ನೋಡಲು ಚಿಕ್ಕದಾಗಿದ್ರೂ ಹೆಬ್ಬಾವಿಗಿಂತ ಈ ಹಾವೇ ಹೆಚ್ಚು ಡೇಂಜರ್!

ಒಂದೇ ರೀತಿ ಕಾಣುವ ಹಾವುಗಳು ನಮ್ಮನ್ನು ಗೊಂದಲಕ್ಕೆ ದೂಡುವ ಅನೇಕ ಉದಾಹರಣೆಗಳು ಇರುತ್ತವೆ.

ರಸ್ಸೆಲ್ ವೈಪರ್, ಮಂಡಲ ಹಾವು, ಪೈಥಾನ್ ಅಥವಾ ಹೆಬ್ಬಾವು ಸಹ ಹಲವರಿಗೆ ಇಂತಹ ಗೊಂದಲವನ್ನು ಮೂಡಿಸುತ್ತವೆ.

ಇಡೀ ಭಾರತದ ಸುಮಾರು 300 ಕ್ಕೂ ಹೆಚ್ಚು ಜಾತಿಯ ಹಾವುಗಳು ಕಂಡುಬರುತ್ತವೆ.

ರಸ್ಸೆಲ್ಸ್ ವೈಪರ್ ಅನ್ನು ವಿಶ್ವದ ಅತ್ಯಂತ ಅಪಾಯಕಾರಿ ಹಾವುಗಳಲ್ಲಿ ಪರಿಗಣಿಸಲಾಗಿದೆ.

ಈ ಹಾವಿನ ವಿಷವು ಎಷ್ಟು ಅಪಾಯಕಾರಿ ಎಂದರೆ ಅದು ವ್ಯಕ್ತಿಯನ್ನು ಕಚ್ಚಿದರೆ, ಆ ವ್ಯಕ್ತಿಯ ರಕ್ತ ಹೆಪ್ಪುಗಟ್ಟಲು ಪ್ರಾರಂಭಿಸುತ್ತದ.

ಭಾರತದಲ್ಲಿ ಕಂಡುಬರುವ ಹೆಬ್ಬಾವು ಇದು ವಿಶ್ವದ ಎರಡನೇ ಅತಿದೊಡ್ಡ ಹಾವು ಎಂದು ಪರಿಗಣಿಸಲಾಗಿದೆ.

ಹೆಬ್ಬಾವುಗಳಲ್ಲಿ ದೊಡ್ಡದು ರೆಟಿಕ್ಯುಲೇಟೆಡ್ ಪೈಥಾನ್. ಇದು 200 ಕೆಜಿ, 23+ ಅಡಿಗಳಷ್ಟು ಗಾತ್ರ ಹೊಂದಿರುತ್ತದೆ.

ರಸ್ಸೆಲ್ ವೈಪರ್ ಮತ್ತು ಹೆಬ್ಬಾವಿನ ನಡುವಿನ ವ್ಯತ್ಯಾಸದಲ್ಲಿ ಜನರು ಸಾಮಾನ್ಯವಾಗಿ ಮೋಸ ಹೋಗುತ್ತಾರೆ.

ರಸ್ಸೆಲ್ಸ್ ವೈಪರ್ ಗರಿಷ್ಠ ಉದ್ದವು ಸರಿಸುಮಾರು 3.5 ಅಡಿಗಳು, ಆದರೆ ಹೆಬ್ಬಾವಿನ ಗರಿಷ್ಠ ಉದ್ದ 30 ಅಡಿಗಳು.