ದ್ವಾರಕೀಶ್ ಮೊದಲು ಈ ಕೆಲಸ ಮಾಡ್ತಾ ಇದ್ರು!

ದ್ವಾರಕೀಶ್ ಅವರು 19 ಆಗಸ್ಟ್ 1942 ರಂದು ಜನಿಸಿದರು. ಅವರು ಮೈಸೂರಿನ ಇಟ್ಟಿಗೆಗೂಡಿನಲ್ಲಿ ಬೆಳೆದರು 

ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಶಾರದ ವಿಲಾಸ ಮತ್ತು ಬನುಮಯ್ಯ ಅವರ ಶಾಲೆಯಲ್ಲಿ ವ್ಯಸಂಗ ಮಾಡಿದರು

ಮತ್ತು ಅವರು ಸಿಪಿಸಿ ಪಾಲಿಟೆಕ್ನಿಕ್‌ನಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾವನ್ನು ಪಡೆದರು

Dwarakish: ದ್ವಾರಕೀಶ್ ಅಪರೂಪದ ಫೋಟೋಸ್ ಇಲ್ಲಿವೆ ನೋಡಿ

ತನ್ನ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ದ್ವಾರಕೀಶ್ ಮತ್ತು ಅವರ ಸಹೋದರ ಮೈಸೂರಿನ ಗಾಂಧಿ ಚೌಕದಲ್ಲಿ ಆಟೋಮೋಟಿವ್ ಬಿಡಿಭಾಗಗಳ ವ್ಯಾಪಾರವನ್ನು ಪ್ರಾರಂಭಿಸಿದರು

ಆದ್ರೆ ದ್ವಾರಕೀಶ್ ಅವರಿಗೆ ಸಿನಿಮಾದ ಮೇಲೆ ಆಸಕ್ತಿ ಇತ್ತು  

ಈ ಕಾರಣದಿಂದ ಪ್ರಸಿದ್ಧ ಚಲನಚಿತ್ರ ನಿರ್ದೇಶಕ ಹುನುಸೂರು ಕೃಷ್ಣಮೂರ್ತಿ ಅವರನ್ನು ಚಲನಚಿತ್ರಗಳಲ್ಲಿ ನಟಿಸಲು ಅವಕಾಶ ನೀಡುವಂತೆ ಕೇಳುತ್ತಿದ್ದರು

1963 ರಲ್ಲಿ, ಅವರು ವ್ಯಾಪಾರ ಕೆಲಸವನ್ನು ಬಿಟ್ಟು ಮತ್ತು ಚಲನಚಿತ್ರಗಳಲ್ಲಿ ನಟಿಸಲು ನಿರ್ಧರಿಸಿದರು

ದ್ವಾರಕೀಶ್ ತಮ್ಮ ಚಿಕ್ಕಪ್ಪ ಹುಣಸೂರು ಕೃಷ್ಣಮೂರ್ತಿ ನಿರ್ದೇಶನದ "ವೀರ ಸಂಕಲ್ಪ" ಚಿತ್ರದಲ್ಲಿ ರಾಜಕುಮಾರನ ಸಣ್ಣ ಪಾತ್ರ ಮಾಡಿ ಚಲನಚಿತ್ರ ಪ್ರಯಾಣವನ್ನು ಶುರು ಮಾಡಿದ್ರು

ಅಲ್ಲಿಂದ ಶುರುವಾದ ಪಯಣ 100ಕ್ಕೂ ಹೆಚ್ಚು ಸಿನಿಮಾ, ನಟಕಗಳನ್ನು ಮಾಡುವ ಅವಕಾಶ ದೊರಕಿಸಿ ಕೊಟ್ಟಿತು

ದ್ವಾರಕೀಶ್ ಅವರು 2024 ರ ಏಪ್ರಿಲ್ 16 ರಂದು ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು

Dwarakish: ದ್ವಾರಕೀಶ್ ಯುಗಾಂತ್ಯ! ಸೋಲಿಗೆ ಹೆದರದ ಕನ್ನಡದ ಕುಳ್ಳ