadag News: ಅಯೋಧ್ಯೆಗೆ ಪಾದಯಾತ್ರೆ ಮಾಡಿದ್ದ ಗದಗದ ಗಾಂಧಿಗೆ ಪಾದಪೂಜೆ!

ಈ ಆಚರಣೆ ಪ್ರಯುಕ್ತ ದೈವಗಳಿಗೆ ನೇಮೋತ್ಸವ ನಡೆಯುವುದು ಸಂಪ್ರದಾಯ

ನೇಮೋತ್ಸವಕ್ಕೆ ಮೊದಲು ಕುಟುಂಬದ ಸದಸ್ಯರೆಲ್ಲಾ ವೆಂಕಟರಮಣ ದೇವರ ಹೆಸರಿನಲ್ಲಿ ಮುಡಿಪು (ಹುಂಡಿ) ಮಾಡಿ 

ಅದಕ್ಕೆ ನಾಣ್ಯ ಮತ್ತು ಕರಿಮೆಣಸನ್ನು ಹಾಕುತ್ತಾರೆ. ಹೀಗೆ ಕುಟುಂಬ ಸದಸ್ಯರೆಲ್ಲಾ ಹಾಕಿದ ನಾಣ್ಯ ಮತ್ತು ಕರಿಮೆಣಸು ತುಂಬಿದ ಹುಂಡಿಯನ್ನು ತರವಾಡಿನ ಮನೆಯಲ್ಲಿ ಕಟ್ಟಲಾಗುತ್ತದೆ

ಈ ಮುಡಿಪು ಕಟ್ಟಿ ಐದು ವರ್ಷ ಅಥವಾ ಮೂರು ವರ್ಷ ಕಳೆದ ಬಳಿಕ ತರವಾಡಿನ ಹಿರಿಯರೆಲ್ಲಾ ಸೇರಿ ಮುಡಿಪನ್ನು ತಿರುಪತಿ ವೆಂಕಟರಮಣ ದೇವರಿಗೆ ಅರ್ಪಿಸುತ್ತಾರೆ

Record Temperature: ಸಾಕಪ್ಪಾ ಸಾಕು! ಕರ್ನಾಟಕದಲ್ಲೇ ಅತೀ ಹೆಚ್ಚು ಉಷ್ಣಾಂಶ ಈ ಜಿಲ್ಲೆಯಲ್ಲಿ ದಾಖಲು

ಮುಡಿಪು ಕಟ್ಟುವ ಮೊದಲು ಆಯಾಯ ತರವಾಡಿಗೆ ಸಂಬಂಧಪಟ್ಟ ದಾಸಯ್ಯರನ್ನು ತರವಾಡು ಮನೆಗೆ ಆಹ್ವಾನಿಸಿ ವೆಂಕಟರಮಣ ಸ್ವಾಮಿ ಪೂಜೆ ನೆರವೇರಿಸುತ್ತಾರೆ

ಬಾಳೆ ದಿಂಡನ್ನು ಬಳಸಿ ತಿರುಪತಿ ಕ್ಷೇತ್ರದಂತೆ ಅದರಲ್ಲಿ ಆಕೃತಿಯನ್ನು ಮಾಡಿ ವೆಂಕಟರಮಣ ಸ್ವಾಮಿಗೆ ದಾಸಯ್ಯರ ಮೂಲಕ ಪೂಜೆ ನಡೆಯುತ್ತದೆ

ಇದೇ ಸಂದರ್ಭದಲ್ಲಿ ದರ್ಶನ ನಡೆದ ಬಳಿಕ ಮುಡಿಪು ತುಂಬಿಸುವ ಕಾರ್ಯ ನಡೆಯುತ್ತದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕನಕಮಜಲಿನ ಕುದ್ಕುಳಿ ತರವಾಡು ಮನೆ ಮುಡಿಪು ಸೇವೆಯನ್ನು ಮಾಡುವ ಮನೆಗಳಲ್ಲಿ ಒಂದು

ಅನಾದಿ ಕಾಲದಿಂದಲೂ ಚಾಚೂ ತಪ್ಪದೆ ಈ ಹರಿಸೇವೆಯನ್ನು ಹಳೆಯ ಸಂಪ್ರದಾಯದಂತೆ ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿರುವುದು ವಿಶೇಷವೂ ಆಗಿದೆ