ಕುಟುಂಬದವರ ಜೊತೆಗೆ ಬೇಸಿಗೆಯ ರಜೆಯನ್ನು ಇನ್ನಷ್ಟು ಮಜವಾಗಿ ಕಳೆಯಲು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆ ಅವಕಾಶ ಕಲ್ಪಿಸಿದೆ

ಪ್ರವಾಸಿಗರಿಗೆ ಕೈಗೆಟುಕುವ ಬೆಲೆಯಲ್ಲಿ ಪಾಂಡಿಚೇರಿಯಲ್ಲಿರುವ ಪ್ರವಾಸಿ ತಾಣಗಳನ್ನು ನೋಡಿಕೊಂಡು ಬರಬಹುದಾಗಿದೆ

ಏಕಾಂಗಿಯಾಗಿ ಇರುವವರು, ಕುಟುಂಬ ಸಮೇತರಾಗಿ ತೆರಳುವವರು ಎಲ್ಲರೂ ಕೂಡ ಈ ಪ್ಯಾಕೇಜ್ ಅಡಿಯಲ್ಲಿ ಆರಾಮಾಗಿ ಕಾಲಕಳೆದುಕೊಂಡು ಬರಬಹುದಾಗಿದೆ

ಬೆಂಗಳೂರು ನಗರದ ಯಶವಂತಪುರ ಬಿಎಂಟಿಸಿ ಬಸ್ ನಿಲ್ದಾಣದಲ್ಲಿರುವ ಕೆಎಸ್‌ಟಿಡಿಸಿ ಕಚೇರಿ ಬಳಿಯಿಂದ ರಾತ್ರಿ 10 ಗಂಟೆಗೆ ಬಸ್ ಹೊರಡಲಿದೆ

ಪ್ರತಿ ಶುಕ್ರವಾರ ಪಾಂಡಿಚೇರಿ ಪ್ರವಾಸ ಹೊರಡಲಾಗುತ್ತದೆ

ಓರ್ವ ವ್ಯಕ್ತಿ ಪ್ರಯಾಣವನ್ನು ಕೈಗೊಂಡಿದ್ದರೆ 4,950 ರೂಪಾಯಿ ವೆಚ್ಚ ಕಟ್ಟಬೇಕಾಗಿದೆ

ಅದೇ ಇಬ್ಬರು ವ್ಯಕ್ತಿಗಳು ಪ್ರವಾಸ ಕೈಗೊಂಡರೆ ಓರ್ವ ವ್ಯಕ್ತಿ 3625 ರೂಪಾಯಿ ಪಾವತಿ ಮಾಡಬೇಕಾಗುತ್ತದೆ

ಮೂರರಿಂದ ನಾಲ್ಕು ಜನರು ತೆರಳಿದರೆ ಕಡಿಮೆ ವೆಚ್ಚ ತಗುಲಲಿದ್ದು ಒಬ್ಬರಿಗೆ 3250 ರೂಪಾಯಿ ಹಣ ನೀಡಬೇಕಾಗುತ್ತದೆ

 ಬೆಂಗಳೂರಿನಿಂದ ರಾತ್ರಿ ಹೊರಟು ಬೆಳಗ್ಗೆ ಐದು ಗಂಟೆಗೆ ಬಸ್ ಪಾಂಡಿಚೇರಿ ತಲುಪಲಿದೆ

ಪಾಂಡಿಚೇರಿ ಪ್ರವಾಸ ಕೈಗೊಂಡ ಪ್ರವಾಸಿಗರಿಗೆ ವಸತಿ ಊಟದ ವ್ಯವಸ್ಥೆ ಮಾಡಲಾಗುತ್ತದೆ

ಬೆಳಗ್ಗೆ ಹೋಟೆಲ್ಗೆ ತಲುಪಿದ ಕೂಡಲೇ ಫ್ರೆಶ್ ಆಗಿ ತಿಂಡಿ ತಿಂದು ,

ಬೆಳಗ್ಗೆ ಏಳೂವರೆಗೆ ಹೋಟೆಲ್‌ನಿಂದ ಹೊರಟರೆ ಮೊದಲಿಗೆ ಮನುಕುಲ ವಿನಾಯಕನ ದೇವಸ್ಥಾನಕ್ಕೆ ಕರೆದುಕೊಂಡು ಹೋಗಲಾಗುತ್ತದೆ

ನಂತರ ಅರಬಿಂದೋ ಆಶ್ರಮ, ಪೋರ್ಮೆನೇಡ್ ಬೀಚ್ ವಾಕ್, ಭಾರತಿ ಪಾರ್ಕ್, ಆರೋವಿಲ್ಲೆ, ಪಾಂಡಿಚೇರಿ ಮ್ಯೂಸಿಯಂ, 

ಪ್ಯಾರಡೈಸ್ ಬೀಚ್‌ಗೆ ಗೆ ಭೇಟಿ ನೀಡಿ ಅಲ್ಲಿಂದ ಸಂಜೆ 06:30 ಕ್ಕೆ ಪುದುಚೇರಿಯ ಹೋಟೆಲ್‌ನಲ್ಲಿ ರಾತ್ರಿ ವಾಸ್ತವ್ಯ ಮಾಡಿಸಲಾಗುತ್ತದೆ

ಅತ್ಯುತ್ತಮ ದರದಲ್ಲಿ ಸುಲಭವಾಗಿ ಪಾಂಡಿಚೇರಿ ಪ್ರವಾಸ ಮಾಡಲು ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿಯಮಿತ ಅವಕಾಶ ಕಲ್ಪಿಸಿದೆ

Karnataka Rains: ದಾವಣಗೆರೆ, ಕೊಪ್ಪಳದಲ್ಲಿ ಗಾಳಿ-ಗುಡುಗು ಸಹಿತ ಭರ್ಜರಿ ಮಳೆ, ಇನ್ನೆಷ್ಟು ದಿನ ಇರುತ್ತೆ ವರುಣ ಅಬ್ಬರ?