ರಾಮಾಯಣದ ಸನ್ನಿವೇಶ, ಇತ್ತೀಚಿಗೆ ನಡೆದ ವೈರಲ್ ಸುದ್ದಿಗಳು, ಸಖತ್ ಹಿಟ್ ಆದ ಭಾರತೀಯ ಚಿತ್ರಗಳು, 

ಲವ್ ಪ್ರಪೋಸ್ ಮಾಡುತ್ತಿರುವ ಜೋಡಿ ಪ್ರೇಮಿಗಳು, ಬಾಹುಬಲಿಯ ಶಿವಗಾಮಿ ಮತ್ತು ಅಮರೇಂದ್ರ ಬಾಹುಬಲಿ, 

ಕಾಟೇರಾ, ಸಲಾರ್, ಭೂತಗಣ ಅಬ್ಬಬ್ಬಾ ಏನಿದು ಇಷ್ಟೊಂದು ಮಲ್ಟಿವರ್ಸ್ ಗಳು ಮೈದಳೆದಿದ್ದಾವೆ! ಅನ್ನೋ ಆಶ್ಚರ್ಯ ಮೂಡದೇ ಇರದು

ಇದು ಉತ್ತರ ಕನ್ನಡ ಜಿಲ್ಲೆಯ ಅಂಕೊಲಾದ ಬಡಗೇರಿಯ ಯುಗಾದಿ ಹಗರಣದ ದೃಶ್ಯಾವಳಿಗಳು

Bidar Fort: ವೀಕೆಂಡ್‌ ಮಜಾಕ್ಕೆ ಬೀದರ್‌ ಕೋಟೆಗೆ ಬನ್ನಿ; ಇಲ್ಲಿನ ವೈಶಿಷ್ಟ್ಯತೆ ಕಂಡು ಬೆರಗಾಗ್ತೀರ!

ಇದಕ್ಕೆ ನೂರಾರು ವರ್ಷಗಳ ಇತಿಹಾಸವಿದೆ

ನಾಲವತ್ತು ಐವತ್ತು ಕುಟುಂಬಗಳಿರುವ ಬಡಗೇರಿಯಲ್ಲಿ ಪ್ರತೀ ವರ್ಷವೂ ಸಾಯಂಕಾಲದಿಂದ ರಾತ್ರಿವರೆಗೆ ಈ ರೀತಿ ಛದ್ಮವೇಶ ಹಾಕಿಕೊಂಡು ಮೆರವಣಿಗೆ ಹೊರಡುವ ಸಂಪ್ರದಾಯವಿದೆ

ಬೀರದೇವರ ಪ್ರೀತ್ಯರ್ಥವಾಗಿ ಈ ಆಚರಣೆಯನ್ನು ಆಚರಿಸಲಾಗುತ್ತದೆ ಇಲ್ಲಿ ಯಾರೂ ನುರಿತ ಕಲಾವಿದರೋ ಅಥವೋ ನುರಿತ ಮೇಕಪ್ ತಜ್ಞರೋ ಇಲ್ಲ.

ತಮಗೆ ಗೊತ್ತಿದ್ದಷ್ಟರಲ್ಲಿಯೇ ಇಲ್ಲಿನ ಜನರು ವೇಷ ಹಾಕುತ್ತಾರೆ

ಸುಮಾರು ಹದಿನೈದು ದಿನದಿಂದ ಈ ವೇಷಗಳ ತಯಾರಿ ನಡೆಯುತ್ತಿರುತ್ತದೆ ಸ್ವಂತ ಖರ್ಚಿನಲ್ಲಿ, 

ಸ್ವಂತ ಆಸಕ್ತಿಯಲ್ಲಿ ಈ ರೀತಿ ತಮ್ಮ ಆಚರಣೆಗಳನ್ನು ಜೀವಂತ ಇಡುತ್ತಿರುವುದು ಇಲ್ಲಿನ ಬಡ ಜನರ ಶ್ರೀಮಂತ ಕಲಾ ಪ್ರೀತಿಗೆ ಪೂರಕ ನಡಾವಳಿಯಾಗಿದೆ

ಈ ಹಗರಣ ವೀಕ್ಷಿಸಲು ಅಂಕೋಲಾ, ಗೋಕರ್ಣ, ಕುಮಟಾ, ಗೋವಾ, ಕಾರವಾರ, 

ಮಹಾರಾಷ್ಟ್ರದಿಂದ ಜನರೂ ಹಾಗೆಯೇ ನೆಂಟರು ಹಾಗೂ ಇಷ್ಟರು ಕೂಡ ಬರುತ್ತಾರೆ

ಸಮಿತಿಗಳ ಹಂಗಿಲ್ಲದೇ ಸಂಘಗಳ ಹಂಗಿಲ್ಲದೇ ಈ ಜನರು ತಮ್ಮದೇ ಖರ್ಚಿನಲ್ಲಿ ದೇವರ ಪ್ರೀತ್ಯರ್ಥವಾಗಿ ಹೀಗೆ ಆಚರಣೆ ಮಾಡುವುದರಲ್ಲಿ ಎಂತಹ ಸಂಭ್ರಮವಿದೆಯಲ್ಲವೇ?!

Train News: ಮುಂಬೈ-ಹೊಸಪೇಟೆ ರೈಲು ಭಾಗಶಃ ರದ್ದು!