ಹುಟ್ಟು-ಸಾವು ಒಂದೇ ತಿಂಗಳು, ನೋವು-ನಲಿವು ಒಂದೇ ತಿಂಗಳು, ಇದು ರಾಜ್ ವಿಚಾರದಲ್ಲಿ ಮಾತ್ರ ಸಾಧ್ಯ!

ಡಾ. ರಾಜ್‌ಕುಮಾರ್ ಅವರನ್ನ ಅಭಿಮಾನಿಗಳು ಎಂದೂ ಮರೆಯೋದಿಲ್ಲ ನೋಡಿ.

ಬೆಂಗಳೂರಿನ ಕಂಠೀರವ ಸ್ಟುಡಿಯೋ ನಿಜಕ್ಕೂ ಅಭಿಮಾನಿಗಳಿಗೆ ದೇವಸ್ಥಾನವೇ ಆಗಿದೆ.

18 ವರ್ಷದ ಹಿಂದೆ 2006, ಏಪ್ರಿಲ್-12 ರಂದು ರಾಜಕುಮಾರ್ ತಮ್ಮ ಅಭಿಮಾನಿಗಳನ್ನ ಅಗಲಿದ ದಿನಗಿದೆ.

ರಾಜ್‌ಕುಮಾರ್‌ ಒಬ್ರೇ ನೋಡಿ. ಒಂದೇ ತಿಂಗಳು ಹುಟ್ಟುತ್ತಾರೆ. ಅದೇ ತಿಂಗಳು ಇಹಲೋಕ ತ್ಯಜಿಸುತ್ತಾರೆ.

ಇದು ಅಪರೂಪದಲ್ಲಿಯೆ ಅಪರೂಪವೇ ಆಗಿದೆ  ಏಪ್ರಿಲ್-24 ರಂದು ಹುಟ್ಟುಹಬ್ಬ ಬಂದೇ ಬಿಡ್ತಾರೆ.

ಡಾಕ್ಟರ್ ರಾಜ್‌ಕುಮಾರ್ ಅವರು ಅಭಿಮಾನಿಗಳ ಪಾಲಿಗೆ ದೇವರ ಆಗಿದ್ದಾರೆ.

ರಾಜ್‌ಕುಮಾರ್‌ ಅಭಿಮಾನಿಗಳನ್ನ ದೇವರು. ನಿರ್ಮಾಪಕರನ್ನ ಅನ್ನದಾತರು ಅಂತ ಕೂಗಿ ಕೂಗಿ ಹೇಳಿದ್ದರು.

ರಾಜ್ ಕುಮಾರ್ ಅಗಲಿದ 18 ವರ್ಷದ ಬಳಿಕವೂ ಜನ ಸಾಗರೋಪಾದಿಯಲ್ಲಿಯೇ ರಾಜ್ ಸಮಾಧಿಗೆ ಬಂದು ಹೋಗ್ತಿದ್ದಾರೆ.

ಅಷ್ಟು ಪ್ರೀತಿ ಮತ್ತು ಅಭಿಮಾನವನ್ನ ಗಳಿಸಿರ ರಾಜ್‌ ಎಂದೆಂದೂ ಜೀವಂತ

ಡಬಲ್ ರೋಲ್ ಡಬಲ್ ಧಮಾಕಾ; ರಾಜ್ ಡಬಲ್ ರೋಲ್ ಸಿನಿಮಾ ಇಷ್ಟಿವೆ ಗೊತ್ತಾ?