ನಟಿ ಮಾನ್ವಿತಾ ಮದುವೆ ಆಗ್ತಿರುವ ಹುಡುಗ ಯಾರು ಗೊತ್ತಾ?

ಸ್ಯಾಂಡಲ್‌ವುಡ್‌ನ ಟಗರು ಪುಟ್ಟಿ ಮಾನ್ವಿತಾ ಕಾಮತ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಮೈಸೂರು ಮೂಲದ ಅರುಣ್ ಜೊತೆಗೆ ಇದೇ ಮೇ-1 ರಂದು ವಿವಾಹ ಆಗುತ್ತಿದ್ದಾರೆ.

ಮದುವೆಯ ಆಮಂತ್ರಣ ಪತ್ರಿಕೆಯನ್ನ ಮಾನ್ವಿತಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇದರೊಟ್ಟಿಗೆ ಮಾನ್ವಿತಾ ಕಾಮತ್ ಒಂದು ಸುಂದರ ಲೈನ್ ಕೂಡ ಬರೆದಿದ್ದಾರೆ.

ಅದು ಇಂತಿದೆ ಓದಿ. " When two artistic souls unite, magic happens? "

ಮಾನ್ವಿತಾ ಕಾಮತ್ ಮದ್ವೆ ಆಗ್ತಿರೋ ಹುಡುಗ ಅರುಣ್ ಮೈಸೂರು ಮೂಲದವರೇ ಆಗಿದ್ದಾರೆ.

ಇದೇ ತಿಂಗಳ ಏಪ್ರಿಲ್ 30 ರಂದು ಅರಿಶಿನ ಶಾಸ್ತ್ರ ಇರುತ್ತದೆ. ಮೇ-1 ರಂದು ಮದುವೆ ನೆರವೇರಲಿದೆ.

ಮಾನ್ವಿತಾ ಕಾಮತ್ ಕೆಂಡಸಂಪಿಗೆ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು.

ಸೂರಿ ಅವರ ಟಗರು ಚಿತ್ರ ಈ ನಟಿಗೆ ಮತ್ತಷ್ಟು ಹೆಸರು ತಂದು ಕೊಡ್ತು.

ಮತ್ತೊಂದು ದಾಖಲೆ ಬರೆದ ಬಾಲಿವುಡ್ ಬ್ಯೂಟಿ ಆಲಿಯಾ ಭಟ್​!